Get Updates
Get notified of breaking news, exclusive insights, and must-see stories!

ಮೊಟ್ಟ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ ಆಯ್ಕೆ ಮಾಡಿದ ರಾಷ್ಟ್ರ

ಮಧ್ಯ ಯುರೋಪ್ ರಾಷ್ಟ್ರ, ಬೆಟ್ಟ ಗುಡ್ಡಗಳ ನಾಡು, ಸ್ಕೀಕಿಂಗ್, ಸರೋವರಗಳಿಗೆ ಹೆಸರಾದ ಸ್ಲೊವೇನಿಯಾದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರು ರಾಷ್ಟ್ರದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ವಕೀಲೆಯಾಗಿರುವ ನಟಾಶಾ ಪಿರ್ಕ್ ಮುಸಾರ್ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ.

ನಟಾಶಾ ಪಿರ್ಕ್ ಮುಸಾರ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 54ರಷ್ಟು ಮತಗಳನ್ನು ಗಳಿಸಿ ಸಮೀಪದ ಪ್ರತಿಸ್ಪರ್ಧಿ ಬಲಪಂಥೀಯ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ ಆಂಡ್ಜೆ ಲೊಗಾರ್ ಅವರನ್ನು ಸೋಲಿಸಿದ್ದಾರೆ. ಆಂಡ್ಜೆ ಶೇ 46ರಷ್ಟು ಮತ ಗಳಿಸಿದ್ದಾರೆ ಎಂದು ವರದಿಯಾಗಿದೆ.

ಎರಡು ವಾರಗಳ ಹಿಂದೆ ಮೊದಲ ಸುತ್ತಿನ ಮತದಾನದ ಅಂಕಿ ಅಂಶ ಪ್ರಕಾರ ಲೋಗರ್ ಅವರನ್ನು ಪಿರ್ಕ್ ಮುಸಾರ್ ಹಿಂದಿಕ್ಕಿದ್ದರು. ಏಪ್ರಿಲ್‌ನಲ್ಲಿ ಸ್ಲೊವೇನಿಯಾದ ಸಂಸತ್ತಿನ ಚುನಾವಣೆಯಲ್ಲಿ ಕೇಂದ್ರ-ಎಡ ಒಕ್ಕೂಟ ಜಯ ದಾಖಲಿಸಿತ್ತು. ದೇಶದ ಲಿಬರಲ್ ನೀತಿ ಬೆಂಬಲಿತ ಪಕ್ಷಕ್ಕೆ ನಟಾಶಾ ಗೆಲುವು ಹೆಚ್ಚಿನ ಬಲ ತಂದಿದೆ.

ಕಳೆದ ಎರಡು ಅವಧಿಯಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬೋರುಟ್ ಪಹೋರ್ ಅವರ ಸ್ಥಾನವನ್ನು ನಟಾಶಾ ತುಂಬಲಿದ್ದೆರ್.

"ಎಲ್ಲಾ ಸ್ಲೊವೇನಿಯನ್ನರ ನಡುವೆ ಮುಕ್ತ ಮಾತುಕತೆ, ಸಂವಹನಕ್ಕೆ ದಾರಿ ಮಾಡಿಕೊಡುವುದು ನನ್ನ ಮೊದಲ ಕಾರ್ಯವಾಗಿದೆ" ಎಂದು ಹೊಸ ಅಧ್ಯಕ್ಷೆ ಹೇಳಿದ್ದಾರೆ.

Turnout for Sundays runoff was 49.9%, according to the election commission

ನಟಾಶಾ ಪಿರ್ಕ್ ಮುಸಾರ್ ಯಾರು?

ಮಾಜಿ ಟಿವಿ ನಿರೂಪಕ, ಪ್ರಭಾವಿ ವಕೀಲೆಯಾಗಿ ಗುರುತಿಸಿಕೊಂಡಿರುವ 54 ವರ್ಷವಯಸ್ಸಿನ ಪಿರ್ಕ್ ಮುಸಾರ್ ಹೊಸ ಜವಾಬ್ದಾರಿಗೆ ಸಜ್ಜಾಗಿದ್ದಾರೆ. ಮಾನವ ಹಕ್ಕುಗಳು, ಕಾನೂನು ಮತ್ತು ಸಾಮಾಜಿಕ ಕಲ್ಯಾಣ ವಿಷಯಗಳ ಬಗ್ಗೆ ತಮ್ಮ ಚುನಾವಣಾ ಪ್ರಚಾರದ ವೇಳೆ ಹೆಚ್ಚಿನ ಒತ್ತು ನೀಡಿದ್ದರು.

