ಕಿಮ್ ಜಾಂಗ್ ಉನ್ ವಿರುದ್ಧ ಸೇಡಿಗೆ ದಕ್ಷಿಣ ಕೊರಿಯಾ ಹಿಂಗಾ ಮಾಡೋದು?

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಡೋ ಎಡವಟ್ಟು ಒಂದಲ್ಲ, ಎರಡಲ್ಲ. ಶತ್ರುಗಳ ವಿರುದ್ಧದ ಕೋಪಕ್ಕೆ ಏನೋ ಮಾಡಲು ಹೋಗಿ ಏನೇನೋ ಮಾಡುತ್ತಾನೆ ಈ ಎಡವಟ್ಟು ರಾಜ. ಇಂತಿಪ್ಪ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ದಕ್ಷಿಣ ಕೊರಿಯಾ ಸಿಕ್ಕಾಪಟ್ಟೆ ಕೋಪಗೊಂಡಿದೆ. ಈಗಾಗ್ಲೇ ಒಂದು ರೌಂಡ್ ಕಿಮ್‌ಗೆ ಬೆವರು ಇಳಿಸಿದ್ದ ದಕ್ಷಿಣ ಕೊರಿಯಾ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಭಯ ಹುಟ್ಟಿಸಿದೆ.

ಕಿಮ್ ಜಾಂಗ್ ಉನ್ ಅದೆಷ್ಟು ಕ್ಷಿಪಣಿ ಪರೀಕ್ಷೆ ನಡೆಸಿದರೂ, ಅದೆಂತಹ ಬಾಂಬ್ ಪರೀಕ್ಷೆ ನಡೆಸಿದರೂ ದಕ್ಷಿಣ ಕೊರಿಯಾ ಸೈಲೆಂಟ್ ಆಗಿತ್ತು. ಆದ್ರೆ ಯಾವಾಗ ಕಿಮ್ ಜಾಂಗ್ ಉನ್ ರಷ್ಯಾಗೆ ಹೋಗಿ, ಪುಟಿನ್ ಜೊತೆ ಮಾತುಕತೆ ಮಾಡಿ ಬಂದನೋ ಆ ದಿನದಿಂದಲೇ ದಕ್ಷಿಣ ಕೊರಿಯಾ ತನ್ನ ಉಗ್ರ ರೂಪ ತೋರಿಸುತ್ತಿದೆ. ಈಗ ಕೂಡ ಅಷ್ಟೇ ಕೋಪ ಬಂದರೆ ತಾನು ಏನು ಅನ್ನೋದನ್ನ ಹೇಳುತ್ತಿದೆ ದಕ್ಷಿಣ ಕೊರಿಯಾ. ಹಾಗಾದ್ರೆ ಸರ್ವಾಧಿಕಾರಿ ಮೇಲೆ ಇದ್ದ ಸಿಟ್ಟನ್ನು ದಕ್ಷಿಣ ಕೊರಿಯಾ ತೀರಿಸಿಕೊಂಡಿದ್ದು ಹೇಗೆ?

south-korea-now-warned-north-korea

ತಂಟೆಗೆ ಬರಬೇಡ ಕಿಮ್, ಹುಷಾರ್..!

ಹೌದು, ದ.ಕೊರಿಯಾ ಸೇನಾ ದಿನಾಚರಣೆ ಹಿನ್ನೆಲೆ ತನ್ನ ರಾಜಧಾನಿ ಸೋಲ್‌ನಲ್ಲಿ ಆಧುನಿಕ ಅಸ್ತ್ರಗಳ ಬಂಡಾರವನ್ನೇ ಪ್ರದರ್ಶನ ಮಾಡಿದೆ. ಈ ಮೂಲಕ ಕಿಮ್ ತನಲ್ಲಿನ ಪರಮಾಣು ಅಸ್ತ್ರಗಳನ್ನು ಬಳಸಿದರೆ ನಾನು ಕೂಡ ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ಕೊಟ್ಟಿದೆ ದಕ್ಷಿಣ ಕೊರಿಯಾ. ಅತ್ಯಾಧುನಿಕ ಶಸ್ತಾಸ್ತ್ರ ಪ್ರದರ್ಶನದ ಜೊತೆ ಸೈನಿಕರ ಪರೇಡ್‌ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿರುವ ದ.ಕೊರಿಯಾ ತಾನು ಏನು ಕಮ್ಮಿ ಇಲ್ಲ ಅಂತಾ ತೋರಿಸಿದೆ. ಹೀಗೆ ಕಳೆದ 10 ವರ್ಷದಲ್ಲಿ ನಡೆದಿರುವ ಅತಿದೊಡ್ಡ ಸೇನಾ ಪರೇಡ್ ಇದಾಗಿದೆಯಂತೆ.

ಏನೆಲ್ಲಾ ತೋರಿಸಿದೆ ದ.ಕೊರಿಯಾ?

