War: ಯುದ್ಧದಲ್ಲಿ ಯೋಧರ ಸಾವು, ನೋವು: ಇವರಿಗೆ ಮೋಜು ಮಸ್ತಿ!

ಯೋಧರು ತಮ್ಮ ಜೀವ ಲೆಕ್ಕಿಸದೆ ದೇಶಕ್ಕಾಗಿ ಪ್ರಾಣವನ್ನೇ ನೀಡುತ್ತಾರೆ. ದೇಶದ ಜನರಿಗಾಗಿ ಜೀವ ಪಣಕ್ಕಿಟ್ಟು ಹೋರಾಡುತ್ತಾರೆ. ಇಂತಹ ಯೋಧರ ಬಗ್ಗೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಗೌರವಯುತ ಭಾವನೆ ಇರಬೇಕು. ಆದರೆ ಇಲ್ಲಿ ಇಬ್ಬರು ಯುವತಿಯರು ಮಾಡಿರುವ ಕೆಲಸ ಮಾತ್ರ ಜನರನ್ನ ರೊಚ್ಚಿಗೆಬ್ಬಿಸಿದೆ. ಯೋಧರ ಸಮಾಧಿ ಎದುರು ಈ ಇಬ್ಬರು ಮಾಡಿದ ಆ ಡಾನ್ಸ್ ನೋಡಿದ್ರೆ ನಿಮಗೂ ಪಿತ್ತ ನೆತ್ತಿಗೆ ಏರುತ್ತೆ.

ಹೌದು ಹುತಾತ್ಮರಾದ ಯೋಧರ ಸಮಾಧಿ ಎದುರು ನಿಂತು ಇಬ್ಬರು ಉಕ್ರೇನ್ ಯುವತಿಯರು ಅಶ್ಲೀಲವಾಗಿ ಡಾನ್ಸ್ ಮಾಡಿದ್ದಾರೆ. ಇಬ್ಬರೂ ಅಕ್ಕ-ತಂಗಿ ಅಂತಾ ಹೇಳಲಾಗಿದೆ. ಉಕ್ರೇನ್‌ನ ರಾಜಧಾನಿ ಕೀವ್‌ ನಗರದಲ್ಲಿ ಇರುವ ಹುತಾತ್ಮರ ಸಮಾಧಿ ಎದುರು ಅಶ್ಲೀಲವಾಗಿ ಹೀಗೆ ನೃತ್ಯ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಇಬ್ಬರು ಮಾಡಿದ ಡಾನ್ಸ್‌ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಜನ ರೊಚ್ಚಿಗೆದ್ದು, ಆಕ್ರೋಶ ಹೊರಹಾಕಿದ್ದೇ ತಡ ಈ ಮಹಾನ್ ಅಕ್ಕ-ತಂಗಿ ಜೋಡಿ ಮಾಡಿದ್ದೇನು ಗೊತ್ತಾ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

ukraine-got-in-trouble-after-making-dance

ನಮ್ಮನ್ನು ಬಿಟ್ಟುಬಿಡಿ ಅಂದ್ರು ಅಕ್ಕ-ತಂಗಿ!

ಉಕ್ರೇನ್ ಜನರು ತಮ್ಮ ಯೋಧರ ಬಗ್ಗೆ ಅಪಾರ ಗೌರವ ಹೊಂದಿದ್ದು, ಯುದ್ಧದಲ್ಲಿ ಹೀಗೆ ತಮ್ಮ ದೇಶದ ಸೈನಿಕರು ಜೀವ ಬಿಡುತ್ತಿರುವ ಬಗ್ಗೆ ಕಣ್ಣೀರು ಹಾಕುತ್ತಿದ್ದಾರೆ. ಆದ್ರೆ ಇದನ್ನ ಅರ್ಥ ಮಾಡಿಕೊಳ್ಳದ ಈ ಇಬ್ಬರು ಯುವತಿಯರು ಮನಸ್ಸಿಗೆ ಬಂದಂತೆ ಹೆಜ್ಜೆ ಹಾಕಿದ್ದಾರೆ. ಉಕ್ರೇನ್ ಯೋಧರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದ್ರೆ ಇದೀಗ ಜನ ರೊಚ್ಚಿಗೆದ್ದು ಬೈಯಲು ಶುರು ಮಾಡಿದ್ದೇ ತಡ, ವಿಡಿಯೋ ಡಿಲೀಟ್ ಮಾಡಿದ್ದಲ್ಲದೆ, ಕ್ಷಮೆ ಕೇಳಿದ್ದರು. ಇದೆಲ್ಲಾ ಓಕೆ, ಇದು ಸೋಷಿಯಲ್ ಮೀಡಿಯಾ ಜಮಾನ. ಅಷ್ಟರಲ್ಲೇ ಇಬ್ಬರ ಎಡವಟ್ಟಿನ ವಿಡಿಯೋ ವೈರಲ್ ಆಗಿಬಿಟ್ಟಿದೆ.

ಪೊಲೀಸ್ ಠಾಣೆ ಕದ ತಟ್ಟಿದ ಪ್ರಜೆಗಳು

ಮೊದಲೇ ಹೇಳಿದಂತೆ ಈ ವಿಡಿಯೋ ನೋಡಿ, ಉಕ್ರೇನ್ ಪ್ರಜೆಗಳು ಯುವತಿಯರ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ಹೊರಹಾಕಿದ್ರು. ಅಲ್ಲದೆ ಸಾಕಷ್ಟು ಜನರು ಯುವತಿಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಏನೋ ಮಾಡಲು ಹೋಗಿ ಲಾಕ್ ಆಗಿದ್ದಾರೆ ಈ ಯುವತಿಯರು. ಇದೀಗ ಪೊಲೀಸರು ದಾಖಲಿಸಿರುವ ಕೇಸ್ ಎಷ್ಟು ಸ್ಟ್ರಾಂಗ್ ಎಂದರೆ, ಈ ಪ್ರಕರಣ ಸಾಬೀತು ಮಾಡಿದ್ದೇ ಆದರೆ 5 ವರ್ಷ ತನಕ ಶಿಕ್ಷೆ ಗ್ಯಾರಂಟಿ ಎನ್ನಲಾಗಿದೆ. ಹೀಗೆ ಸುಮ್ಮನೆ ಇರದೆ ಇರುವೆ ಬಿಟ್ಕೊಂಡಿದ್ದಾರೆ ಈ ಅಕ್ಕ-ತಂಗಿ. ಒಂದೂವರೆ ವರ್ಷಗಳ ಹಿಂದೆ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಈಗಲೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಆದರೆ ತಮ್ಮದೇ ದೇಶದ ಯೋಧರನ್ನು ಅಣಕಿಸಿದ ಯುವತಿಯರಿಗೆ ಸಂಕಷ್ಟ ಎದುರಾಗಿದೆ.

ukraine-got-in-trouble-after-making-dance

ಉಕ್ರೇನ್ ಜನರಿಗೆ ಅನ್ನವೂ ಸಿಗುತ್ತಿಲ್ಲ

ಯುರೋಪ್ ರಾಷ್ಟ್ರಗಳಿಗೆ ಕಪ್ಪು ಸಮುದ್ರ ಜೀವ. ಅದರಲ್ಲೂ ಉಕ್ರೇನ್‌ಗೆ ಇದೇ ಜಲಮಾರ್ಗದ ಮೂಲಕ ವ್ಯವಹಾರ ನಡೆಯುತ್ತಿತ್ತು. ಆದ್ರೆ ಕೆಲ ದಿನದ ಹಿಂದಷ್ಟೇ ರಷ್ಯಾ ಸೇನೆ ಇಲ್ಲಿ ಉಕ್ರೇನ್ ನೌಕೆಯನ್ನ ಉಡಾಯಿಸಿತ್ತು. 2014ರ ಬಳಿಕ ಉಕ್ರೇನ್‌ಗೆ ಕಪ್ಪು ಸಮುದ್ರದ ಮೇಲಿನ ಹಿಡತವು ಭಾಗಶಃ ತಪ್ಪಿದೆ. 2022ರಲ್ಲಿ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಈ ತನಕ ದಿನದಿನಕ್ಕೂ ಉಕ್ರೇನ್ ನರಳುತ್ತಿದೆ. ಅಗತ್ಯ ಇರುವ ದಿನಬಳಕೆ ವಸ್ತು ತರಿಸಿಕೊಳ್ಳುವುದಕ್ಕೂ ಪರದಾಡುತ್ತಿದೆ ಉಕ್ರೇನ್. ಅದರಲ್ಲೂ ಉಕ್ರೇನ್ ಯೋಧರ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ. ಹೀಗಿದ್ದರೂ ಉಕ್ರೇನ್ ಯೋಧರು ಹೋರಾಡುತ್ತಿದ್ದಾರೆ.

ಊಟ, ಬಟ್ಟೆ, ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಉಕ್ರೇನ್ ನೆಲದಲ್ಲಿ ತಮ್ಮ ಜನರಿಗೆ ಅಂತಾ ಜೀವ ಬಿಡುತ್ತಿರುವ ಯೋಧರಿಗೆ ಈ ರೀತಿ ಅವಮಾನ ಮಾಡಿದ್ದು ತಪ್ಪು. ಹೀಗಾಗಿ ಉಕ್ರೇನ್ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಈಗಾಗಲೇ ಯುದ್ಧ ಆರಂಭವಾದ ಬಳಿಕ ಉಕ್ರೇನ್‌ನ ಸಾವಿರಾರು ಸೈನಿಕರು ಜೀವ ಬಿಟ್ಟಿದ್ದಾರೆ. ಹಾಗೇ ಲಕ್ಷಾಂತರ ಜನರು ಊರನ್ನೇ ಬಿಟ್ಟು ಓಡಿ ಹೋಗಿದ್ದಾರೆ. ಪರಿಸ್ಥಿತಿ ಹೀಗಿದ್ರೂ ಯಾವುದೇ ಸಂಧಾನ ಸಭೆ ನಡೆಯುತ್ತಿಲ್ಲ. ಯುದ್ಧ ಮಾತ್ರ ದಿನದಿಂದ ದಿನಕ್ಕೆ ಮತ್ತಷ್ಟು ಭೀಕರವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+