Starlink in Manipur: ಮಣಿಪುರ ಗಲಭೆ ಪ್ರಚೋದಿಸಲು ಭಯೋತ್ಪಾದಕರಿಂದ ಸ್ಟಾರ್‌ಲಿಂಕ್ ಬಳಕೆ ಆರೋಪ- ಎಲೋನ್ ಮಸ್ಕ್ ಪ್ರತಿಕ್ರಿಯೆ
ಮಣಿಪುರದಲ್ಲಿ ಗಲಭೆಗಳನ್ನು ಪ್ರಚೋದಿಸಲು ಸ್ಟಾರ್‌ಲಿಂಕ್ ಉಪಗ್ರಹ ಸಂವಹನ ಲಿಂಕ್ ಅನ್ನು ಬಳಸಲಾಗುತ್ತಿದೆಯೇ ಎಂಬ ಶಂಕೆಗೆ ಸ್ಟಾರ್‌ಲಿಂಕ್‌ನ ಮಾಲೀಕ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲೋನ್ ಮಸ್ಕ್ ಅವರು ತಮ್ಮ ಉಪಗ್ರಹ ಸಂವಹನ ಸೇವೆಯಾದ ಸ್ಟಾರ್‌ಲಿಂಕ್ ಅನ್ನು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಭಯೋತ್ಪಾದಕರು ಬಳಸುತ್ತಿದ್ದಾರೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿದ್ದಾರೆ.
ಭಾರತೀಯ ಭದ್ರತಾ ಪಡೆಗಳ ಒಂದು ಘಟಕ ಹಂಚಿಕೊಂಡ ಫೋಟೋಗಳಲ್ಲಿ ಸ್ಟಾರ್‌ಲಿಂಕ್ ಲೋಗೋ ಹೊಂದಿರುವ ಸಾಧನವನ್ನು ವಶಪಡಿಸಿಕೊಂಡಿರುವುದು ಕಂಡುಬಂದಿದೆ. ಈ ಸಾಧನಗಳನ್ನು ಮಣಿಪುರದಲ್ಲಿ ಗಲಭೆಗಳನ್ನು ಪ್ರಚೋದಿಸಲು ಭಯೋತ್ಪಾದಕರು ಬಳಕೆ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಲೋನ್ ಮಸ್ಕ್ ಅವರು 'ಸ್ಟಾರ್‌ಲಿಂಕ್ ಉಪಗ್ರಹ ಕಿರಣವನ್ನು ಪ್ರಸ್ತುತ ಭಾರತದಲ್ಲಿ ಬಳಕೆ ಮಾಡಲಾಗುತ್ತಿಲ್ಲ. ಭಾರತದಲ್ಲಿ ಸ್ಟಾರ್‌ಲಿಂಕ್‌ನ ಸೇವೆಗಳಿಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ' ಎಂದು ಹೇಳಿದ್ದಾರೆ.

ಸ್ಟಾರ್‌ಲಿಂಕ್ ವಿವಾದ ಹೇಗೆ ಪ್ರಾರಂಭವಾಯಿತು?
ಡಿಸೆಂಬರ್ 16ರಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ರಾಜ್ಯ ಪೊಲೀಸರೊಂದಿಗೆ ಚುರಾಚಂದ್‌ಪುರ, ಚಾಂಡೆಲ್, ಇಂಫಾಲ್ ಪೂರ್ವ ಮತ್ತು ಕಾಗ್‌ಪೋಕ್ಪಿ ಜಿಲ್ಲೆಗಳ ಬೆಟ್ಟ ಮತ್ತು ಕಣಿವೆ ಪ್ರದೇಶಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಸ್ನೈಪರ್‌ಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ರೈಫಲ್‌ಗಳು, ಪಿಸ್ತೂಲ್‌ಗಳು, ದೇಶ ನಿರ್ಮಿತ ಮೋರ್ಟಾರ್‌ಗಳು, ಸಿಂಗಲ್ ಬ್ಯಾರೆಲ್ ರೈಫಲ್‌ಗಳು, ಗ್ರೆನೇಡ್‌ಗಳು, ಮದ್ದುಗುಂಡುಗಳು ಮತ್ತು ಯುದ್ಧ-ಹೋರಾಟದ ಉಪಕರಣಗಳು ಸೇರಿದಂತೆ 29 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಾಧನಗಳು ಭಯೋತ್ಪಾದಕರು ಸ್ಟಾರ್‌ಲಿಂಕ್ ಇಂಟರ್ನೆಟ್ ಬಳಸುತ್ತಿದ್ದಾರೆಯೇ ಎನ್ನುವ ಅನುಮಾನವನ್ನು ಹುಟ್ಟುಹಾಕಿವೆ.
ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಕಾನೂನುಬದ್ಧವಾಗಿದೆಯೇ?
ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳನ್ನು ಒದಗಿಸಲು ಸ್ಟಾರ್‌ಲಿಂಕ್‌ನ ಅರ್ಜಿಯನ್ನು ಭಾರತ ಇನ್ನೂ ಅನುಮೋದಿಸಿಲ್ಲ. ಗೃಹ ಸಚಿವಾಲಯದ ಭದ್ರತಾ ಕ್ಲಿಯರೆನ್ಸ್‌ಗಾಗಿ ಅದರ ಅರ್ಜಿಯು ಬಾಕಿ ಉಳಿದಿದೆ ಎನ್ನಲಾಗುತ್ತಿದೆ. ಕಳೆದ ತಿಂಗಳು ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸ್ಪೇಸ್‌ಎಕ್ಸ್‌ನ ಉಪಗ್ರಹ ಇಂಟರ್ನೆಟ್ ಸೇವೆ ಸ್ಟಾರ್‌ಲಿಂಕ್ ಅನ್ನು ಪ್ರಾರಂಭಿಸುವ ಯಾವುದೇ ನಿರ್ಧಾರ ಪ್ರಸ್ತುತ ಪ್ರಕ್ರಿಯೆಯಲ್ಲಿದೆ. ಇದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಶಿಫಾರಸುಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದರು. ಆದ್ದರಿಂದ ಕಂಪನಿಯು ಭಾರತದಲ್ಲಿ ತನ್ನ ಸೇವೆಗಳನ್ನು ಕಾನೂನುಬದ್ಧವಾಗಿ ಒದಗಿಸಲು ಸಾಧ್ಯವಿಲ್ಲ.
ಸ್ಟಾರ್‌ಲಿಂಕ್ ಬಗ್ಗೆ
ಸ್ಟಾರ್‌ಲಿಂಕ್‌ನ ವೆಬ್‌ಸೈಟ್‌ನಲ್ಲಿನ ನಕ್ಷೆಯು ಅಗತ್ಯವಿರುವ ಪ್ರದೇಶಗಳ ಆಳದ ಚಿತ್ರಣವನ್ನು ತೋರಿಸುತ್ತದೆ. ಈ ಮೂಲಕ ಸಂಪರ್ಕ ಸಾಧಿಸಲು ಈ ಲಿಂಕ್ ಸಹಾಯ ಮಾಡುತ್ತದೆ. ಈ ಸ್ಟಾರ್‌ಲಿಂಕ್ ಅನ್ನು ಭಯೋತ್ಪಾದಕರು ಮಣಿಪುರದಲ್ಲಿ ಹಿಂಸಾಚಾರ ಪ್ರಚೋದಿಸಲು ಬಳಕೆ ಮಾಡುತ್ತಿರಬಹುದು ಎಂದು ಕಾರ್ಯಚರಣೆ ವೇಳೆ ಸಿಕ್ಕ ಸಾಧನಗಳಿಂದ ಶಂಕೆ ವ್ಯಕ್ತವಾಗಿದೆ.
ಆದರೆ ಸ್ಟಾರ್‌ಲಿಂಕ್ ಅನುಮೋದನೆ ಭಾರತದಲ್ಲಿ ಇನ್ನೂ ಕೂಡ ಬಾಕಿಯಿದೆ. ಇದರ ಬಳಕೆಗೆ ಭಾರತದಲ್ಲಿ ಇನ್ನೂ ಕೂಡ ಅನುಮೋದನೆ ಸಿಕ್ಕಲ್ಲ. ಪಾಕಿಸ್ತಾನದಲ್ಲೂ ಇದೇ ರೀತಿಯ ಅನುಮಾನ ವ್ಯಕ್ತವಾಗಿದೆ. ಬಾಂಗ್ಲಾದೇಶ ಮತ್ತು ಭೂತಾನ್‌ನಲ್ಲಿ ಈ ಸೇವೆಯನ್ನು 2025 ರಲ್ಲಿ ಪ್ರಾರಂಭಿಸಲಾಗುತ್ತಿದೆ. ನೇಪಾಳ ಮತ್ತು ಮ್ಯಾನ್ಮಾರ್‌ನಲ್ಲಿ ಸ್ಟಾರ್‌ಲಿಂಕ್ ಇನ್ನೂ ಲಭ್ಯವಿಲ್ಲ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications