ಬಂಧನದ ಭೀತಿಯಲ್ಲಿ ಸ್ಯಾಮ್ ಸಂಗ್ ಕಂಪನಿ ಬಾಸ್ !!!

Posted By:
Subscribe to Oneindia Kannada

ಸಿಯೋಲ್ (ದಕ್ಷಿಣ ಕೊರಿಯಾ), ಜನವರಿ 17: ಭ್ರಷ್ಟಾಚಾರ ಹಾಗೂ ಹಲವಾರು ಹಗರಣಗಳನ್ನು ಮಾಡಿರುವ ಆರೋಪ ಹೊತ್ತಿರುವ ಖ್ಯಾತ ಸ್ಮಾರ್ಟ್ ಫೋನ್ ಹಾಗೂ ಗೃಹಬಳಕೆ ವಸ್ತುಗಳ ಕಂಪನಿಯಾದ ಸ್ಯಾಮ್ ಸಂಗ್ ನ ಉಪಾಧ್ಯಕ್ಷ ಲೀ ಜೀ ಯಂಗ್ ಅವರನ್ನು ಬಂಧಿಸಲು ಇಲ್ಲಿನ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ.

ನ್ಯಾಯಾಲಯದಲ್ಲಿ ನಡೆಯುತ್ತಿರುವ ಲೀ ಮೇಲಿನ ಭ್ರಷ್ಟಾಚಾರ ಆರೋಪಗಳ ಕುರಿತ ವಿಚಾರಣೆಯು ತಾರ್ಕಿಕ ಅಂತ್ಯ ತಲುಪಿದ್ದು, ಶೀಘ್ರದಲ್ಲೇ ಅವರ ವಿರುದ್ಧ ಬಂಧನದ ಆದೇಶ ಹೊರಬೀಳಲಿರುವುದರಿಂದ ಸರ್ಕಾರವು ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸ್ಯಾಮ್ ಸಂಗ್ ಮನೆಗೆ ಬೆಂಕಿ ಬಿದ್ದಂತಾಗಿದೆ.

South Korea Seeks Warrant To Arrest Samsung Boss

ಈ ಬೆಳವಣಿಗೆಗಳು, ಭಾರತದಲ್ಲಿ ಮಧ್ಯಮ ವರ್ಗದ ಸ್ಮಾರ್ಟ್ ಫೋನ್ ಕನಸನ್ನು ನನಸು ಮಾಡಿಕೊಟ್ಟ, ದಕ್ಷಿಣ ಕೊರಿಯಾ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಗಣನೀಯ ಕಾಣಿಕೆ ನೀಡಿದ್ದ ಸ್ಯಾಮ್ ಸಂಗ್ ಈಗ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.

ಅಧಿಕೃತವಾಗಿ ಕಂಪನಿಯ ಉಪಾಧ್ಯಕ್ಷರಾಗಿದ್ದರೂ, ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಎಲ್ಲಾ ಆಡಳಿತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆಂದು ಲೀ ವಿರುದ್ಧದ ಪ್ರಮುಖ ಆರೋಪವಾಗಿದೆ. ಅಲ್ಲದೆ, ಅವರ ಕುಟುಂಬಸ್ಥರೂ ಕಂಪನಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಲಂಚ, ಹಣ ದುರುಪಯೋಗ, ಸುಳ್ಳು ಪ್ರಮಾಣ ಪತ್ರಗಳ ಸೃಷ್ಟಿ ಸೇರಿದಂತೆ ಹಲವಾರು ರೀತಿಯಲ್ಲಿ ಕಂಪನಿಯ ಹಣ ದೋಚಿದ್ದಾರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ, ಲೀ ವಿರುದ್ಧ ಸ್ವತಂತ್ರ್ಯವಾಗಿ ತನಿಖೆ ನಡೆಸಲಾಗಿದ್ದು, ಇದರಲ್ಲಿ ಸ್ಯಾಮ್ ಸಂಗ್ ಕಂಪನಿಯೊಂದಿಗೆ ದೋಸ್ತಿ ಹೊಂದಿರುವ ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷೆಯಾದ ಪಾರ್ಕ್ ಗುಯೆನ್ ಹೆ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ಹಾಗಾಗಿ, ಲೀ ಅವರ ಬಂಧನವಾದರೆ, ಆನಂತರ ಪಾರ್ಕ್ ಅವರ ಬಂಧನವೂ ಜರುಗಬಹುದೆಂದು ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Korean government seeks arrest warrant against Samsung Company's vice president Lee Jae-yong, who is facing charges of corruption.
Please Wait while comments are loading...