ದೇಶ ತೊರೆದ ಅಫ್ಘಾನ್ ಪಾಪ್ ತಾರೆ ಆರ್ಯಾನಾ ಸಯೀದ್
ಕಾಬೂಲ್, ಆಗಸ್ಟ್ 23: ಅಫ್ಘಾನ್ ಪಾಪ್ ತಾರೆ ಆರ್ಯಾನಾ ಸಯೀದ್ ದೇಶಬಿಟ್ಟಿದ್ದಾರೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಪತಿಯೊಂದಿಗೆ ಆರ್ಯಾನಾ ಸಯೀದ್ ದೇಶ ತೊರೆದು ಪ್ರಾಣ ಉಳಿಸಿಕೊಂಡಿದ್ದಾರೆ.
ಅಫ್ಘಾನಿಸ್ತಾನದ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ಒಂದೇ ತಿಂಗಳಿನಲ್ಲಿ ತಾಲಿಬಾನಿಗಳು ಮತ್ತೆ ಅಧಿಕಾರ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ.
ಆರ್ಯಾನ್ ಸಯೀದ್ ಅವರು ಅಫ್ಘಾನಿಸ್ತಾನದ ಜನಪ್ರಿಯ ಪಾಪ್ ತಾರೆಯಾಗಿದ್ದಾರೆ, ಅವರು ಅಫ್ಘಾನ್ ಸೇನೆಯನ್ನು ಬೆಂಬಲಿಸಿ, ತಾಲಿಬಾನ್ ಉಗ್ರವಾದವನ್ನು ತೀವ್ರವಾಗಿ ವಿರೋಧಿಸಿದ್ದರು.

ಇದೀಗ ಆರ್ಯಾನಾ'' ನಾನು ಚೆನ್ನಾಗಿದ್ದೇನೆ ಮತ್ತು ಜೀವಂತವಾಗಿದ್ದೇನೆ, ಮರೆಯಲಾಗದ ಎರಡು ರಾತ್ರಿಗಳ ನಂತರ, ನಾನು ಕತಾರ್‌ನ ದೋಹಾಗೆ ಬಂದಿದ್ದೇನೆ. ಇಸ್ತಾನ್‌ಬುಲ್‌ನಲ್ಲಿರುವ ಮನೆಗೆ ಮರಳಲು ಕಾಯುತ್ತಿದ್ದೇನೆ'' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ತಾಲಿಬಾನ್ ಸ್ವಾಧೀನದ ನಂತರ ಈಗ ಆಫ್ಘಾನ್ ಪಾಪ್ ತಾರೆ ಆರ್ಯಾನಾ ಸಯೀದ್ ಇತ್ತೀಚಿಗೆ ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಅಮೇರಿಕಾ ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ತಾಲಿಬಾನ್ ಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ಆರ್ಯನ ಗುರುವಾರ ಕಾಬೂಲ್ ನಿಂದ ಕಾಲ್ಕಿತ್ತಿದ್ದರು. ಈ ವಿಚಾರವನ್ನು ತಮ್ಮ ಇನ್ ಸ್ಟಾದಲ್ಲಿ ಖಚಿತಪಡಿಸಿದ್ದಾರೆ. ಅಫ್ಘಾನಿಸ್ತಾದಿಂದ ಪಲಾಯನ ಮಾಡಿ ಯುಎಸ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಬಳಿಕ ಇನ್‍ಸ್ಟಾಗ್ರಾಮ್ ಪೋಸ್ಟ್‍ನಲ್ಲಿ, 'ಮರೆಯಲಾಗದ ಒಂದೆರಡು ರಾತ್ರಿಗಳನ್ನು ಕಳೆದ ಬಳಿಕ ಇದೀಗ ನಾನು ಬದುಕಿದ್ದು, ಕ್ಷೇಮವಾಗಿದ್ದೇನೆ.
ಸದ್ಯ ಕತಾರ್‍ನ ದೋಹಾ ತಲುಪಿ ಇಸ್ತಾಂಬುಲ್ಗೆ ತನ್ನ ವಿಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡು ವಿಮಾನದಲ್ಲಿನ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ISIS ಮತ್ತು ತಾಲಿಬಾನ್‌ಗಳಿಗೆ ಭಯೋತ್ಪಾದಕರನ್ನು ಉತ್ಪಾದಿಸುತ್ತದೆ ಎಂದು ಆರೋಪಿಸುವ ಪಾಕಿಸ್ತಾನಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ಅವರು ಯುಎಸ್ ಸರ್ಕಾರವನ್ನು ಒತ್ತಾಯಿಸಿದರು.ಅಫ್ಘಾನ್ ನಾಗರಿಕರ ಸರಣಿ ಪೋಟೋಗಳನ್ನು ಹಂಚಿಕೊಂಡಿರುವ ಅವರು ಪಾಕ್ ಗೆ ನೀಡುತ್ತಿರುವ ಧನ ಸಹಾಯವನ್ನು ಅಮೇರಿಕಾ ನಿಲ್ಲಿಸಬೇಕೆಂದು ಅವರು ಕೇಳಿಕೊಂಡರು.
ಆರ್ಯಾನಾ ಇತ್ತೀಚೆಗೆ ಅಫ್ಘಾನಿಸ್ತಾನ ದಿಂದ ಪಲಾಯನ ಮಾಡಿ ಯುಎಸ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಆಗಸ್ಟ್ 19 ರಂದು ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಅವರು ವಿಮಾನದಲ್ಲಿನ ತನ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ಕತಾರ್‌ನ ದೋಹಾ ತಲುಪಿ ಇಸ್ತಾಂಬುಲ್ಗೆ ತನ್ನ ವಿಮಾನಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.
ಪಾಪ್ ತಾರೆ ಆರ್ಯಾನಾ ಸಯೀದ್ ಅತ್ಯಂತ ಜನಪ್ರಿಯ ಅಫ್ಘಾನ್ ಗಾಯಕಿ ಮತ್ತು ಟಿವಿ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪರ್ಷಿಯನ್ ಮತ್ತು ಪಾಷ್ಟೋದಲ್ಲಿ ಹಾಡುತ್ತಾರೆ.ಕುತೂಹಲಕಾರಿ ಸಂಗತಿ ಎಂದರೆ, ಅವರು ಆಫ್ಘನ್ ಆವೃತ್ತಿಯ ದಿ ವಾಯ್ಸ್ಲ್ ನಲ್ಲಿ ಜಡ್ಜ್ ಆಗಿದ್ದರು.
ನಂತರ, ಅವರು ಅಫ್ಘಾನ್ ಸ್ಟಾರ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾದರು.ಅವರು ಅಫ್ಘಾನ್ ಐಕಾನ್ ಪ್ರಶಸ್ತಿ ಮತ್ತು 2017 ರ ಅಫ್ಘಾನಿಸ್ತಾನದ ಅತ್ಯುತ್ತಮ ಮಹಿಳಾ ಕಲಾವಿದೆಯಂತಹ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.












Click it and Unblock the Notifications