ಸುರಕ್ಷಿತವಾಗಿ ಮಂಗಳನ ಕಕ್ಷೆ ಸೇರಿದ ವಿಶ್ವದ ಶಕ್ತಿಶಾಲಿ ರಾಕೆಟ್

ಫ್ಲೊರಿಡಾ, ಫೆಬ್ರವರಿ 07: ಖಾಸಗಿ ಖಗೋಳ ವಿಜ್ಞಾನ ಸಂಸ್ಥೆ 'ಸ್ಪೇಸ್‌ ಎಕ್ಸ್‌' ಇಂದು ನಭಕ್ಕೆ ಉಡಾಯಿಸಿದ ಭಾರಿ ಶಕ್ತಿಯುತ ರಾಕೆಟ್‌ 'ಫಾಲ್ಕೊನ್ ಹೆವಿ' ಮಂಗಳನ ಕಕ್ಷೆಯನ್ನು ಸುರಕ್ಷಿತವಾಗಿ ಸೇರಿದೆ.

ಉಡಾಯನದ ಮೊದಲ ಹಂತದಲ್ಲಿ ಅಂತರಿಕ್ಷದ ಗಾಳಿಯ ಒತ್ತಡದ ಕಾರಣದಿಂದಾಗಿ ಸ್ವಲ್ಪ ವೇಗ ಕಳೆದುಕೊಂಡರು ನಂತರ ಸ್ಥಿರವಾಗಿ ಪೂರ್ವ ಯೋಜನೆಯಂತೆ ಇಂಧನ ಸುಡುತ್ತಾ ಮಂಗಳನ ಕಕ್ಷೆ ಪ್ರವೇಶಿಸಿದೆ.

ಸ್ಪೇಸ್‌ ಎಕ್ಸ್ ಮಾಲೀಕ, ಬಾಹ್ಯಾಕಾಶ ವಿಜ್ಞಾನಿ ಸಾಹಸಿ ಉದ್ಯಮಿ ಎಲೋನ್ ಮಸ್ಕ್ ಈ ಕುರಿತು ಟ್ವೀಟ್ ಮಾಡಿದ್ದು ಮೂರನೇ ಹಂತದ ಇಂಧನ ಬಳಕೆ ಸರಿಯಾಗಿ ಪೂರೈಕೆ ಆಗಿದ್ದು, ಈಗ ರಾಕೆಟ್ ಮಂಗಳನ ಕಕ್ಷೆ ಪ್ರವೇಶಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಎಲೋನ್ ಮಸ್ಕ್ ಅವರು ರಾಕೆಟ್‌ ನ ಉಡಾಯನದ ಪ್ರತಿ ಹಂತವನ್ನು ಟ್ವೀಟ್ ಮಾಹಿತಿ ಹಂಚಿಕೊಳ್ಳುತ್ತಿದ್ದು. ಎಲೋನ್ ಮಸ್ಕ್ ಅವರ ಈ ಸಾಧನೆಗೆ ವಿಶ್ವವೇ ಶಹಭಾಸ್ ನೀಡಿದೆ.

ಅಮೆರಿಕದ ಚತುರತೆಗೆ ಉದಾಹರಣೆ

ಅಮೆರಿಕದ ಚತುರತೆಗೆ ಉದಾಹರಣೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ವೀಟ್ ಮಾಡಿ ಎಲೋನ್ ಮಸ್ಕ್, ಸ್ಪೇಸ್ ಎಕ್ಸ್ ಮತ್ತು ನಾಸಾಕ್ಕೆ ಶುಭಾಷಯಗಳನ್ನು ಕೋರಿದ್ದಾರೆ. ನೀವು ಅಮೆರಿಕದ ಬುದ್ಧಿವಂತಿಕೆಯನ್ನು ಪ್ರಪಂಚಕ್ಕೆ ಸಾರುತ್ತಿದ್ದೀರ ಎಂದಿದ್ದಾರೆ.

ರಿಚರ್ಡ್ ಬ್ರಾನ್‌ಸನ್ ಮಾತು

ರಿಚರ್ಡ್ ಬ್ರಾನ್‌ಸನ್ ಮಾತು

ಸಾಹಸಿ ಉದ್ಯಮಿ ಎಂದೇ ಪ್ರಪಂಚದಾದ್ಯಂತ ಹೆಸರಾಗಿರುವ ವರ್ಜಿನ್ ಸಂಸ್ಥೆಯ ಸಂಸ್ಥಾಪಕ ರಿಚರ್ಡ್ ಬ್ರಾನ್‌ಸನ್ ಅವರು ಎಲೋನ್ ಮತ್ತು ಸ್ಪೇಸ್ ಎಕ್ಸ್‌ಗೆ ಶುಭಾಶಯಗಳನ್ನು ಕೋರಿದ್ದು, ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಈ ರೀತಿಯ ಸಾಹಸಕ್ಕೆ ಮುಂದಾಗಿರುವುದು ನೋಡಿದರೆ ಖುಷಿಯಾಗುತ್ತದೆ, ನೀವು ಬಾಹ್ಯಾಕಾಶ ವಿಜ್ಞಾನದ ಗಡಿಯನ್ನು ವಿಸ್ತರಿಸಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಬೆಂಬಲ ಇದೆ

ಬೆಂಬಲ ಇದೆ

ನಾಸಾ ಸಹಿತ ಸ್ಪೇಸ್‌ ಎಕ್ಸ್‌ ಸಂಸ್ಥೆಗೆ ಶುಭಾಷಯ ಕೋರಿದ್ದು, 'ನಾಸಾದ ಆಡಳಿತ ಭಾಗಿ ಸಂಸ್ಥೆಯ ಸಾಧನೆಗೆ ಶುಭಾಶಯ' ಎಂದಿದೆ. ನಾವೆಲ್ಲರೂ ಈ ವ್ಯಾಪಾರದಲ್ಲಿ ಮೊದಲ ಹೆಜ್ಜೆ ಇಡುತ್ತಿರುವುದನ್ನು ನಾವು ಹೆಮ್ಮೆಯಿಂದ ಗಮನಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿ ಬೆಂಬಲ ನೀಡಿದೆ.

ರೋಬೋಟ್ ಚಾಲಕ

ರೋಬೋಟ್ ಚಾಲಕ

ಮಾನವರಹಿತ ರಾಕೆಟ್ ಇದಾಗಿದ್ದು, ರಾಕೆಟ್‌ನೊಂದಿಗೆ ಸ್ಪೇಸ್‌ ಎಕ್ಸ್‌ ಮಾಲೀಕ ಎಲೋನ್ ಮಸ್ಕ್ ಅವರ ಕಾರನ್ನು ಕಳಿಸಿದ್ದಾರೆ. ಸಾಮಾನ್ಯವಾಗಿ ಸ್ಟೀಲ್‌ ಬ್ಲಾಕ್‌ಗಳನ್ನು ರಾಕೆಟ್‌ಗಳು ಪರೀಕ್ಷೆಗೆಂದು ಹೊತ್ತೊಯ್ಯುತ್ತವೆ ಆದರೆ ನಾನು ನನ್ನ ಕಾರನ್ನೇ ಕಳಿಸಿದ್ದೀನಿ. ಅಲ್ಲಿ ನನ್ನ ಕಾರನ್ನು ಸ್ಟಾರ್‌ಮ್ಯಾನ್ ಎಂಬ ರೋಬೊಟ್ ಓಡಿಸಲಿದೆ, ಅದೂ ಸಹ ಡೇವಿಡ್ ಬೋವಿ ಹಾಡುಗಳನ್ನು ಹಾಕಿಕೊಂಡು ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+