ಮಕ್ಕಳ ಉತ್ಪಾದನೆಯಲ್ಲಿ ಇಂಡೋನೇಷ್ಯಾ ಮೀರಿಸಲಿದ್ದಾರೆ ಭಾರತದ ಮುಸ್ಲಿಂರು
ವಾಷಿಂಗ್ಟನ್, ಏ.3 : 2050ರ ವೇಳೆಗೆ ಹಿಂದೂ ಜನಸಂಖ್ಯೆ ವಿಶ್ವದ ಜನಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೇರಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಮುಸ್ಲಿಂಮರ ಜನಸಂಖ್ಯೆಯಲ್ಲಿ ಭಾರತ ಇಂಡೋನೇಷ್ಯಾವನ್ನೇ ಮೀರಿಸಲಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.
ಅಮೆರಿಕ ಮೂಲದ ಪಿವ್ ರಿಸರ್ಚ್ ಸೆಂಟರ್ ಈ ಸಮೀಕ್ಷೆ ನಡೆಸಿದೆ. ಸದ್ಯ ವಿಶ್ವದಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು 100 ಕೋಟಿ ಇದೆ. 2050ರ ವೇಳೆಗೆ ಇದು 140 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಜಗತ್ತಿನ ಜನಸಂಖ್ಯೆಯಲ್ಲಿ ಶೇ 14.9ರಷ್ಟು ಪಾಲು ಹಿಂದೂಗಳದ್ದಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. [ಹಿಂದೂ ಸಮಾಜೋತ್ಸವಕ್ಕೆ ಹರಿದು ಬಂದ ಜನಸಾಗರ]

ಈ ಸಮೀಕ್ಷೆಯ ಪ್ರಕಾರ ಸಮೀಕ್ಷೆ ಪ್ರಕಾರ ಜನಸಂಖ್ಯೆಯಲ್ಲಿ ಅತಿ ದೊಡ್ಡ ಧರ್ಮವಾಗಿ ಕ್ರೈಸ್ತ ಧರ್ಮ ಮುಂದುವರಿಯುತ್ತದೆ. ಆದರೆ, ಅತಿ ವೇಗವಾಗಿ ಜನಸಂಖ್ಯಾ ಬೆಳವಣಿಗೆ ಹೊಂದುವ ಧರ್ಮ ಇಸ್ಲಾಂ ಆಗಲಿದೆ. 2050ರ ವೇಳೆಗೆ ಕ್ರೈಸ್ತರು ಅಂದಾಜು 290 ಕೋಟಿ, ಮುಸ್ಲಿಮರು ಅಂದಾಜು 280 ಕೋಟಿ ಆಗಿರಲಿದ್ದಾರೆ ಎಂದು ಅಂದಾಜಿಸಲಾಗಿದೆ. [ಧಾರ್ಮಿಕ ಮಾರುಕಟ್ಟೆ: ಇದನ್ನು ಯಾರು, ಹೇಗೆ ಮಾಡ್ತಾರೆ?]
ಉತ್ತರ ಅಮೆರಿಕದಲ್ಲಿ ಮುಂದಿನ 10 ವರ್ಷಗಳಲ್ಲಿ ಹಿಂದೂಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ. 2070ರ ವೇಳೆಗೆ ಇಸ್ಲಾಂ ಜಗತ್ತಿನ ಅತಿ ಹೆಚ್ಚು ಜನರು ಅನುಸರಿಸಲಿರುವ ಧರ್ಮವಾಗಲಿದೆ. 2050ರ ವೇಳೆಗೆ ಹಿಂದೂಗಳು ಜಗತ್ತಿನ ಮೂರನೇ ಅತಿದೊಡ್ಡ ಸಮುದಾಯವಾಗಲಿದೆ ಎಂದು ಸಮೀಕ್ಷೆ ವರದಿ ಹೇಳುತ್ತಿದೆ.












Click it and Unblock the Notifications