ಕೊರೊನಾ ಜನ್ಮ ಭೂಮಿ ವುಹಾನ್ ನಲ್ಲಿ 3 ತಿಂಗಳ ಬಳಿಕ ಶಾಲೆಗಳು ಪುನರಾರಂಭ!
ಬೀಜಿಂಗ್, ಮೇ 8: ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತಿರುವ ಡೆಡ್ಲಿ ನೋವೆಲ್ ಕೊರೊನಾ ವೈರಸ್ ಮೊಟ್ಟ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ.
ಕೋವಿಡ್-19 ನಿಂದ ಮೊದಲು ಜರ್ಜರಿತವಾಗಿದ್ದ ವುಹಾನ್ ಇದೀಗ ನಿಧಾನವಾಗಿ ಸಹಜ ಸ್ಥಿತಿಯತ್ತ ಹೆಜ್ಜೆ ಇಡುತ್ತಿದೆ. ಮೂರು ತಿಂಗಳ ಬಳಿಕ ವುಹಾನ್ ನಲ್ಲಿ ಶಾಲೆಗಳು ಪುನರಾರಂಭಗೊಂಡಿವೆ. ಹೆಗಲ ಮೇಲೆ ಬ್ಯಾಗ್ ಹೊತ್ತು ವುಹಾನ್ ವಿದ್ಯಾರ್ಥಿಗಳು ಕ್ಲಾಸ್ ರೂಮ್ ನಲ್ಲಿ ಹಾಜರ್ ಆಗಿದ್ದಾರೆ.
ಮುಖಗವುಸು ತೊಟ್ಟು ಶಾಲೆಗೆ ಬರುತ್ತಿರುವ ವಿದ್ಯಾರ್ಥಿಗಳನ್ನು ಕ್ಲಾಸ್ ರೂಮ್ ಒಳಗೆ ಬರುವ ಮುನ್ನ ಟೆಂಪರೇಚರ್ ಮತ್ತು ಡಿಸ್ ಇನ್ಫೆಕ್ಷನ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಹೈಸ್ಕೂಲ್ ಮತ್ತು ವೊಕೇಷನಲ್ ಸ್ಕೂಲ್ ಗಳು ತೆರೆದಿದ್ದು, ವಿದ್ಯಾರ್ಥಿಗಳು ಇದೀಗ ಕಾಲೇಜ್ ಎಂಟ್ರೆನ್ಸ್ ಎಕ್ಸಾಂ ಎದುರಿಸಬೇಕಿದೆ.
ವುಹಾನ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. 3800 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಎರಡು ತಿಂಗಳ ಕಠಿಣ ಲಾಕ್ ಡೌನ್ ಬಳಿಕ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಿದ್ದ ವುಹಾನ್ ನಲ್ಲಿ ಇದೀಗ ಶಾಲೆಗಳು ರೀ-ಓಪನ್ ಆಗಿವೆ.












Click it and Unblock the Notifications