ಪತ್ನಿ ಜತೆ ಮುನಿಸು: ಟಾಟಾ ಎಂಡಿ ಆತ್ಮಹತ್ಯೆಗೆ ಕಾರಣ

ಹೆಂಡತಿಯ (Sally Slym) ಜತೆ ಕೌಟುಂಬಿಕ ಕಲಹದಿಂದ ಜಗಳವಾಡಿಕೊಂಡಿದ್ದ Tata Motors Ltd. (TTMT) ಎಂಡಿ ಕಾರ್ಲ್ ಸ್ಲಿಮ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಬಲವಾದ ಪುರಾವೆಗಳು ಸಿಕ್ಕಿವೆ ಎಂದು ಬ್ಯಾಂಕಾಕ್ ಪೊಲೀಸರು ಹೇಳಿದ್ದಾರೆ. ಅಂದಹಾಗೆ, ಇವರಿಬ್ಬರದೂ 30 ವರ್ಷದಗಳ ದಾಂಪತ್ಯ.
51 ವರ್ಷದ ಕಾರ್ಲ್ ಸ್ಲಿಮ್ ಕಂಪನಿಯ ಸಭೆಯಲ್ಲಿ ಪಾಲ್ಗೊಳ್ಳಲು ಪತ್ನಿಯ ಜತೆಗೂಡಿ 2 ದಿನಗಳ ಹಿಂದೆ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ರಾತ್ರಿ ದಂಪತಿ ಉಂಡು ಮಲಗುವ ಮುನ್ನ ಜಗಳವಾಡಿಕೊಂಡಿದ್ದರು. ತದನಂತರ ಪತ್ನಿ ನಿದ್ದೆಗೆ ಜಾರಿದ್ದಾರೆ. ಆದರೆ ಪತಿ ಕಾರ್ಲ್ ಸ್ಲಿಮ್ ಬೆಡ್ ರೂಮಿನಿಂದ ಹೊರಬಂದು Shangri-La ಹೋಟೆಲಿನ 22 ಮಹಡಿಯಿಂದ ಹಾರಿ ಬಿಟ್ಟು 4ನೇ ಮಹಡಿಯಲ್ಲಿದ್ದ ಸಜ್ಜಾ ಮೇಲೆ ಬಿದ್ದಿದ್ದಾರೆ. ಬಿದ್ದೇಟಿಗೆ ಅವರ ತಲೆ ಬುರುಡೆ ಚೂರಾಗಿದೆ.
ಭಾನುವಾರ ಬೆಳಗ್ಗೆ ಹೋಟೆಲ್ ಅಧಿಕಾರಿಗಳು ಬಂದು ತಿಳಿಸಿದಾಗಲೇ ಪತ್ನಿ Sally Slym ಅವರಿಗೆ ಪತಿ ಮೃತಪಟ್ಟಿರುವುದು ಗೊತ್ತಾಗಿದ್ದು. ಆದರೆ ನಿದ್ದೆ ಮಾಡುವುದಕ್ಕೂ ಮುನ್ನ ಪತ್ನಿ Sally, ಜಗಳಕ್ಕೆ ಸಂಬಂಧಪಟ್ಟಂತೆ ಥಾಯ್ ಭಾಷೆಯಲ್ಲಿ ಪತಿಗೆ ಪತ್ರ ಬರೆದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪತ್ರದಲ್ಲಿದ್ದ ಅಂಶಗಳನ್ನು ಆಧರಿಸಿ, ಪತಿ-ಪತ್ನಿ ಮಧ್ಯೆ ಜಗಳ ನಡೆದು, ಕಾರ್ಲ್ ಸ್ಲಿಮ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿದ್ದಾರೆ. ಆದರೆ ಇದರಲ್ಲಿ ಕೊಲೆ ಯತ್ನ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಬ್ರಿಟನ್ ಮೂಲದ, 51 ವರ್ಷದ ಕಾರ್ಲ್ ಸ್ಲಿಮ್ ಅವರು 2012ರಲ್ಲಿ ಟಾಟಾ ಮೋಟರ್ಸ್ ಸಾರಥ್ಯ ವಹಿಸಿಕೊಂಡಿದ್ದರು. ಟಾಟಾ ಮೋಟರ್ಸ್ ಅನ್ನು ಸೇರುವ ಮೊದಲು ಕಾರ್ಲ್ ಸ್ಲಿಮ್ ಅವರು ಚೀನಾದ SGMW Motors (ಜಿಎಂ ಮೋಟರ್ಸ್ ಅಂಗ ಸಂಸ್ಥೆ) ಉಪಾಧ್ಯಕ್ಷರಾಗಿದ್ದರು. ( ಗಗನಚುಂಬಿ ಹೋಟೆಲಿಂದ ಬಿದ್ದು ಟಾಟಾ ಎಂಡಿ ಆತ್ಮಹತ್ಯೆ? )
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications