ತಾಯಿ ನೋಡುವುದಕ್ಕೆ ಚೆನ್ನಾಗಿಲ್ಲವೆಂದು ಮದುವೆಗೆ ಕರೆಯದ ಮಗ:ಕೊನೆಗೆ ಏನಾಯ್ತು ಗೊತ್ತಾ?
ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಅಂತ ಕರೀತಾರೆ. ತಮ್ಮ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇರುವವಳೇ ತಾಯಿ. ಮಕ್ಕಳು ತನಗೆ ಎಷ್ಟೇ ನೋವು ಮಾಡಿದರೂ ಮಕ್ಕಳಿಗೆ ಮಾತ್ರ ಸುಖವನ್ನೇ ಬಯಸುವವಳು. ನಮ್ಮ ತಾಯಿ ಹರಕಲು ಸೀರೆ ಉಟ್ಟಿದ್ದಾಳೆಂತ ದಾರಿಲಿ ಹೋಗುವವರು ರೇಷ್ಮೇ ಸೀರೆ ಉಟ್ಟವಳನ್ನ ತಾಯಿ ಅಂತ ಕರಿಯೋದಕ್ಕೆ ಆಗಲ್ಲ. ತಾಯಿಯ ರೂಪ, ಬಣ್ಣ, ಆಕಾರ ಯಾವುದೂ ಮುಖ್ಯ ಆಗೋದೇ ಇಲ್ಲ. ಆದ್ರೆ ಇಲೊಬ್ಬ ತನ್ನ ಮದುವೆ ಸಮಾರಂಭದಿಂದಲೇ ತಾಯಿಯನ್ನು ದೂರ ಇಟ್ಟಿದ್ದಾನೆ. ಇದಕ್ಕೆ ಕಾರಣ ಇಷ್ಟೇ. ತಾಯಿ ನೋಡುವುದಕ್ಕೆ ಸುಂದರಿ ಅಲ್ಲ ಎನ್ನುವುದು.
ತಾಯಿಯನ್ನೇ ಮದುವೆಗೆ ಕರೆಯದ ಮಗ
ಈತನ ಈ ಬುದ್ದಿಗೆ ಈಗ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾನೆ. ಅಮ್ಮ ನೋಡುವುದಕ್ಕೆ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ತಾಯಿಯನ್ನು ತನ್ನ ಮದುವೆಗೆ ಕರೆಯದೇ ಇದ್ದ ಉದ್ಯೋಗಿಯನ್ನು ಕಂಪನಿಯ ಬಾಸ್ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಸುದ್ದಿಯನ್ನು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದೆ.

ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿಯ ಸ್ಥಾಪಕ ಮತ್ತು ಅಧ್ಯಕ್ಷ ಉದ್ಯೋಗಿಯನ್ನು ಕೆಲಸದಿಂದ ತೆಗದು ಹಾಕಿರುವ ಬಾಸ್. ತನ್ನ ನೌಕರರಿಗೆ 180 ಮಿಲಿಯನ್ ಯುವಾನ್ ಅಂದರೆ 25 ಮಿಲಿಯನ್ ಡಾಲರ್‌ಗಿಂತ ಹೆಚ್ಚು ಹಣವನ್ನು ಬೋನಸ್ ರೂಪದಲ್ಲಿ ವಿತರಣೆ ಮಾಡಿದವರು ಇವರು. ಇದೇ ಕಾರಣಕ್ಕೆ ಕುಯಿ ಅವರನ್ನು ಚೀನಾದ ಅತ್ಯಂತ ಉದಾರ ಬಾಸ್ ಎಂದು ಕರೀತಾರೆ. ಕುಯಿ ಕಂಪನಿಯ ಇಂಟರ್ನ್‌ಶಿಪ್ ಕಾರ್ಯಕ್ರಮದ ಸಂದರ್ಭದಲ್ಲಿ ನೈತಿಕ ಮೌಲ್ಯಗಳು ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತಾ ತಾಯಿಯ ಕತೆಯನ್ನು ಹೇಳಿದ್ದಾರೆ.
ಕುಯಿ ತನ್ನ ಉದ್ಯೋಗಿಯ ಮದುವೆಗೆ ಹೋಗಿದ್ದಾರೆ. ಅಲ್ಲಿ ವರನ ತಾಯಿ ಮದುವೆ ಮನೆಯಲ್ಲಿ ಇರುವ ಬದಲು ಹೊರಗೆ ಕಾರ್ಖಾನೆಯ ಬಳಿ ಒಂಟಿಯಾಗಿ ಕುಳಿತಿರುವುದನ್ನು ಗಮನಿಸುತ್ತಾರೆ. ಯಾಕೆ ಹೀಗೆ ಎಂದು ಕೇಳಿದಾಗ, ತಾಯಿ ಸುಂದರವಾಗಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಮದುವೆಗೆ ಕರೆದಿಲ್ಲ ಎನ್ನುವುದನ್ನು ಮಗ ಒಪ್ಪಿಕೊಳ್ಳುತ್ತಾರೆ.
ಕೆಲಸದಿಂದಲೇ ವಜಾ :
ತನ್ನ ಉದ್ಯೋಗಿಯ ಈ ರೀತಿಯ ಯೋಚನೆಯಿಂದ ಕೋಪಗೊಂಡ ಕುಯಿ, ಆ ವ್ಯಕ್ತಿ ಎರಡು ವರ್ಷದ ಮಗುವಾಗಿದ್ದಾಗ ತಣದೆ ತೀರಿಕೊಂಡಿರುವುದು, ನಂತರ ತಾಯಿಯೇ ಕಷ್ಟಪಟ್ಟು ಆತನನ್ನು ಬೆಳೆಸಿದ್ದು ಎನ್ನುವುದನ್ನು ನೆನಸಿಸುತ್ತಾರೆ. ಕುಯಿ ಆ ಉದ್ಯೋಗಿಯನ್ನು ತಕ್ಷಣವೇ ಕೆಲಸದಿಂದ ತೆಗದು ಹಾಕುತ್ತಾರೆ. ತನ್ನಿಂದ ತಪ್ಪಾಗಿದೆ ಮೂಂದೆ ಹೀಗೆ ಆಗುವುದಿಲ್ಲ ತನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಿ ಎಂದು ಎಷ್ಟೇ ಮನವಿ ಮಾಡಿದರೂ ಕುಯಿ ಮನಸ್ಸು ಕರಗುವುದಿಲ್ಲ, ತನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ.ಇದರ ಬದಲ ತಾಯಿಗೆ ಹಣದ ಸಮಸ್ಯೆ ಆಗದೆ ಇರಲಿ ಎನ್ನುವ ಉದ್ದೇಶದಿಂದ ಅವರಿಗೆ ತನ್ನ ಸಂಸ್ಥೆಯ ಲಾಜಿಸ್ಟಿಕ್ಸ್ ವಿಭಾಗದಲ್ಲಿ ಕೆಲಸ ಕೊಡುತ್ತಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದು ಬರುತ್ತಿದೆ ಕಾಮೆಂಟ್‌ಗಳು
ಈ ಘಟನೆಯು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಲವರು ಕುಯಿ ನಿರ್ಧಾರವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಬಾಸ್ ಉದ್ಯೋಗಿಯ ವೈಯಕ್ತಿಕ ವಿಚಾರವನ್ನು ಪ್ರಶ್ನಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಹೆತ್ತವರನ್ನು ಪ್ರೀತಿಸಲು ಸಾಧ್ಯವಾಗದ ವ್ಯಕ್ತಿ ಮಾನವೀಯ ಮೌಲ್ಯವನ್ನು ಹೊಂದುವುದು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮನುಷ್ಯನಿಗೆ ವೃತ್ತಿಪರ ಕೌಶಲ್ಯಗಳನ್ನು ಕಲಿಸಬಹುದು, ಆದರೆ ಕೃತಜ್ಞತೆ, ರೀತಿ, ಸಭ್ಯತೆ ಇದು ಅತ್ಯಂತ ಮೂಲಭೂತ ಮಾನದಂಡಗಳಾಗಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ಮಧ್ಯೆ, ಮತ್ತೊಬ್ಬರು ಒಂದು ಕಂಪನಿಯು ಕೆಲವು ಮೌಲ್ಯಗಳನ್ನು ಹೇಳಿಕೊಡಬಹುದು. ಆದರೆ ತಾಯಿ ಮತ್ತು ಮಗನ ನಡುವಿನ ವಿಚಾರ ವೈಯಕ್ತಿಕ. ಉದ್ಯೋಗಿ ಆಫೀಸ್‌ನಲ್ಲಿ ತನ್ನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದರೂ ಈ ವಿಚಾರಕ್ಕೆ ಕೆಲಸದಿಂದ ತೆಗೆದು ಹಾಕುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications
