Get Updates
Get notified of breaking news, exclusive insights, and must-see stories!

Hindu Temple: ಅಮೆರಿಕದ ಅತಿದೊಡ್ಡ ಹಿಂದೂ ದೇಗುಲ ಲೋಕಾರ್ಪಣೆ

ಭಾರತೀಯರು ಈಗ ಜಗತ್ತಿನ ಮೂಲೆ ಮೂಲೆಯಲ್ಲಿ ನೆಲೆಸಿದ್ದಾರೆ. ಅದ್ರಲ್ಲೂ ಹಿಂದೂಗಳು ಪಾಶ್ಚಿಮಾತ್ಯ ದೇಶಗಳಲ್ಲೂ ಪ್ರಬಲವಾಗಿದ್ದಾರೆ. ಇದೇ ರೀತಿ ಅಮೆರಿಕದಲ್ಲಿ ಕೂಡ ಹಿಂದೂ ಧರ್ಮಿಯರ ಸಂಖ್ಯೆ ಹೆಚ್ಚಾಗಿದ್ದು, ಅಮೆರಿಕದಲ್ಲಿ ದೇಗುಲಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೀಗ ಹಿಂದೂ ದೇಗುಲ ಒಂದು ವಿಶ್ವದಾಖಲೆ ಬರೆದಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಅಮೆರಿಕದಲ್ಲಿ ಇದೀಗ ಅತಿದೊಡ್ಡ ಹಿಂದೂ ದೇಗುಲ ಲೋಕಾರ್ಪಣೆ ಆಗಿದೆ. ಈ ಹಿನ್ನೆಲೆ, ಭಾರತ ಮೂಲದ ಅಮೆರಿಕನ್ನರು ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ಆಧುನಿಕ ಕಾಲ ಘಟ್ಟದಲ್ಲೇ ಅತಿ ದೊಡ್ಡ ದೇಗುಲ ಎಂಬ ಖ್ಯಾತಿ ಪಡೆದಿರುವ ನ್ಯೂಜೆರ್ಸಿ ದೇವಸ್ಥಾನ ಇದೇ ಭಾನುವಾರ ಅಂದ್ರೆ ನಿನ್ನೆ ಉದ್ಘಾಟನೆಯಾಗಿದೆ. ಹಾಗೇ ಇಂದಿನಿಂದ ಭಕ್ತರಿಗೆ ತೆರೆಯಲಿದೆ. ಹಾಗಾದರೆ ಈ ದೇಗುಲದ ವಿಶೇಷತೆಗಳು ಏನು? ಎಷ್ಟು ವಿಶಾಲವಾಗಿದೆ ಅಮೆರಿಕ ನೆಲದಲ್ಲಿ ನಿರ್ಮಾಣವಾಗಿರುವ ಈ ದೇಗುಲ? ವಿಶೇಷ ದೇಗುಲ ನಿರ್ಮಾಣಕ್ಕೆ ತೆಗೆದುಕೊಂಡ ಸಮಯ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Hindu-Temple-in-USA 02

ಎಷ್ಟು ಜನರಿಂದ ನಿರ್ಮಾಣ ಕಾರ್ಯ?

