ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಕ್ಕೂ ಎಫ್‌ಬಿ-ವಾಟ್ಸಾಪ್ ಖರೀದಿಸಿದ್ದು ಎಷ್ಟಕ್ಕೆ?

|
Google Oneindia Kannada News

ಬೆಂಗಳೂರು, ಅ. 8: ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಯುವಕರ ಪ್ರೀತಿಗೆ ಪಾತ್ರವಾಗಿರುವ ವಾಟ್ಸಾಪ್ ಖರೀದಿಗೆ ಮುಂದಾಗಿದೆ ಎಂಬುದು ಹಳೆ ಸುದ್ದಿ. ಈಗಿರುವ ಮಾಹಿತಿ ಏನಪ್ಪಾ ಅಂದ್ರೆ ಖರೀದಿ ಮೌಲ್ಯ ನಿರ್ಧಾರವಾಗಿದೆಯಂತೆ. ಅದು ಬರೋಬ್ಬರಿ 22 ಬಿಲಿಯನ್‌ ಡಾಲರ್‌ಗೆ!

ವಾಟ್ಸಾಪ್ ಕೊಳ್ಳಲು ಕಳೆದ ಫೆಬ್ರವರಿಯಲ್ಲೇ ಫೇಸ್‌ಬುಕ್‌ ನಿರ್ಧರಿಸಿದ್ದರೂ ಮಾತುಕತೆ ಅರ್ಧಕ್ಕೆ ನಿಂತಿತ್ತು. ಒಟ್ಟು ಮೌಲ್ಯ ಎಷ್ಟು ಎಂಬ ಗೊಂದಲ ಹಾಗೆ ಇತ್ತು. ಈಗ ಅದಕ್ಕೆಲ್ಲ ತೆರೆ ಬಿದ್ದಿದೆ.[ಎಫ್ ಬಿ-ವಾಟ್ಸಾಪ್ ಖರೀದಿ ಹಿಂದಿರುವ ಉದ್ದೇಶವೇನು?]

face book

ಯುರೋಪಿನ ಟೆಲಿಕಮ್ಯೂನಿಕೇಶನ್‌ ಸಂಸ್ಥೆಗಳ ವಿರೋಧದ ನಡುವೆಯೂ ಒಪ್ಪಂದ ಏರ್ಪಟ್ಟಿದೆ. ಯುಎಸ್‌ ಸೆಕ್ಯೂರಿಟೀಸ್‌ ಮತ್ತು ಎಕ್ಸ್‌ಚೆಂಜ್‌ ಕಮೀಷನ್ ಈ ಬಗ್ಗೆ ವರದಿ ನೀಡಿದೆ. ಒಟ್ಟು 22 ಬಿಲಿಯನ್‌ ಡಾಲರ್‌ಗೆ ವಾಟ್ಸಾಪ್ ಖರೀದಿ ಮಾಡಲು ತೀರ್ಮಾನಿಸಲಾಗಿದೆ ಎಂದು ವರದಿ ಹೇಳಿದೆ. ಒಟ್ಟಿನಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ವ್ಯವಹಾರ ಅಂತಿಮ ಘಟ್ಟ ತಲುಪಿದೆ.

ಒಪ್ಪಂದದ ನಂತರ ವಾಟ್ಸಾಪ್ ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಅಲುಮ್ನಿ ಬ್ರಿಯಾನ್ ಆಕ್ಷನ್ ಕ್ರಮವಾಗಿ 6.8 ಬಿಲಿಯನ್ ಡಾಲರ್‌, 3.5 ಬಿಲಿಯನ್ ಡಾಲರ್‌ ಕಿಸೆಗೆ ಸೇರಿಸಿಕೊಳ್ಳಲಿದ್ದಾರೆ ಎಂದು ಪೋರ್ಬ್ಸ್ ತನ್ನ ವರದಿಯಲ್ಲಿ ಹೇಳಿದೆ. ಅಲ್ಲದೇ ಜಾನ್ ಕೌಮ್ ಫೇಸ್‌ಬುಕ್‌ ಸಿಇಒ ಮಾರ್ಕ್ ಝಕರ್ಬರ್ಗ್ ರೀತಿಯಲ್ಲೇ ಪ್ರಮುಖ ಸ್ಥಾನವೊಂದನ್ನು ಪಡೆಯಲಿದ್ದು ಗೌರವಾರ್ಥವಾಗಿ ಒಂದು ಡಾಲರ್‌ ಸಂಬಳ ಪಡೆಯಲಿದ್ದಾರೆ.[ಮೋದಿ ಭೇಟಿಗೆ ಸಜ್ಜಾದ ಫೇಸ್ಬುಕ್ ಸಿಇಒ ಮಾರ್ಕ್]

ಯುರೋಪಿನ ಟೆಲಿಕಮ್ಯೂನಿಕೇಶನ್‌ ಸಂಸ್ಥೆಗಳ ತೀವ್ರ ವಿರೋಧದ ನಡುವೆಯೂ ಒಪ್ಪಂದ ಏರ್ಪಟ್ಟಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಮಾನ್ಯ. ಇಂಥವನ್ನು ಎದುರಿಸಲು ಉಳಿದ ಕಂಪನಿಗಳು ತಯಾರಾಗಬೇಕು ಎಂದು ವಾಲ್‌ ಸ್ಟ್ರೀಟ್‌ ಜರ್ನಲ್‌ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ಯುರೋಪ್‌ ಖಂಡವೊಂದರಲ್ಲೇ 6 ನೂರು ಮಿಲಿಯನ್‌ ಜನ ವಾಟ್ಸಾಪ್ ಬಳಸುತ್ತಾರೆ. ಏಷ್ಯಾ ಮತ್ತು ಅಮೆರಿಕದಲ್ಲಿ ಪ್ರತಿದಿನ ಬಳಕೆ ಹೆಚ್ಚಾಗುತ್ತಿದ್ದು ಇನ್ನು ಮುಂದೆ ಯಾವ ರೀತಿಯ ಬದಲಾವಣೆಗಳನ್ನು ಕಾಣಬಹುದು ಎಂಬುದನ್ನು ನೋಡಬೇಕಾಗಿದೆ.

English summary
Facebook officially sealed its massive purchase of WhatsApp, a report filed with the U.S. Securities and Exchange Commission stated, with a final price of about $22 billion. When the E.U. approved the purchase after much resistance from Europe’s telecommunications industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X