Breaking: ಪಶ್ಚಿಮ ಪನಾಮದಲ್ಲಿ 6.7 ತೀವ್ರತೆ ಭೂಕಂಪನ
ನ್ಯೂಯಾರ್ಕ್, ಅಕ್ಟೋಬರ್ 20: ಪಶ್ಚಿಮ ಪನಾಮದಲ್ಲಿ ಗುರುವಾರ ಬೆಳಗ್ಗೆ 6.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ರೀತಿಯ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ.
ಹೆರೆರಾ, ಬೊಕಾಸ್ ಡೆಲ್ ಟೊರೊ, ವೆರಾಗ್ವಾಸ್ ಮತ್ತು ಪಶ್ಚಿಮ ಪನಾಮದಲ್ಲಿ ಭೂಕಂಪದ ಅನುಭವವಾಗಿದೆ ಎಂದು ಪನಾಮದ ರಾಷ್ಟ್ರೀಯ ನಾಗರಿಕ ರಕ್ಷಣಾ ಸಂಸ್ಥೆ ಟ್ವಿಟರ್ ಮೂಲಕ ತಿಳಿಸಿದೆ.

ದೇಶದ ಪೆಸಿಫಿಕ್ ಕರಾವಳಿಯಿಂದ ಪನಾಮದ ಬೊಕಾ ಚಿಕಾದಿಂದ ದಕ್ಷಿಣ-ನೈಋತ್ಯಕ್ಕೆ 62 ಕಿಲೋಮೀಟರ್ (39 ಮೈಲಿ) 6.2 ಮೈಲಿ (10 ಕಿಲೋಮೀಟರ್) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸಮೀಕ್ಷೆ ಹೇಳಿದೆ.












Click it and Unblock the Notifications