• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೇತಾಜಿ, ನೆಹರೂ ನಂಬಿಕಸ್ತ ನಂಬಿಯಾರ್ 'ಸ್ಪೈ'

By Mahesh
|

ಲಂಡನ್, ಅ.26: ನೇತಾಜಿ ಸುಭಾಷ್ ಚಂದ್ರ್ ಬೋಸ್ ಅವರ ನಂಬಿಕಸ್ತ, ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರ ಆಪ್ತ ಗೆಳೆಯ ಭಾರತದ ರಾಯಭಾರಿಯಾಗಿದ್ದ ಎ. ಸಿ. ಎಸ್. ನಂಬಿಯಾರ್ ಅವರು ಸೋವಿಯತ್ ರಷ್ಯಾದ ಗೂಢಚಾರನಾಗಿದ್ದರು ಎಂದು ಬ್ರಿಟಿಷರು ಸಂಗ್ರಹಿಸಿದ ದಾಖಲೆಗಳಿಂದ ತಿಳಿದು ಬಂದಿದೆ.

ಲಂಡನ್ನಿನಲ್ಲಿರುವ ರಾಷ್ಟ್ರೀಯ ರಹಸ್ಯ ದಾಖಲೆಯಲ್ಲಿ ನಂಬಿಯಾರ್ ಬಗ್ಗೆ ಉಲ್ಲೇಖಿಸಲಾಗಿದೆ. ನಂಬಿಯಾರ್ ಅವರು 1924 ರಲ್ಲಿ ಪತ್ರಕರ್ತರಾಗಿ ಬರ್ಲಿನ್ ಗೆ ತೆರಳಿದ್ದರು ಹಾಗೂ ಭಾರತದ ಕಮ್ಯುನಿಸ್ಟ್ ಗುಂಪಿನ ಪರವಾಗಿ ಕೆಲಸ ಮಾಡಿದ್ದ ಇವರು ಸೋವಿಯತ್ ರಷ್ಯಾಗೆ 1929ರಲ್ಲಿ ತೆರಳಿ ಅತಿಥಿಯಾಗಿ ನೆಲೆಸಿದ್ದರು.

ಎರಡನೇ ಮಹಾಯುದ್ಧದ ಘೋಷಣೆಯಾದ ಬೆನ್ನಲ್ಲೇ ಜರ್ಮನಿಯನ್ನು ತೊರೆದಿದ್ದರು. ನಂತರ ಸುಭಾಷ್ ಚಂದ್ರ ಬೋಸ್ ಅವರ ಅನುಯಾಯಿಯಾಗಿ ಬರ್ಲಿನ್ ನಲ್ಲಿ ಗುರುತಿಸಿಕೊಂಡರು. ನೇತಾಜಿ ಕನಸು ಕಂಡಿದ್ದ ಫ್ರೀ ಇಂಡಿಯಾ ಚಳವಳಿಗೆ ಜರ್ಮನ್ ಮೂಲದ ಆರ್ಥಿಕ ಬೆಂಬಲಿಗನಾಗಿ ನಂಬಿಯಾರ್ ಪಾತ್ರವಹಿಸಿದ್ದರು. ಜರ್ಮನಿಯಿಂದ ಜಪಾನ್ ಗೆ ನೇತಾಜಿ ತೆರಳಲು ನಂಬಿಯಾರ್ ನೆರವಾಗಿದ್ದರು ಎಂದು ದಾಖಲೆಗಳು ಹೇಳಿವೆ. [ಪಾಕಿಸ್ತಾನದಲ್ಲಿ ಗೂಢಚಾರಿ ರವೀಂದರ್ ಕೌಶಿಕ್]

ಅದರೆ, ನಾಜಿಗಳ ಸಂಪರ್ಕ ಹೊಂದಿರುವ ಆರೋಪ ಹೊರೆಸಿ ಅರಾಥಿಲ್ ಕಾಂಡೆತ್ ನಾರಾಯಣ್ ನಂಬಿಯಾರ್ ಅವರನ್ನು ಆಸ್ಟ್ರೀಯಾದಲ್ಲಿ 1945ರಲ್ಲಿ ಬಂಧಿಸಲಾಯಿತು. ಯುದ್ಧದ ನಂತರ ಕೌನ್ಸಿಲರ್, ಸ್ಕಾಂಡಿನೇವಿಯಾ, ಪಶ್ಚಿಮ ಜರ್ಮನಿಗೆ ಭಾರತದ ರಾಯಭಾರಿಯಾಗಿ ಕೊನೆಗೆ ಹಿಂದೂಸ್ತಾನ್ ಟೈಮ್ಸ್ ನ ಯುರೋಪಿಯನ್ ಕರೆಸ್ಪಾಂಡೆಂಟ್ ಆಗಿ ಕೂಡಾ ಕಾರ್ಯನಿರ್ವಹಿಸಿದರು. [ಮಹಾಯುದ್ಧದ ಜನ್ಮ ಶತಮಾನೋತ್ಸವ]

ನೇತಾಜಿ ಅವರ ಆಪ್ತರು, ಆಜಾದ್ ಹಿಂದ್ ಕಾರ್ಯಕರ್ತರ ಗುಪ್ತ ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದ ಬ್ರಿಟಿಷರಿಗೆ 1959ರಲ್ಲೇ ನಂಬಿಯಾರ್ ಅವರು ಸೋವಿಯತ್ ರಷ್ಯಾಗೆ ಬೇಹುಗಾರಿಕೆ ಮಾಡುತ್ತಿರುವ ಮಾಹಿತಿ ಸಿಕ್ಕಿತ್ತು. ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಬಳಕೆಯಾದ ಜರ್ಮನ್ ಸಬ್ ಮೇರಿನ್ ಯು ಬೋಟ್ 234ರಲ್ಲಿ ನಂಬಿಯರ್ ಅವರು ಬೋಸ್ ಅವರಿಗೆ ಬರೆದಿರುವ ಪತ್ರಗಳ ಪ್ರತಿಗಳು ಸಿಕ್ಕಿದ್ದವು ಎಂದು ಬ್ರಿಟಿಷರು ಹೇಳಿದ್ದಾರೆ.[ದೇಶಭಕ್ತ, ವೀರ ಸೇನಾನಿ ನೇತಾಜಿ]

ಪಂಡಿತ್ ನೆಹರೂ ಅವರ ಬಗ್ಗೆ ಅತ್ಯಂತ ಪ್ರಮುಖ ವ್ಯಕ್ತಿ ಅವರಿಗೆ ಎಲ್ಲದರ ಬಗ್ಗೆ ಮಾಹಿತಿ ಎಂದು ನಂಬಿಯಾರ್ ತನ್ನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ಸ್ನೇಹದ ಕುರುಹಾಗಿ ನಂಬಿಯಾರ್ ಅವರನ್ನು ಪಂಡಿತ್ ಜೀ ಅವರು ರಾಯಭಾರಿಯಾಗಿ ನೇಮಿಸಿದ್ದರು ಎಂದು ಬ್ರಿಟಿಷರ ವಶದಲ್ಲಿರುವ ದಾಖಲೆಗಳಲ್ಲಿವೆ.(ಪಿಟಿಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A deputy of freedom fighter Netaji Subhash Chandra Bose, an "old friend" of Pandit Jawaharlal Nehru and a former Indian ambassador, A C N Nambiar, has been described as a Soviet spy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more