Taliban Fight: ನಮಗೆ 24 ಗಂಟೆ ಸಮಯ ಸಾಕು ಪಾಕಿಸ್ತಾನ ಉಡೀಸ್ ಆಗುತ್ತೆ ಅಂತು ತಾಲಿಬಾನ್!
ಪಾಕಿಸ್ತಾನ ಏನೋ ಮಾಡಲು ಹೋಗಿ ಏನೇನೋ ಮಾಡಿಕೊಳ್ಳುತ್ತಾ ಇದ್ದು, ಭವಿಷ್ಯದಲ್ಲಿ ಪರಿಸ್ಥಿತಿ ವ್ಯತಿರಿಕ್ತ ಆಗುವ ಲಕ್ಷಣ ಇದ್ದರೂ ಪಾಕಿಸ್ತಾನ ಮಾತ್ರ ತನ್ನ ಅಕ್ಕಪಕ್ಕದ ದೇಶಗಳ ಜೊತೆ ಕಿತ್ತಾಡುತ್ತಲೇ ಇದೆ. ಇದೇ ರೀತಿ ತಾಲಿಬಾನ್ ವಿರುದ್ಧ ಕೂಡ ಜಗಳಕ್ಕೆ ನಿಂತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕೂಡ ಕಲಿಸಲಾಗಿದೆ. ಹೀಗಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ಯಾವ ಕ್ಷಣದಲ್ಲಿ ಎರಡೂ ಕಡೆ ಜಗಳ ಶುರುವಾಗುತ್ತೋ ಅನ್ನೋ ಟೆನ್ಷನ್ ಇದೆ. ಹೀಗಿದ್ದಾಗ ಮತ್ತೊಂದು ವಾರ್ನಿಂಗ್ ಕೊಟ್ಟಿದೆ ತಾಲಿಬಾನ್...
ತಾಲಿಬಾನ್ ಪಡೆಗಳು ಪಾಕಿಸ್ತಾನಕ್ಕೆ ಹೇಗೆಲ್ಲಾ ಏಟು ಕೊಟ್ಟಿವೆ ಅಂತಾ ಹೇಳಿದ್ರೆ, ಸ್ವತಃ ಪಾಕಿಸ್ತಾನದ ಯೋಧರ ಪ್ಯಾಂಟ್ ಕೂಡ ಬಿಚ್ಚಿಕೊಂಡು ಬಂದು ಬೀದಿಯಲ್ಲಿ ಮೆರವಣಿಗೆ ಮಾಡಿವೆ. ಹೀಗಿದ್ದರೂ, ಪಾಕಿಸ್ತಾನ ಮಾತ್ರ ದಾರಿಗೆ ಬರದೆ ತಿಕ್ಕಾಟಕ್ಕೆ ಮುಂದಾಗುತ್ತಿದೆ. ಹೀಗಾಗಿಯೇ ಮತ್ತೊಮ್ಮೆ ತಾಲಿಬಾನ್ ಎಚ್ಚರಿಕೆ ನೀಡಿದ್ದು, ನಮಗೆ 24 ಗಂಟೆ ಸಮಯ ಸಾಕು ಪಾಕಿಸ್ತಾನ ಉಡೀಸ್ ಆಗುತ್ತೆ ಅಂತಿದೆ. ಇದು ಪಾಕಿಸ್ತಾನದ ಸೇನೆ ಎದೆ ನಡುಗುವಂತೆ ಮಾಡಿದ್ದು, ಗಡಿಯಲ್ಲಿ ಮತ್ತೆ ಸೂಕ್ಷ್ಮ ಸ್ಥಿತಿ ನಿರ್ಮಾಣ ಆಗಿದೆ.

ಭೀಕರ ಯುದ್ಧಕ್ಕೆ ವೇದಿಕೆ ರೆಡಿ?
ಪಾಪಿ ಪಾಕಿಸ್ತಾನಕ್ಕೆ ತಾಲಿಬಾನ್ ಸರಿಯಾಗಿ ಪಾಠ ಕಲಿಸಿದೆ, ಆದರೂ ಪದೇ, ಪದೇ ತಂಟೆಗೆ ಬರುತ್ತಿರುವ ಪಾಕಿಸ್ತಾನ ಸೇನೆಗೆ ಸರಿಯಾಗಿ ಪಾಠ ಕಲಿಸಲು ಮುಂದೆ ನುಗ್ಗಿದೆ ತಾಲಿಬಾನ್ ಪಡೆ. ಮುಂದೆ ಏನೇ ಬಂದ್ರು ನಾವು ರೆಡಿ ಅನ್ನೋ ಮಾತನ್ನ ಹೇಳುತ್ತಿರುವ ತಾಲಿಬಾನ್ ಪಡೆಯ ಸೈನಿಕರು ಗಡಿಯಲ್ಲಿ ಹೋರಾಟ ನಡೆಸಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಅಲ್ಲದೆ ಪಾಕಿಸ್ತಾನ ಸೇನೆಯ ಟ್ಯಾಂಕರ್ & ಶಸ್ತ್ರಾಸ್ತ್ರ ಕೂಡ ಕಿತ್ತುಕೊಂಡು ಬಂದಿದ್ದಾರೆ. ಇಷ್ಟಾದರೂ ಸೈಲೆಂಟ್ ಆಗುತ್ತಿಲ್ಲ ಪಾಕಿಸ್ತಾನ, ಮುಂದೆ ಇದು ಮತ್ತೊಂದು ಯುದ್ಧದ ಆರಂಭಕ್ಕೆ ವೇದಿಕೆ ಒದಗಿಸುತ್ತಿದೆ.
ಇಷ್ಟೆಲ್ಲಾ ನಡೆದರೂ ಪಾಕಿಸ್ತಾನ ಇನ್ನೂ ತನ್ನ ಬುದ್ಧಿ ಸರಿ ಮಾಡಿಕೊಂಡಿಲ್ಲ, ಅಲ್ಲದೆ ಪಾಕಿಸ್ತಾನದ ಈ ರೀತಿ ವರ್ತನೆ ಅಕ್ಕಪಕ್ಕದ ದೇಶಗಳಿಗೆ ಕೂಡ ಸಾಕಷ್ಟು ದೊಡ್ಡ ಸಮಸ್ಯೆ ಮಾಡುತ್ತಾ ಇದೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ಇಂತಹ ಸಮಯದಲ್ಲಿ ಕಠಿಣ ಕ್ರಮ ಜರುಗಿಸಬೇಕು, ಸರಿಯಾಗಿ ಬುದ್ಧಿ ಕಲಿಸಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಆದರೆ ಇದು ನೆರವೇರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಹಾಗೇ ಭವಿಷ್ಯದಲ್ಲಿ ಕೂಡ ಪಾಕಿಸ್ತಾನದ ವರ್ತನೆ ಇದೇ ರೀತಿ ಇದ್ದರೆ ತಾಲಿಬಾನ್ ಏನು ಬೇಕಾದರೂ ಮಾಡಲು ಸಜ್ಜಾಗಿದೆ.












Click it and Unblock the Notifications