ಅಂದಹಾಗೆ ಅಮೆರಿಕದ ನ್ಯೂಜೆರ್ಸಿಯಲ್ಲಿ ಇದೀಗ ಲೋಕಾರ್ಪಣೆ ಮಾಡಲಾಗಿರುವ ದೇಗುಲ ಸುಮಾರು 183 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ದೇಗುಲವನ್ನು 12 ಸಾವಿರ ಸ್ವಯಂ ಸೇವಕರೇ ನಿರ್ಮಾಣ ಮಾಡಿರುವುದು ವಿಶೇಷ. ಬಿಎಪಿಎಸ್‌ ಸ್ವಾಮಿನಾರಾಯಣ್‌ ಅಕ್ಷರಧಾಮ ದೇಗುಲವನ್ನು ನಿರ್ಮಿಸಿದ್ದು, ಆಧುನಿಕ ಕಾಲದಲ್ಲಿ ಭಾರತದಿಂದ ಹೊರಗೆ ನಿರ್ಮಿಸಿರುವ ಅತಿ ದೊಡ್ಡ ದೇಗುಲ ಎಂಬ ಹೆಮ್ಮೆಯನ್ನೂ ಈ ದೇವಸ್ಥಾನ ಪಡೆದಿದೆ. ಸುಮಾರು 4.7 ದಶಲಕ್ಷ ಗಂಟೆ ಸಮಯವನ್ನು ದೇಗುಲದ ನಿರ್ಮಾಣಕ್ಕೆ ತೆಗೆದುಕೊಳ್ಳಲಾಗಿದೆ. ಈ ಮೂಲಕ ಎಲ್ಲಾ ವಿಚಾರದಲ್ಲೂ ಅಮೆರಿಕದಲ್ಲಿ ನಿರ್ಮಾಣವಾಗಿರುವ ದೇಗುಲ ದಾಖಲೆ ಬರೆದಿದೆ.

ವಿಶ್ವದ ಅತಿದೊಡ್ಡ ದೇಗುಲ ಯಾವುದು?

2011ರಲ್ಲಿ ಈ ದೇಗುಲ ನಿರ್ಮಾಣ ಕಾರ್ಯ ಶುರುವಾಗಿತ್ತು, ಹೀಗೆ 12 ವರ್ಷಗಳ ಕಾಲ ಸತತ ಶ್ರಮದ ನಂತರ ದೇವಾಲಯ ಈಗ ಲೋಕಾರ್ಪಣೆಯಾಗಿದೆ. ಅದ್ಧೂರಿಯಾಗಿ ಸಮಾರಂಭ ಆಯೋಜನೆ ಮಾಡಿ, ದೇಗುಲ ಲೋಕಾರ್ಪಣೆ ಮಾಡಲಾಗಿದೆ. ಮತ್ತೊಂದು ಕಡೆ ಅಮೆರಿಕ ಮೂಲದ ಭಾರತೀಯರಿಗೆ ಇದು ಸಾಕಷ್ಟು ಸಂಭ್ರಮ ತಂದಿತ್ತು. ಇನ್ನು ಈಗಿರುವ ಮಾಹಿತಿ ಪ್ರಕಾರ ಕಾಂಬೋಡಿಯಾದ ದೇಗುಲ ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಿಂದೂ ದೇಗುಲವಾಗಿದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಯುನೆಸ್ಕೋ ಪಾರಂಪರಿಕ ತಾಣದಲ್ಲಿ ಒಂದಾಗಿದೆ.

ಈ ಮಧ್ಯೆ ದೊಡ್ಡಣ್ಣ ಅಮೆರಿಕ ನೆಲದಲ್ಲಿ ಬೃಹತ್ ಹಿಂದೂ ದೇವಾಲಯ ನಿರ್ಮಾಣವಾಗಿ ಇದೀಗ ಲೋಕಾರ್ಪಣೆಯಾಗಿದೆ. ಒಟ್ಟಾರೆ, ಬರೋಬ್ಬರಿ 1 ದಶಕಗಳ ನಿರಂತರ ಪರಿಶ್ರಮದ ನಂತರ ಇದೀಗ ಬೃಹತ್ ದೇಗುಲ ಉದ್ಘಾಟನೆಯಾಗಿದೆ. ಹಾಗೇ ದಾಖಲೆಯನ್ನು ನ್ಯೂಜೆರ್ಸಿ ನೆಲದಲ್ಲಿ ನಿರ್ಮಾಣವಾಗಿರುವ ಈ ದೇಗುಲ ಬರೆದಿದೆ. ಈ ಮೂಲಕ ಭಾರತದಿಂದ ಹೊರಗೆ ಇದ್ರೂ, ಭಾರತದ ವಾತಾವರಣ & ಸಂಸ್ಕೃತಿ ಭಾರತ ಮೂಲದ ಅಮೆರಿಕನ್ನರಿಗೆ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+