ದುಬೈನಲ್ಲಿ ಸಂಸಾರ ಮುರಿದ ವಾಟ್ಸಾಪ್ ಸಂದೇಶ

ದುಬೈ, ನ.18: ಸಾಮಾಜಿಕ ಜಾಲ ತಾಣಗಳಿಂದ ಯಾರಿಗೆ ಲಾಭವೋ ಯಾರಿಗೆ ನಷ್ಟವೋ ಗೊತ್ತಿಲ್ಲ. ಆದರೆ, ಮನೆ ಮುರಿಯುವ ಅಪ್ಲಿಕೇಷನ್ ಆಗಿ ಪರಿವರ್ತನೆಗೊಂಡಿದೆ. ಫೇಸ್ ಬುಕ್ ಚಾಟ್ ನಿಂದ ಆಗುವ ಅನಾಹುತಗಳ ಬೆನ್ನಲ್ಲೇ ವಾಟ್ಸಪ್ ಸಂದೇಶದಿಂದ ಪತಿ ಪತ್ನಿ ಬೇರೆಯಾಗಿದ್ದಾರೆ.

ವಾಟ್ಸಾಪ್​ ಚಾಟಿಂಗ್ ಚಟ ಅಂಟಿಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಗೂ ಇದೇ ಚಟ ಹತ್ತಿಸಿದ್ದ. ಅದರೆ, ಮೊದಮೊದಲು ಪತಿಯ ಸಂದೇಶಕ್ಕೆ ಮರು ಉತ್ತರ ನೀಡುತ್ತಿದ್ದ ಪತ್ನಿ ನಂತರ ವಾಟ್ಸಾಪ್ ನಲ್ಲಿ ತನ್ನ ಗೆಳೆಯರು, ಕುಟುಂಬವರ್ಗದೊಡನೆ ಹರಟೆ ಹೊಡೆಯಲು ತೊಡಗುತ್ತಾಳೆ. [ಎಸ್ಎಂಎಸ್ ವಿಚ್ಛೇದನ ಸಂದೇಶ ಮಾನ್ಯವೇ?]

Saudi man divorces wife for ignoring his WhatsApp messages

ಇದರಿಂದ ಬೇಸತ್ತ ಪತಿ ತನ್ನ ಪತ್ನಿ ತಾನು ಕಳಿಸಿದ ವಾಟ್ಸಾಪ್​ ಮೆಸೇಜ್​ಗಳನ್ನು ​ಕಡೆಗಣಿಸುತ್ತಿದ್ದಾಳೆ ಎಂದು ಆರೋಪಿಸಿ ಆಕೆಗೆ ವಿಚ್ಛೇದನ ನೀಡಿದ್ದಾನೆ.
ನನ್ನ ಪತ್ನಿಗೆ ನನ್ನ ಸಂದೇಶಕ್ಕಿಂತ ಸ್ನೇಹಿತರು, ಕುಟುಂಬಸ್ಥರೊಂದಿಗೆ ಹರಟೆ ಹೊಡೆಯುತ್ತಿರುತ್ತಾಳೆ. ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದಾಳೆ. ನಾನು ಆಕೆಗೆ ವಾಟ್ಸಾಪ್​ನಲ್ಲಿ ಮೆಸೇಜ್​ ಕಳಿಸಿದರೂ ಸ್ನೇಹಿತರ ಜೊತೆ ಹರಟೆಯಲ್ಲಿ ತೊಡಗಿದ್ದ ಆಕೆ, ಪ್ರತಿಕ್ರಿಯೆ ನೀಡಿಲ್ಲ ಎಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾನೆ.[ಆರೋಗ್ಯ ಶಂಕಿಸಿದ ಹೆಂಡತಿಗೆ ಗಂಡನಿಂದ ಬಿಡುಗಡೆ]

ವಾಟ್ಸಾಪ್ ಇತ್ತೀಚೆಗೆ ಹೊರಡಿಸಿರುವ ಹೊಸ ಸೌಲಭ್ಯ ಮೂಲಕ ಆಕೆ ನನ್ನ ಸಂದೇಶಗಳನ್ನು ನಿರ್ಲಕ್ಷಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ನನ್ನ ಸಂದೇಶ ಆಕೆಗೆ ತಲುಪಿರುವುದು ಹಾಗೂ ಅದನ್ನು ಆಕೆ ಓದಿರುವುದು ಕಂಡು ಬಂದಿದೆ. ನನ್ನ ಪತ್ನಿ ಬೇಕಂತಲೇ ಹೀಗೆ ಮಾಡುತ್ತಿದ್ದಾಳೆ ಎಂಬುದು ಇದರಿಂದ ಗೊತ್ತಾಗಿದೆ. ಹೀಗಾಗಿ ನಾನು ವಿಚ್ಛೇದನ ಬಯಸಿದ್ದೇನೆ ಎಂದು 30 ವರ್ಷ ಹರೆಯ ಪತಿ ಹೇಳಿಕೊಂಡಿದ್ದಾನೆ.

2011ರ ಯುಕೆ ಸಮೀಕ್ಷೆ ಪ್ರಕಾರ ಫೇಸ್ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಪತಿ-ಪತ್ನಿ ನಡುವೆ ಸಾಮರಸ್ಯ ಬೆಳೆಯುವುದಕ್ಕಿಂತ ಕದಂಕ ಉಂಟಾಗುತ್ತಿದೆ. ಇದೇ ಕಾರಣಕ್ಕೆ ವಿವಾಹ ವಿಚ್ಛೇದನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+