ಡೆತ್ ನೋಟ್ ಬರೆಯುವ ಹೋಂವರ್ಕ್ ನೀಡಿದ ಶಿಕ್ಷಕಿ!
ಲಂಡನ್, ಜೂನ್ 29: ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ್ ಹೇಗೆ ಸಿದ್ಧಪಡಿಸುತ್ತಾರೆಂದು ಬರೆದುಕೊಂಡುಬನ್ನಿ ಎಂದು ಶಿಕ್ಷಕಿಯೊಬ್ಬರು ಹೋಂವರ್ಕ್ ನೀಡಿದ ವಿಚಿತ್ರ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ.
ಪ್ರಖ್ಯಾತ ಲೇಖನ ವಿಲಿಯಂ ಶೇಕ್ಸ್ ಪಿಯರ್ ಅವರ ಮ್ಯಾಕ್ ಬೆತ್ ನಾಟಕವನ್ನು ಕಲಿಸುತ್ತಿದ್ದ ಶಿಕ್ಷಕಿ, ಆ ನಾಟಕದಲ್ಲಿ ಬರುವ ದೃಶ್ಯವೊಂದಕ್ಕನುಗುಣವಾಗಿ ಮಕ್ಕಳಿಗೆ ಡೆತ್ ನೋಟ್ ಬರೆದುಕೊಂಡು ಬರುವಂತೆ ಹೇಳಿದ್ದಾರೆ.

ಈ ವಿಷಯ ತಿಳಿದ ಮಕ್ಕಳ ಪಾಲಕರು ಹೌಹಾರಿದ್ದಲ್ಲದೆ, ಶಿಕ್ಷಕಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಅಸೈನ್ ಮೆಂಟ್ ಗಳು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಪಾಲಕರು ದೂರಿದ್ದಾರೆ. ಪಾಲಕರು ಆಕ್ರೋಶ ವ್ಯಕ್ತಪಡಿಸಿದ ನಂತರ, ಶಿಕ್ಷಕಿ ಪಾಲಕರ, ವಿದ್ಯಾರ್ಥಿಗಳ ಮತ್ತು ಶಾಲೆಯ ಆಡಳಿತ ಮಂಡಳಿಯ ಕ್ಷಮೆ ಯಾಚಿಸಿದ್ದಾರೆ.












Click it and Unblock the Notifications