ಸೈಕಲ್ ಬಿಟ್ಟು 159 ಸೀಟುಗಳನ್ನು ಮಾತ್ರ ಕದ್ದ ವೃದ್ಧ ಕಾರಣವೇನು?
ಟೊಕಿಯೋ, ಅಕ್ಟೋಬರ್ 16: ಸೈಕಲ್ ಬಿಟ್ಟು ಕೇವಲ ಸೈಕಲ್ ಸೀಟುಗಳನ್ನು ಮಾತ್ರ ಕದಿಯುತ್ತಿದ್ದ ವೃದ್ಧನನ್ನು ಪೊಲೀಸರು ಟೊಕಿಯೋದಲ್ಲಿ ಬಂಧಿಸಿದ್ದಾರೆ.
ಇದುವರೆಗೂ ಆತ 159ಕ್ಕೂ ಹೆಚ್ಚು ಸೈಕಲ್ ಸೀಟುಗಳನ್ನು ಕಳವು ಮಾಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಆತ ಕಳ್ಳನೇ ಅಥವಾ ಸೀಟುಗಳನ್ನು ಮಾತ್ರ ಕದಿಯುವ ಕಾಯಿಲೆ ಇದೆಯೇ ಎಂದುಕೊಳ್ಳಬೇಡಿ.
ಕಳೆದ ಒಂದು ವರ್ಷಗಳ ಹಿಂದೆ ಅವರ ಸೈಕಲ್‌ನ ಸೀಟನ್ನು ಯಾರೋ ಕದ್ದಿದ್ದ ಕಾರಣ ಸೇಡು ತೀರಿಸಿಕೊಳ್ಳಲು ಕಳೆದ ಒಂದು ವರ್ಷದಿಂದ ಸೈಕಲ್ ಸೀಟು ಕದಿಯುತ್ತಿದ್ದರು ಎಂದು ತಿಳಿದುಬಂದಿದೆ.

2018ರಲ್ಲಿ ನನ್ನ ಬೈಸಿಕಲ್ ಸೀಟ್ ಕಳುವಾದಾಗ ನಾನು ಇನ್ನೊಂದು ಸೀಟ್ ಕೊಂಡುಕೊಂಡೆ ಆದರೆ, ಕಳುವಾದಾಗ ಆಗುವ ನೋವಿನ ಅನುಭವ ಇತರರಿಗೂ ಆಗಲಿ ಎಂಬ ಉದ್ದೇಶದಿಂದ ಹಾಗೂ ಸೇಡು ತೀರಿಸಿಕೊಳ್ಳಲು ಸೀಟ್ ಕಳುವು ಮಾಡಲು ಆರಂಭಿಸಿದ್ದಾಗಿ ಹಟೋರಿ ಪೊಲೀಸರಿಗೆ ತಿಳಿಸಿದ್ದಾನೆ.
ಅಕಿಯೋ ಹಟೋರಿ (61) ಬಂಧಿತ. ಕೆಲವರು ನಿಲ್ಲಿಸಿದ್ದ ಬೈಸಿಕಲ್ಗಳಿಂದ ಸೀಟ್ಗಳನ್ನು ಕಳವು ಮಾಡಿ ತನ್ನ ಬ್ಯಾಗ್ನೊಳಗೆ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಿಡಿಯೋ ತುಣುಕು ಪರಿಶೀಲಿಸಿದ ತನಿಖಾಧಿಕಾರಿಗಳು ಆರೋಪಿ ಹಟೋರಿ ನಿವಾಸವನ್ನು ಪತ್ತೆಹಚ್ಚಿ ದಾಳಿ ನಡೆಸಿದಾಗ ರಹಸ್ಯ ಸ್ಥಳದಲ್ಲಿ 159 ಸೀಟ್ಗಳನ್ನು ಅಡಗಿಸಿಟ್ಟಿದ್ದು ಕಂಡುಬಂದಿದೆ.











Click it and Unblock the Notifications