Get Updates
Get notified of breaking news, exclusive insights, and must-see stories!

ಕೀನ್ಯಾದಲ್ಲಿ ಉಗ್ರರ ಬರ್ಬರ ಕೃತ್ಯಕ್ಕೆ ಮೋದಿ ಕಂಬನಿ

ಗರಿಸ್ಸಾ, ಏ.3: : ಕೀನ್ಯಾದ ವಿಶ್ವವಿದ್ಯಾನಿಲಯದಲ್ಲಿ ಸೊಮಾಲಿಯಾದ ಉಗ್ರರು ನಡೆಸಿದ ದಾಳಿಯನ್ನು ಅತ್ಯಂತ ಹೀನ ಕೃತ್ಯ, ಇದೊಂದು ಅತ್ಯಂತ ಘೋರ ಸಂಗತಿ ಎಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಶೆಬಾಬ್ ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ ನಡೆಸಿದ ದಾಳಿಯಲ್ಲಿ ಕನಿಷ್ಟ 147 ಜನರು ಮೃತಪಟ್ಟಿದ್ದಾರೆ.

1998ರಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ನಡೆದ ದಾಳಿಯ ನಂತರದ ಅತ್ಯಂತ ಭೀಕರ ಭಯೋತ್ಪಾದನಾ ದಾಳಿ ಇದಾಗಿದೆ. ಪೇಶಾವಾರದಲ್ಲಿ ಉಗ್ರರು ಮಕ್ಕಳನ್ನು ಕೊಂದ ಕೃತ್ಯಕ್ಕಿಂತ ಇದು ಭೀಕರವಾಗಿದ್ದರೂ ಭಾರತದ ಮಾಧ್ಯಮಗಳು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದಿರುವುದು ದುರಂತದ ಸಂಗತಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯಾಗುತ್ತಿದೆ. [ಇಂಡೋನೇಷ್ಯಾ ಸೈಡ್ ಹೊಡೆಯಲಿದ್ದಾರೆ ಭಾರತದ ಮುಸ್ಲಿಮರು]

ಪಾಕಿಸ್ತಾನದ ಪೇಶಾವರದ ಶಾಲೆಯಲ್ಲಿ ತಾಲಿಬಾನ್ ಉಗ್ರರು 150 ಮಕ್ಕಳನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ ಬೆನ್ನಲ್ಲೇ ಕೀನ್ಯಾದ ವಿಶ್ವವಿದ್ಯಾನಿಲಯವೊಂದರ ಮೇಲೆ ದಾಳಿ ನಡೆಸಿದ ಅಲ್ ಶಬಾಬ್ ಉಗ್ರರು 147 ವಿದ್ಯಾರ್ಥಿಗಳನ್ನು ಕೊಂದು ಹಾಕಿರುವ ಹೃದಯ ವಿದ್ರಾವಕ ಘಟನೆ ಗುರುವಾರ ರಾತ್ರಿ ನಡೆದಿದೆ.

ಇದೊಂದು ಅತ್ಯಂತ ಘೋರ ಸಂಗತಿ

ಇದೊಂದು ಅತ್ಯಂತ ಘೋರ ಸಂಗತಿ

ಕೀನ್ಯಾದ ವಿಶ್ವವಿದ್ಯಾನಿಲಯದಲ್ಲಿ ಸೊಮಾಲಿಯಾದ ಉಗ್ರರು ನಡೆಸಿದ ದಾಳಿಯನ್ನು ಅತ್ಯಂತ ಹೀನ ಕೃತ್ಯ, ಇದೊಂದು ಅತ್ಯಂತ ಘೋರ ಸಂಗತಿ ಎಂದು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಶೆಬಾಬ್ ಇಸ್ಲಾಮಿಸ್ಟ್ ಉಗ್ರಗಾಮಿ ಸಂಘಟನೆ ನಡೆಸಿದ ದಾಳಿಯಲ್ಲಿ ಕನಿಷ್ಟ 147 ಜನರು ಮೃತಪಟ್ಟಿದ್ದಾರೆ

ಗಾಯ ಗೊಂಡವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ

ಗಾಯ ಗೊಂಡವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ

ಗಾಯ ಗೊಂಡವರ ಸಂಖ್ಯೆ 200 ದಾಟಿದೆ. ನಾಲ್ವರು ಉಗ್ರರು ದಾಳಿ ನಡೆಸಿದ ವೇಳೆ ವಿಶ್ವವಿದ್ಯಾಲಯದಲ್ಲಿರುವ 850 ವಿದ್ಯಾರ್ಥಿಗಳ ಪೈಕಿ 518 ಜನ ಹಾಜರಿದ್ದರು. ಗರಿಸ್ಸಾ ಪಟ್ಟಣದಲ್ಲಿರುವ ವಿವಿಯ ಹಾಸ್ಟೆಲ್​ಗೆ ನುಗ್ಗಿದ ನಾಲ್ವರು ಉಗ್ರರು ಗ್ರೆನೇಡ್ ಬಳಸಿ ದಾಳಿ ನಡೆಸಿದ್ದಾರೆ.ಕ್ರಿಶ್ಚಿಯನ್ ಮತ್ತು ಇತರ ಧರ್ಮದ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡರು.

ನರೇಂದ್ರ ಮೋದಿ ಅವರಿಂದ ಟ್ವೀಟ್ ಮಾಡಿ ಸಂತಾಪ

ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಕೀನ್ಯಾ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಗುಂಡಿನ ಸದ್ದು, ರೋದನ, ನರಳಾಟ

ಗುಂಡಿನ ಸದ್ದು, ರೋದನ, ನರಳಾಟ

ಪೂರ್ವ ಕೀನ್ಯಾದಲ್ಲಿರುವ ಈ ಕ್ರೈಸ್ತ ವಿಶ್ವವಿದ್ಯಾಲಯದ ಮೇಲೆ ಕ್ರೈಸ್ತ ವಿರೋಧಿ ಅಲ್-ಶಬಾಬ್ ಉಗ್ರರು ನಡೆಸಿದ ದಾಳಿಗೆ ತಕ್ಕ ಉತ್ತರ ನೀಡಿದ ಗರಿಸ್ಸಾದ ಪೊಲೀಸರು ಮತ್ತು ಮಿಲಿಟರಿ ಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿ ಇತರ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಎಲ್ಲೆಲ್ಲೂ ಗುಂಡಿನ ಸದ್ದು, ರೋದನ, ನರಳಾಟಗಳೇ ಕಂಡು ಬರುತ್ತಿವೆ.

ಶಬಾಬ್ ಉಗ್ರರ ಅಟ್ಟಹಾಸ

ಶಬಾಬ್ ಉಗ್ರರು ಕಳೆದ 2013ರಲ್ಲಿ ಕೀನ್ಯಾದ ನೈರೋಬಿಯದ ಮಾಲ್‌ವೊಂದರ ಮೇಲೆ ದಾಳಿನಡೆಸಿ 67 ಜನರನ್ನು ಕೊಂದು ಹಾಕಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+