ಕಾಬೂಲ್ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿನಿಯರಿಗೆ ಪ್ರವೇಶ ನಿಷೇಧ
ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿಕೊಂಡ ಬಳಿಕ ತನ್ನದೇ ಆದ ಕಾನೂನನ್ನು ಸೃಷ್ಟಿಸಿದೆ.
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಒಟ್ಟಿಗೆ ಕುಳಿತು ವ್ಯಾಸಂಗ ಮಾಡುವಂತಿಲ್ಲ, ಪ್ರತ್ಯೇಕವಾಗಿ ಮಹಿಳೆಯರಿಗೆ ಪಾಠ ಮಾಡಬೇಕು ಎಂದು ತಾಲಿಬಾನ್ ಹೇಳಿತ್ತು.
ಇದೀಗ ವಿಶ್ವವಿದ್ಯಾಲಯಗಳಲ್ಲಿ ಲಿಂಗ ಪ್ರತ್ಯೇಕತೆ ಇರುವುದರಿಂದ ನಿಜವಾದ ಇಸ್ಲಾಮಿಕ್ ಮನೋಭಾವ ಬರುವವರೆಗೂ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾಲಯಕ್ಕೆ ಬಾರದಂತೆ ತಾಲಿಬಾನ್ ನೇಮಿತ ಕುಲಪತಿ ಆದೇಶಿಸಿದ್ದಾರೆ.
ತಾಲಿಬಾನ್ ಇತ್ತೀಚೆಗೆ ಕಾಬೂಲ್ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಮೊಹಮ್ಮದ್ ಒಸ್ಮಾನ್ ಬಾಬರಿ ಅವರನ್ನು ತೆಗೆದು ಹಾಕಿ, ಮೊಹಮ್ಮದ್ ಅಶ್ರಫ್ ಘೈತರ್ ಅವರನ್ನು ನೇಮಕ ಮಾಡಿತ್ತು. ಎಲ್ಲಾ ಕಡೆಯಿಂದಲೂ ಟೀಕೆಗಳು ವ್ಯಕ್ತವಾಗಿತ್ತು.

ಇದೀಗ ಘೈರತ್ ಅವರು ಅಫ್ಘಾನಿಸ್ತಾನದ ಮಹಿಳಾ ಹಕ್ಕುಗಳು ಮತ್ತು ಶಿಕ್ಷಣಕ್ಕೆ ಮತ್ತೊಂದು ಹೊಡೆತ ನೀಡಿದ್ದಾರೆ. ಘೈರತ್ ಅವರು ಮಾತನಾಡಿ, ''ನಾವು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸುತ್ತೇವೆ ಮತ್ತು ನಮ್ಮ ಪ್ರಾಥಮಿಕ ಗಮನವು ಎಲ್ಲರಿಗೂ ವಿಶೇಷವಾಗಿ ಮಹಿಳೆಯರಿಗೆ ಇಸ್ಲಾಮಿಕ್ ವಾತಾವರಣವನ್ನು ನಿರ್ಮಿಸುವುದು'' ಎಂದು ಹೇಳಿದ್ದರು.
ಅಫ್ಘಾನ್ ಮಹಿಳೆಯರಿಗೆ ಷರಿಯಾ ಕಾನೂನಿನ ಮಿತಿಯೊಳಗೆ ಕೆಲಸ ಮಾಡಲು ಹಾಗೂ ಅಧ್ಯಯನ ಮಾಡಲು ಅವಕಾಶ ನೀಡಲಾಗುವುದು ಎಂದು ತಾಲಿಬಾನ್ ಹೇಳಿತ್ತು.
ಇದೀಗ ಘೈರತ್ ಎಲ್ಲಿಯವರೆಗೆ ಎಲ್ಲರೂ ಇಸ್ಲಾಮಿಕ್ ಮನೋಭಾವವನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ವಿಶ್ವವಿದ್ಯಾಲಯ ಅಥವಾ ಕೆಲಸಕ್ಕಾಗಲಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ಹೇಳಿದೆ.
ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ಕಠಿಣ ಗುಂಪು ಗುಂಪು ಹುಡುಗಿಯರು ಮತ್ತು ಮಹಿಳೆಯರಿಗೆ ಶಾಲೆ ಮತ್ತು ಕೆಲಸಕ್ಕೆ ಹಾಜರಾಗುವುದನ್ನು ನಿಷೇಧಿಸಿತ್ತು. ಕೆಲವು ಪ್ರಾಂತ್ಯಗಳಲ್ಲಿ, ಆರೋಗ್ಯ ಇಲಾಖೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣದಲ್ಲಿ ಕೆಲಸ ಮಾಡಿದ ಮಹಿಳೆಯರನ್ನು ಹೊರತುಪಡಿಸಿ, ಮಹಿಳೆಯರಿಗೆ ತಮ್ಮ ಕೆಲಸವನ್ನು ಮುಂದುವರಿಸಲು ಇನ್ನೂ ಅವಕಾಶವಿಲ್ಲ.
ಅಫ್ಘಾನಿಸ್ತಾನದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಪುನಾರಂಭಗೊಳಿಸುವಂತೆ ತಾಲಿಬಾನ್ ಆದೇಶ ಹೊರಡಿಸಿತ್ತು. ಈ ಬಗ್ಗೆ ನೀಡಿರುವ ಆದೇಶದಲ್ಲಿ ವಿದ್ಯಾರ್ಥಿನಿಗಳು ಯಾವ ರೀತಿ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿತ್ತು. ಅದರಿಂತೆ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ತಮ್ಮ ಮುಖ ಕಾಣಿಸದಂತೆ ಸಂಪೂರ್ಣವಾಗಿ(ನಖಾಬ್ ಧರಿಸುವುದು ಕಡ್ಡಾಯ) ಮುಚ್ಚಿಕೊಳ್ಳುವುದು.
ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು ಇಲ್ಲದಿದ್ದರೆ, ಒಂದೇ ಕೊಠಡಿಯಲ್ಲಿ ಇಬ್ಬರ ಮಧ್ಯೆ ಪರದೆಗಳನ್ನು ಹಾಕಿರುವ ಫೋಟೋಗಳು ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಎಂಬುದರ ಬಗ್ಗೆ ಇದುವರೆಗೂ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಆದರೆ ನಿಖಾಬ್ ಅನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಕಣ್ಣುಗಳನ್ನು ಹೊರತುಪಡಿಸಿದಂತೆ ಸಂಪೂರ್ಣ ಮುಖ ಕಾಣದ ರೀತಿಯಲ್ಲಿ ಬಟ್ಟೆಯನ್ನು ಧರಿಸಬೇಕು ಎಂದು ಹೇಳಲಾಗಿತ್ತು.
ಕಾಲೇಜುಗಳಲ್ಲಿ ಕೊಠಡಿ ಪ್ರವೇಶಿಸುವುದಕ್ಕೆ ಮತ್ತು ನಿರ್ಗಮಿಸುವುದಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ದ್ವಾರಗಳು ಇರಬೇಕು. ಯುವಕರು ಮತ್ತು ಯುವತಿಯರು ಒಟ್ಟಾಗಿ ಸೇರುವುದನ್ನು ತಡೆಯುವ ಉದ್ದೇಶದಿಂದ ಯುವಕರಿಗಿಂತ ಐದು ನಿಮಿಷ ಮೊದಲೇ ಯುವತಿಯರು ಕೊಠಡಿಗಳಿಂದ ಹೊರಹೋಗಬೇಕು. ತದನಂತರ ಯುವಕರು ಕಾಲೇಜಿನಿಂದ ಹೊರಗೆ ಹೋಗುವವರೆಗೆ ಕಾಯುವ ಕೊಠಡಿಗಳಲ್ಲಿ ಇರಬೇಕು.
"ಇದು ತೀರಾ ಕಷ್ಟಕರ ಯೋಜನೆಯಾಗಿದೆ. ಹುಡುಗಿಯರು ಮತ್ತು ಹುಡುಗರನ್ನು ಪ್ರತ್ಯೇಕವಾಗಿರಿಸಲು ನಮ್ಮಲ್ಲಿ ಸಾಕಷ್ಟು ಮಹಿಳಾ ಬೋಧಕರು ಅಥವಾ ತರಗತಿಗಳು ಇಲ್ಲ. ಆದರೆ ಅವರು ಹೆಣ್ಣುಮಕ್ಕಳಿಗೆ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗಲು ಅವಕಾಶ ನೀಡುತ್ತಿರುವುದೇ ಒಂದು ವಿಷಯವಾಗಿದೆ," ಎಂದು ಖಾಸಗಿ ವಿಶ್ವವಿದ್ಯಾಲಯದ ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ಹೇಳಿರುವುದಾಗಿ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.












Click it and Unblock the Notifications