Russia VS Ukraine War: ಉಕ್ರೇನ್‌ಗೆ ರಷ್ಯಾ ಮಾಜಿ ಅಧ್ಯಕ್ಷರ ಭೇಟಿ?
ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಎರಡೂ ದೇಶಗಳು ಭೀಕರ ದಾಳಿ ನಡೆಸುತ್ತಿವೆ. ಇಬ್ಬರ ದಾಳಿಯಲ್ಲಿ ಅಮಾಯಕರು ಸಾಯುತ್ತಿದ್ದಾರೆ. ಪರಿಸ್ಥಿತಿ ಇಷ್ಟು ಕೈಮೀರಿ ಹೋಗಿರುವ ಸಮಯದಲ್ಲೇ ರಷ್ಯಾ ಮಾಜಿ ಅಧ್ಯಕ್ಷ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ ಎಂಬ ಸುದ್ದಿ ಈಗ ಸಂಚಲನ ಸೃಷ್ಟಿ ಮಾಡಿದೆ. ಹಾಗಾದರೆ ಉಕ್ರೇನ್ ನೆಲದಲ್ಲಿ ಆಗಿದ್ದು ಏನು?
ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಉಕ್ರೇನ್‌ಗೆ ಭೇಟಿ ನೀಡಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಪುಟಿನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈ ಮೆಡ್ವೆಡೇವ್ ದಿಢೀರ್ ಉಕ್ರೇನ್‌ಗೆ ಭೇಟಿ ಕೊಟ್ಟಿದ್ದೇಕೆ? ಎಂಬ ಚರ್ಚೆ ಕೂಡ ಶುರುವಾಗಿದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಭೀಕರ ದಾಳಿ ನಡೆಸುತ್ತಿರುವ ಸಮಯದಲ್ಲೇ, ಈ ರೀತಿ ರಷ್ಯಾದ ಮಾಜಿ ಅಧ್ಯಕ್ಷರು ಭೇಟಿ ನೀಡಿರುವುದು ಸಂಚಲನ ಸೃಷ್ಟಿ ಮಾಡಿತ್ತು. ಆದರೆ ಈ ಎಲ್ಲಾ ಪ್ರಶ್ನೆಗಳಿಗೂ ಈಗ ಉತ್ತರ ಸಿಕ್ಕಿದೆ. ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಪುಟಿನ್ ಆದೇಶಕ್ಕೆ ತಲೆಬಾಗಿದ ಮೆಡ್ವೆಡೇವ್?
ಹೌದು, ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಉಕ್ರೇನ್‌ಗೆ ವಿಸಿಟ್ ಕೊಟ್ಟಿದ್ದು ಬೇರೆ ಯಾವುದೋ ಕಾರಣಕ್ಕೆ ಅಲ್ಲ. ಡಿಮಿಟ್ರಿ ಮೆಡ್ವೆಡೇವ್ ಭೇಟಿಯ ಹಿಂದೆ ರಷ್ಯಾ ಅಧ್ಯಕ್ಷರಾದ ಪುಟಿನ್ ರಣತಂತ್ರ ಇದೆ. ಉಕ್ರೇನ್ ವಿರುದ್ಧ ತೀವ್ರ ಹೋರಾಟ ನಡೆಸುತ್ತಿರುವ ರಷ್ಯಾ ಸೇನೆ & ಸೈನಿಕರನ್ನು ಹುರಿದುಂಬಿಸುವ ಉದ್ದೇಶದಿಂದ ಡಿಮಿಟ್ರಿ ಮೆಡ್ವೆಡೇವ್ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಉಕ್ರೇನ್‌ನಲ್ಲಿ ಯುದ್ಧ ಮಾಡುತ್ತಿರುವ ರಷ್ಯಾದ ಮುನ್ನೆಲೆಯ ಹೋರಾಟಗಾರರ ಬಳಿ ಡಿಮಿಟ್ರಿ ಮೆಡ್ವೆಡೇವ್ ಚರ್ಚೆ ನಡೆಸಿ, ರಷ್ಯಾ ಸೈನಿಕರಿಗೆ ಅವರು ಆತ್ಮಸ್ಥೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ಕೆನಡಾ ಭೇಟಿಗೆ ಇದು ಪ್ರತಿಕಾರ?
ಮತ್ತೊಂದು ಕಡೆ ಉಕ್ರೇನ್ ಅಧ್ಯಕ್ಷರ ಕೆನಡಾ ಮತ್ತು ಅಮೆರಿಕ ಭೇಟಿಯ ಬಳಿಕ, ಪುಟಿನ್ ಹೀಗೆ ರಣತಂತ್ರ ರೂಪಿಸಿ ರಷ್ಯಾ ಮಾಜಿ ಅಧ್ಯಕ್ಷರನ್ನು ಉಕ್ರೇನ್ ನೆಲಕ್ಕೆ ಕಳುಹಿಸಿದ್ದಾರೆಂಬ ಮಾತು ಕೂಡ ಓಡಾಡುತ್ತಿದೆ. ಆದರೆ ಈ ಬಗ್ಗೆ ರಷ್ಯಾ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇಷ್ಟೆಲ್ಲದರ ಮಧ್ಯೆ ಡಿಮಿಟ್ರಿ ಮೆಡ್ವೆಡೇವ್ ಉಕ್ರೇನ್ ನೆಲದಲ್ಲಿ ರಷ್ಯಾ ಪರವಾಗಿ ಹೋರಾಟ ನಡೆಸುತ್ತಿರುವ ರಷ್ಯಾ ಸೈನಿಕರನ್ನ ಹುರಿದುಂಬಿಸಿ ಬಂದಿದ್ದಾರೆ. ಈ ಮೂಲಕ ಉಕ್ರೇನ್ ವಿರುದ್ಧ ರಷ್ಯಾ ಬೇರೆ ಏನೋ ಹೊಸ ತಂತ್ರ ರೂಪಿಸಿದಂತೆ ಕಾಣುತ್ತಿದೆ.
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಇದು ಪರಿಸ್ಥಿತಿಯನ್ನು ಕೈಮೀರಿ ಹೋಗುವಂತೆ ಮಾಡುತ್ತಿದೆ. ಡಿಮಿಟ್ರಿ ಮೆಡ್ವೆಡೇವ್ ಉಕ್ರೇನ್‌ಗೆ ಭೇಟಿ ನೀಡಿದ ಘಟನೆ ಬಗ್ಗೆ ಇನ್ನೂ ಕೀವ್ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ರಷ್ಯಾ ವಿರುದ್ಧ ಉಕ್ರೇನ್ ಡ್ರೋನ್ ದಾಳಿ ಮೂಲಕ ಪ್ರತಿಕಾರ ತೀರಿಸಿಕೊಳ್ಳುತ್ತಾ? ಎಂಬ ಸಂಶಯ ಕೂಡ ಕಾಡುತ್ತಿದೆ. ಹೀಗಾಗಿ ರಷ್ಯಾ ಕೂಡ ಅಲರ್ಟ್ ಆಗಿ, ಗಡಿಯಲ್ಲಿ ಭದ್ರತೆ ಹೆಚ್ಚಿಸಿದೆ.












Click it and Unblock the Notifications