ಅವರು ಒಂದು ದಶಕದ ಕಾಲ ದೇಶದ ಡೇಟಾ ಸಂರಕ್ಷಣಾ ಪ್ರಾಧಿಕಾರದ ಮುಖ್ಯಸ್ಥರಾಗಿದ್ದವರು. ಪಿರ್ಕ್ ಮುಸಾರ್ ಅವರು ತಮ್ಮ ಸ್ಥಳೀಯ ಸ್ಲೊವೇನಿಯಾದಲ್ಲಿ ಹಕ್ಕುಸ್ವಾಮ್ಯ ಮತ್ತು ಇತರ ಪ್ರಕರಣಗಳಲ್ಲಿ ಯುಎಸ್ ಮಾಜಿ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಪ್ರತಿನಿಧಿಸಿದ್ದರು.

ಮಾನವ ಹಕ್ಕುಗಳ ವಕೀಲೆಯಾಗಿ ಸ್ಲೊವೇನಿಯಾ ಮತ್ತು ವಿದೇಶಗಳಲ್ಲಿ "ಮಹಿಳೆಯರ ಪರ ಧ್ವನಿ" ಎತ್ತಿದ್ದರು.

ಅಧ್ಯಕ್ಷ ಸ್ಥಾನವು ಬಹುಮಟ್ಟಿಗೆ ವಿಧ್ಯುಕ್ತವಾಗಿದೆ. ಅಧ್ಯಕ್ಷರು ಪ್ರಧಾನ ಮಂತ್ರಿಗಳು ಮತ್ತು ಸಾಂವಿಧಾನಿಕ ನ್ಯಾಯಾಲಯದ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ, ನಂತರ ಅವರು ಸಂಸತ್ತಿನಲ್ಲಿ ಚುನಾಯಿತರಾಗುತ್ತಾರೆ ಮತ್ತು ಭ್ರಷ್ಟಾಚಾರ-ವಿರೋಧಿ ಆಯೋಗದ ಸದಸ್ಯರನ್ನು ನೇಮಿಸುತ್ತಾರೆ.

ತೆರಿಗೆ ಸ್ವರ್ಗಗಳೆನಿಸುವ ತಾಣಗಳಲ್ಲಿ ಪಿರ್ಕ್ ಮುಸಾರ್ ಅವರ ಪತಿ ಭಾರಿ ಹೂಡಿಕೆ ಮಾಡಿರುವುದು ಚುನಾವಣಾ ಪ್ರಚಾರದ ಸಮಯದಲ್ಲಿಕೊಂಚ ಬಾಧಿಸಿತ್ತು. ಆದರೆ, ಪಿರ್ಕ್ ಗೆಲುವಿಗೆ ಮುಳುವಾಗಿಲ್ಲ ಎಂಬುದು ವಿಶೇಷ.

The new president will replace Borut Pahor who has been active in politics for 30 years

ಬಲಪಂಥೀಯರಿಗೆ ಹಿನ್ನಡೆ

ದೇಶದ ಸಂಪ್ರದಾಯವಾದಿ ಪಕ್ಷಗಳಿಗೆ ಈ ಫಲಿತಾಂಶ ಹಿನ್ನಡೆಯನ್ನು ಉಂಟು ಮಾಡಿದೆ.

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 46 ವರ್ಷ ವಯಸ್ಸಿನ ಲೋಗರ್ ಅವರು ಬಹುಕಾಲದಿಂದ ಜಾನೆಜ್ ಜನ್ಸಾ ಅವರ ಸ್ಲೋವೇನಿಯನ್ ಡೆಮಾಕ್ರಟಿಕ್ ಪಾರ್ಟಿ (SDS) ನ ದೀರ್ಘಕಾಲದ ಸದಸ್ಯರಾಗಿದ್ದಾರೆ. ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿಯಾಗಿ ಮರು-ಚುನಾಯಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಜನ್ಸಾ ಅವರು ಮಾಧ್ಯಮ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಮೇಲೆ ದಾಳಿ ಮಾಡಿದ್ದಾರೆ ಮತ್ತು ಅವರ ಇತ್ತೀಚಿನ ಅಧಿಕಾರಾವಧಿಯಲ್ಲಿ ಕಾನೂನಿನ ನಿಯಮವನ್ನು ದುರ್ಬಲಗೊಳಿಸಿದ್ದಾರೆ ಎಂಬ ಆರೋಪಗಳಿವೆ.

"ಆಡಳಿತದ ಒಕ್ಕೂಟಕ್ಕಿಂತ ವಿಭಿನ್ನ ದೃಷ್ಟಿಕೋನವನ್ನು ಪ್ರತಿನಿಧಿಸಿದರೆ ಅದು "ಒಳ್ಳೆಯದು", ಸಮತೋಲನ ಕಾಯ್ದುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮವಾಗಿದೆ. ಎಂದು ಲೋಗರ್ AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. (AFP, AP, dpa, Reuters)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
/disk2/v/apache/htdocs/VIRTUAL/thatskannada/public_html/common/dw-tracking.html