ವೈಲ್ಡ್‌ಲೈಫ್ ಫೋಟೋಗ್ರಾಫಿ ಪ್ರಶಸ್ತಿ ಗೆದ್ದ ಸ್ಪೇನಿನ ಬಾಲಕ ಆಂಡ್ರ್ಯೂಸ್
ಲಂಡನ್ನಿನ ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಫ್ ದ ಇಯರ್ ಡಾಟ್ ಕಾಂ ನಡೆಸುವ ಪ್ರತಿಷ್ಠಿತ ಸ್ಪರ್ಧೆಯ 10ವರ್ಷದೊಳಗಿನ ವಿಭಾಗದಲ್ಲಿ ಸ್ಪೇನ್ ದೇಶದ ಬಾಲಕ ಆಂಡ್ರ್ಯೂಸ್ ಲೂಯಿಸ್ ಡೊಮಿನ್ ಗ್ಯುವೇಜ್ ಪ್ರಶಸ್ತಿ ಗಳಿಸಿದ್ದಾರೆ.
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ ಲೈಫ್ ಫೊಟೊಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆ ಕಳೆದ 56 ವರ್ಷಗಳಿಂದ ಆಯೋಜಿಸಲಾಗುತ್ತಿದೆ.
ಈ ಸ್ಪರ್ಧೆಯಲ್ಲಿ 10ವರ್ಷದೊಳಗಿನ ವಿಭಾಗದಲ್ಲಿ ಆಂಡ್ರ್ಯೂಸ್ ತೆಗೆದ ಸ್ಟೋನ್ ಚಾಟ್ ಹಕ್ಕಿಯ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಫುಜಿ ಫಿಲಂ ಎಕ್ಸ್ -ಎಚ್ 1 ಕ್ಯಾಮೆರಾ ಹಾಗೂ 100-400 ಎಂಎಂ ಲೆನ್ಸ್ ಬಳಸಿ ತೆಗೆದ ಚಿತ್ರ ಇದಾಗಿದೆ.

ಇದೇ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಬೆಂಗಳೂರಿನ ಹುಡುಗ 9 ವರ್ಷ ವಯಸ್ಸಿನ ವಿದ್ಯುನ್ ಅವರ ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದು, ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ಸಾಧನೆ ಎನ್ನಬಹುದು.
ಪ್ರಶಸ್ತಿ ವಿಜೇತ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾದ ಚಿತ್ರಗಲನ್ನು ಲಂಡನ್ ನಲ್ಲಿ ಅಕ್ಟೋಬರ್ 16ರಿಂದ ಜೂನ್ 2021ರ ತನಕ ಪ್ರದರ್ಶನಕ್ಕಿಡಲಾಗುತ್ತದೆ. ವಿಶ್ವದ ವಿವಿಧೆಡೆಗಳಿಂದ ಬಂದ ಚಿತ್ರಗಳ ನಡುವೆ ಈ ಚಿತ್ರಕ್ಕೆ ವಿಶೇಷ ಮನ್ನಣೆ ಸಿಗಲಿದೆ. ನ್ಯಾಷನಲ್ ಹಿಸ್ಟರಿ ಮ್ಯೂಸಿಯಂನ ವೆಬ್ ತಾಣದಲ್ಲೂ ಎಲ್ಲಾ ವಿಭಾಗದ ಚಿತ್ರಗಳು ಲಭ್ಯ.

ಕೊರೊನಾವೈರಸ್ ಸೋಂಕಿನ ಭೀತಿ ಇರುವುದರಿಂದ ಈ ಬಾರಿ ಅಕ್ಟೋಬರ್ 14ರಂದು ವರ್ಚ್ಯುಯಲ್ ಸಮಾರಂಭ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲದಿದ್ದರೆ ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.












Click it and Unblock the Notifications