ಟ್ರಂಪ್ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆ ಎಂಬ ವದಂತಿ ಸತ್ಯವೇ?

ವಾಷಿಂಗ್ಟನ್, ಜನವರಿ 31: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲೆನಿಯಾ ಟ್ರಂಪ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ವದಂತಿಗೆ ಪುಷ್ಠಿ ನೀಡುವಂಥ ಸಂಗತಿಗಳು ಆಗಾಗ ನಡೆಯುತ್ತಿವೆ.

ಡೊನಾಲ್ಡ್ ಟ್ರಂಪ್ ಅವರು ಮೊಟ್ಟ ಮೊದಲ ಬಾರಿಗೆ ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲೂ ಮೆಲೆನಿಯಾ ಅವರು ಪತಿಯೊಂದಿಗೆ ಬರದೆ, ತಾವೇ ಪ್ರತ್ಯೇಕವಾಗಿ ಶ್ವೇತ ಭವನಕ್ಕೆ ಆಗಮಿಸಿದ್ದರು.

ಕೆಲ ದಿನಗಳ ಹಿಂದೆ ಸ್ವಿಟ್ಜರ್ಲೆಂಡ್ ನ ಡಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಫೋರಂ ನಲ್ಲೂ ಡೊನಾಲ್ಡ್ ಅವರ ಜೊತೆ ಹೋಗಬೇಕಿದ್ದ ಮೆಲೆನಿಯಾ ಇದ್ದಕ್ಕಿದ್ದಂತೆಯೇ ತಮ್ಮ ಪ್ರವಾಸವನ್ನು ರದ್ದು ಮಾಡಿದ್ದರು. ಕಾರಣ ಡೊನಾಲ್ಡ್ ಟ್ರಂಪ್ ವೊಬ್ಬರೇ ಡಾವೋಸ್ ಗೆ ಹೋಗಿದ್ದರು.

Something went wrong between Donald Trump and Melania?

ಲೇಖಕ ಮೈಕೆಲ್ ವುಲ್ಫ್ ಅವರ ಫೈರ್ ಅಂಡ್ ಫೂರಿ ಪುಸ್ತಕದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹಾಲೆ ಅವರಿಗೆ ಸಂಬಂಧವಿದೆ ಎಂದು ಬರೆದ ನಂತರ ನಡೆದ ಈ ಎಲ್ಲ ಘಟನೆಗಳು ಟ್ರಂಪ್ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟಿಸಿವೆ.

ಆದರೆ ಈ ಕುರಿತ ಎಲ್ಲಾ ವದಂತಿಗಳನ್ನೂ ಟ್ರಂಪ್ ದಂಪತಿಯ ಆಪ್ತ ವಲಯ ತಳ್ಳಿಹಾಕಿದ್ದು, ಟ್ರಂಪ್ ದಂಪತಿ ಅನ್ಯೋನ್ಯವಾಗಿಯೇ ಇದ್ದಾರೆ. ಇವೆಲ್ಲ ಮಾಧ್ಯಮದ ಸೃಷ್ಟಿ ಎಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+