ಜಗತ್ತಿನ ನಾಲ್ಕನೇ ಅಪಾಯಕಾರಿ ನಗರ ದೆಹಲಿǃ
ನವದೆಹಲಿ, ನ. 4: ದೆಹಲಿ ವಿಶ್ವದಲ್ಲೇ ಮಹಿಳೆಯರಿಗೆ 4ನೇ ಅಪಾಯಕಾರಿ ನಗರ ಎಂಬ ಆತಂಕಕಾರಿ ಸಂಗತಿಯನ್ನು ಸಮೀಕ್ಷೆಯೊಂದು ಬಹಿರಂಗ ಮಾಡಿದೆ. ಅದರಲ್ಲೂ ಸಾರ್ವಜನಿಕ ಸಾರಿಗೆ ಬಳಸುವ ಮಹಿಳೆಯರಿಗೆ ದೆಹಲಿ ಕಂಟಕಪ್ರಾಯವಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ.
ಥಾಮ್ಸನ್ ರೈಟರ್ಸ್ ಫೌಂಡೇಷನ್ ನಡೆಸಿದ ಸಮೀಕ್ಷೆ ಇಂಥ ಆಘಾತಕಾರಿ ವರದಿ ನೀಡಿದೆ. ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗಾಗುತ್ತಿರುವ ಲೈಂಗಿಕ ದೌರ್ಜನ್ಯ ಆಧರಿಸಿ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯಲ್ಲಿ ಒಟ್ಟು ಆರು ಪ್ರಶ್ನೆಗಳನ್ನು ಕೇಳಲಾಗಿತ್ತು.[ರಾಜಸ್ಥಾನದಲ್ಲಿ ಅತ್ಯಾಚಾರ, ಮುಂದೇನಾಯ್ತೆಂದರೆ..]

ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ, ಒಬ್ಬಳೆ ಮನೆಗೆ ತೆರಳುವ ಮಹಿಳೆ, ಮಹಿಳೆಯರ ಬಗ್ಗೆ ಬಳಸುವ ಕೀಳು ಶಬ್ದ ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಳಗಿತ್ತು.
ಅಲ್ಲದೇ ಸಮೀಕ್ಷೆ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರು ಅನುಭವಿಸುವ ದೈಹಿಕ ದೌರ್ಜನ್ಯ, ದೌರ್ಜನ್ಯ ಎದುರಾಗುತ್ತಿದ್ದರೆ ಅಧಿಕಾರಿಗಳು ಮತ್ತು ಉಳಿದ ಪ್ರಯಾಣಿಕರಿಂದ ದೊರೆಯುವ ಪ್ರತಿಕ್ರಿಯೆ, ರಕ್ಷಣಾ ಕ್ರಮಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿತ್ತು.
ಕೊಲಂಬೀಯಾದ ರಾಜಧಾನಿ ಬೊಗೋಟಾ ಮಹಿಳೆಯರಿಗೆ ದೌರ್ಜನ್ಯ ಎಸಗುವುದರಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮೆಕ್ಸಿಕೋ, ಪೆರುವಿನ ಲಿಮಾ ಮತ್ತು ನವದೆಹಲಿ ನಿಲ್ಲುತ್ತವೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರ ಹೊಸ ಬುಲೆಟ್ ಟ್ರೇನ್ ಸಂಚಾರಕ್ಕೆ ವ್ಯವಸ್ಥೆ ಮಾಡಹೊರಟಿದೆ. ಆದರೆ ಮೊದಲು ಮಹಿಳೆಯರ ಸುರಕ್ಷತೆ ಮತ್ತು ದೌರ್ಜನ್ಯ ತಡೆಗೆ ಇನ್ನು ಹೆಚ್ಚಿನ ಕ್ರಮ ತೆಗೆದುಕೊಂಡರೆ ಒಳಿತು ಎಂಬುದು ಜನರ ಅಭಿಪ್ರಾಯ.












Click it and Unblock the Notifications