ದಕ್ಷಿಣ ಕೊರಿಯಾ ಸೇನೆ ಈ ಪರೇಡ್‌ಗೆ ಸಾಕಷ್ಟು ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಹೀಗಾಗಿ ಉತ್ತರ ಕೊರಿಯಾ ಅಕಸ್ಮಾತ್ ತಮ್ಮ ವಿರುದ್ಧ ಯುದ್ಧಕ್ಕೆ ಬಂದರೆ ತಾವು ಎಲ್ಲ ರೀತಿಯಲ್ಲಿ ಸಿದ್ಧ ಎಂಬುದನ್ನ ತೋರಿಸಿದೆ. ಉತ್ತರ ಕೊರಿಯಾ ವಿರುದ್ಧ ಹೋರಾಡಬಲ್ಲ ಅತ್ಯಾಧುನಿಕ ಟ್ಯಾಂಕರ್‌, ಫಿರಂಗಿ ವ್ಯವಸ್ಥೆ, ಡ್ರೋನ್ & ಶಕ್ತಿಶಾಲಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳ ಮೆರವಣಿಗೆಯ ಮೂಲಕ ಉತ್ತರ ಕೊಟ್ಟಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ದಕ್ಷಿಣ ಕೊರಿಯಾ ಸೈನಿಕರು ಈ ಪರೇಡ್‌ನಲ್ಲಿ ಭಾಗವಹಿಸಿದ್ದು ಅಮೆರಿಕದ 300 ಸೈನಿಕರು ಕೂಡ ಇದ್ದರು ಎನ್ನಲಾಗಿದೆ.

south-korea-now-warned-north-korea

ಯುದ್ಧದ ಕಿಡಿಗೆ ಪೆಟ್ರೋಲ್ ಸುರಿದ!

ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಹೇಗಿದೆ ಅಂದ್ರೆ ಈ ಪ್ರಪಂಚ ಈಗಾಗಲೇ 2 ಭಾಗವಾಗಿ ಹೋಗಿದೆ. ಕೆಲವು ದೇಶಗಳು ರಷ್ಯಾ ಪರ ನಿಂತರೆ ಹಲವು ದೇಶಗಳು ಅಮೆರಿಕ ಜೊತೆ ಸೇರಿವೆ. ಹೀಗಾಗಿ ಎರಡೂ ಬಣಗಳ ನಡುವೆ ಕಿತ್ತಾಟ ಜೋರಾಗಿದ್ದು, ಈ ಸಂದರ್ಭದಲ್ಲೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಬೆಂಕಿ ಇಟ್ಟಿದ್ದಾನೆ. ರಷ್ಯಾಗೆ ವಿಸಿಟ್ ಕೊಟ್ಟು, ಪುಟಿನ್ ಭೇಟಿ ಮಾಡಿರುವ ಕಿಮ್ ವಿರುದ್ಧ ಈಗಾಗಲೇ ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಾಯಕರು ಗುಡುಗಿದ್ದರು. ಈಗ ತನ್ನಲ್ಲಿರುವ ಹತ್ಯಾರಗಳನ್ನು ಹೊರ ತೆಗೆದು ಇನ್ನೊಮ್ಮೆ ಎಚ್ಚರಿಸಿದೆ ದ.ಕೊರಿಯಾ.

ಈ ಎಲ್ಲಾ ಬೆಳವಣಿಗೆ ಬಗ್ಗೆ ಅಳೆದು, ತೂಗಿ ಹೇಳುವುದಾದರೆ ಕಿಮ್ ಜಾಂಗ್ ಉನ್ ಇದೀಗ ಮತ್ತೊಮ್ಮೆ ಶತ್ರುಗಳನ್ನ ಕೆಣಕಿ ಯುದ್ಧಕ್ಕೆ ಕರೆದಂತೆ ಕಾಣುತ್ತಿದೆ. ಅದರಲ್ಲೂ ರಷ್ಯಾ ಸೇನೆ ಜೊತೆಗೆ ಕಿಮ್ ಒಪ್ಪಂದ ಮಾಡಿಕೊಂಡು ಬಂದಿರುವುದು ಅಮೆರಿಕದ ಕಣ್ಣು ಕೆಂಪಾಗಿಸಿದೆ. ಈ ನಡುವೆ ಉಕ್ರೇನ್ ವಿರುದ್ಧ ಯುದ್ಧದಲ್ಲಿ ವೆಪನ್ಸ್ ಪೂರೈಕೆ ಮಾಡಲು ರಷ್ಯಾಗೆ ಮಾತು ಕೊಟ್ಟಿದ್ದಾನೆ ಕಿಮ್ ಎಂಬ ವರದಿಯೂ ಸಂಚಲನ ಸೃಷ್ಟಿಸಿದ್ದು, ಮುಂದೆ ಏನಾಗುತ್ತೋ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+