ಶಿಕಾಗೋದಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಾಯ
ಶಿಕಾಗೋ, ನ. 29 : ಇಲಿನಾಯ್ ನ ರೊಮೊವಿಲ್ಲೆಯಲ್ಲಿರುವ ಕೋಹ್ಲ್ ಸ್ಟೋರ್ ಬಳಿ ಗುರುವಾರ ಸಂಜೆ 10 ಗಂಟೆಗೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. ಕೆಲ ಅಪರಿಚಿತರು ಬಟ್ಟೆಗಳನ್ನು ಕದ್ದು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಪ್ಪು ಬಣ್ಣದ ಸೇಡನ್ ಕಾರಿನತ್ತ ಓಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೊಲೀಸನೊಬ್ಬ ಶಂಕಿತ ಕಳ್ಳರ ಕಾರನ್ನು ನಿಲ್ಲಿಸಲು ಯತ್ನಿಸಿದಾಗ, ಆತ ಕಾರನ್ನು ನಿಲ್ಲಿಸದೆ ಪೊಲೀಸನ್ನು ಎಳೆದುಕೊಂಡೇ ಕಾರನ್ನು ಚಲಾಯಿಸಿದ್ದಾನೆ. ಅಲ್ಲಿದ್ದ ಮತ್ತೊಬ್ಬ ಪೊಲೀಸ್ ಗುಂಡು ಹಾರಿಸಿದಾಗ ಕಾರಿನ ಚಾಲಕನ ಮೇಲೆ ಗುಂಡು ಹಾರಿಸಿದ್ದರಿಂದ ಆತನ ಭುಜಕ್ಕೆ ಗಾಯವಾಗಿದೆ.

ಇಬ್ಬರಿಗೂ ಆಗಿರುವ ಗಾಯ ಗಂಭೀರವಾಗಿಲ್ಲ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಲಾಕ್ ಸೇಡನ್ ಪಾಂಟಿಯಾಕ್ ಕಾರಿನ ಹಿಂಭಾಗದ ಗಾಜಿನಿಂದ ಗುಂಡು ಹೊಕ್ಕಿವೆ. ಈ ಘಟನೆ ಚಿಕ್ಕದಾಗಿದ್ದರೂ ಜನರನ್ನು ಭಯಭೀತರನ್ನಾಗಿಸಿದೆ. ಇಲ್ಲಿಂದ ಆದಷ್ಟು ಬೇಗನೆ ಜಾಗ ಖಾಲಿ ಮಾಡಿದರೆ ಸಾಕು ಎಂದು ಹಲವಾರು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
ಅಮೆರಿಕಾದಲ್ಲಿ ಥ್ಯಾಂಕ್ಸ್ ಗಿವಿಂಗ್ ಸಮಯವಾದ್ದರಿಂದ ಬಹುತೇಕ ಜನರು ನೆಂಟರಿಷ್ಟರನ್ನು ಭೇಟಿ ಮಾಡುವುದು, ಉಭಯ ಕುಶಲೋಪರಿ ವಿಚಾರಿಸುವುದಕ್ಕೆ ಹೆಚ್ಚು ಸಮಯ ವ್ಯಯಿಸುತ್ತಾರೆ. ಪ್ರಸ್ತುತ ಶೂಟಿಂಗ್ ನಡೆದಿರುವ ಕೋಹ್ಲ್ ಪ್ರದೇಶದಲ್ಲಿ ಬೃಹತ್ ಶಾಪಿಂಗ್ ಮಳಿಗೆಗಳಿದ್ದು, ಜನನಿಬಿಡ ಪ್ರದೇಶದಲ್ಲಿಯೇ ಈ ಘಟನೆ ನಡೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ.












Click it and Unblock the Notifications