ಅಪರಿಚಿತನಿಂದ ಗುಂಡಿನ ದಾಳಿ: ಎಂಟು ಮಂದಿ ಸಾವು

ಬರ್ಲಿನ್, ಫೆಬ್ರವರಿ 20: ಅಪರಿಚತರು ನಡೆಸಿದ ಎರಡು ಗುಂಡಿನ ದಾಳಿಯಲ್ಲಿ ಕನಿಷ್ಟ ಎಂಟು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಜರ್ಮಿನಿಯ ಹುನಾನಾ ನಗರದಲ್ಲಿ ಘಟನೆ ನಡೆದಿದ್ದು, ಭಾರತೀಯ ಕಾಲಮಾನ 2:30 ಮಧ್ಯರಾತ್ರಿ ಸಮಯ ಅಪರಿಚಿತರು ಬಾರ್ ಒಂದರಲ್ಲಿ ಮೊದಲಿಗೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿ ಆಗಿದ್ದಾನೆ.

ಎರಡನೇ ಗುಂಡಿನ ದಾಳಿಯು ಹುನಾನಾ ದ ಮತ್ತೊಂದು ಬಾರ್‌ನಲ್ಲಿ ಶೂಟೌಟ್ ಮಾಡಿದ್ದಾರೆ. ಈ ದಾಳಿಯನ್ನೂ ಸಹ ಇವರೇ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

 Shootout In Germany, 8 People Killed

ಸ್ಥಳೀಯ ಸುದ್ದಿವಾಹಿನಿ ಪ್ರಕಾರ, ಅಪರಿಚಿತ ಗುಂಪೊಂದು ಮೊದಲಿಗೆ ಶಿಶಾ ಬಾರ್‌ನಲ್ಲಿ ಗುಂಡಿನ ದಾಳಿ ನಡೆಸಿ ಮೂವರನ್ನು ಕೊಂದಿದೆ. ನಂತರ ಕಾರಿನಲ್ಲಿ ಪರಾರಿಯಾಗಿ ಅರೆನಾ ಬಾರ್ ಆಂಡ್ ಕೆಫೆ ಗೆ ನುಗ್ಗಿ ಅಲ್ಲಿ ಐವರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ದಾಳಿ ಮಾಡಿರುವುದಕ್ಕೆ ಕಾರಣ ಪತ್ತೆಯಾಗಿಲ್ಲ.

ಕಪ್ಪು ಬಣ್ಣದ ವಾಹನದಲ್ಲಿ ಕೊಲೆಗಾರರು ತೆರಳಿರುವ ಮಾಹಿತಿ ಮಾತ್ರವೇ ಪೊಲೀಸರಿಗೆ ಲಭ್ಯವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಐದು ದಿನಗಳ ಹಿಂದೆಯಷ್ಟೆ ಬರ್ಲಿನ್‌ನಲ್ಲಿ ಶೂಟೌಟ್ ನಡೆದಿತ್ತು. ಹಾಸ್ಯ ಮಂಜರಿ ಕಾರ್ಯಕ್ರಮದಲ್ಲಿ ನಡೆದ ಶೂಟೌಟ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+