ರಕ್ಷಿತ್‌ ಶೆಟ್ಟಿ ಎಲ್ಲಿದ್ದಾರೆ? ಯಾವಾಗ ಬರ್ತಾರೆ ಎಂದು ಕೊನೆಗೂ ಅಪ್‌ಡೇಟ್‌ ಕೊಟ್ಟ ಗೆಳೆಯ ರಿಷಬ್‌ ಶೆಟ್ಟಿ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಯಶಸ್ಸಿನ ನಂತರ ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಸರಿದುಬಿಟ್ಟಿದ್ದರು. ಯಾವುದೇ ದೊಡ್ಡ ಸಿನಿಮಾ ಇವೆಂಟ್‌ಗಳಲ್ಲಾಗಲಿ, ಪಾರ್ಟಿಗಳಲ್ಲಾಗಲಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಾಗಲಿ ಅವರು ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ಕೊಟ್ಟು ಸಖತ್ ಫಾರ್ಮ್‌ನಲ್ಲಿದ್ದ ನಟ ಹೀಗೆ ದಿಢೀರ್ ಎಂದು ಕಣ್ಮರೆಯಾಗಿ ಹೋಗಿದ್ದು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಆತಂಕ ಮತ್ತು ಕುತೂಹಲ ಮೂಡಿಸಿತ್ತು.

ಸಾಮಾಜಿಕ ಜಾಲತಾಣಗಳಲ್ಲಂತೂ, "ನಮ್ಮ ರಿಚಿ ಎಲ್ಲಿದ್ದಾರೆ? ಬಹುವರ್ಷಗಳಿಂದ ಕಾಯುತ್ತಿರುವ 'ರಿಚರ್ಡ್ ಆಂಟನಿ' ಸಿನಿಮಾದ ಕಥೆ ಏನಾಯ್ತು?" ಎಂದು ಅಭಿಮಾನಿಗಳು ನಿರಂತರವಾಗಿ ಪ್ರಶ್ನೆಗಳ ಸುರಿಮಳೆಗೈಯುತ್ತಾ ಒಂದು ರೀತಿಯ ಡಿಜಿಟಲ್ ಅಭಿಯಾನವನ್ನೇ ಶುರು ಮಾಡಿದ್ದರು. ಅಪರೂಪಕ್ಕೊಮ್ಮೆ ಯಾವುದೋ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ, ರಕ್ಷಿತ್ ಅವರ ಮುಂದಿನ ನಡೆ ಏನು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿತ್ತು.

Rakshit Shetty

ಸಸ್ಪೆನ್ಸ್‌ಗೆ ಬ್ರೇಕ್ ಹಾಕಿದ 'ಕುಚಿಕು' ಗೆಳೆಯ ರಿಷಬ್ ಶೆಟ್ಟಿ

ಕೊನೆಗೂ ಈ ಎಲ್ಲ ಪ್ರಶ್ನೆಗಳಿಗೆ ಮತ್ತು ಕಾಯುವಿಕೆಗೆ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದ ದಿನದಂದು ನಿಖರವಾದ ಉತ್ತರ ಸಿಕ್ಕಿದೆ. ರಕ್ಷಿತ್ ಅವರ ಗೆಳೆಯ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ರಹಸ್ಯ ಬಿಚ್ಚಿಟ್ಟಿದ್ದಾರೆ. "ಈ ಬದಲಾಗುವ ಜಗತ್ತಿನಲ್ಲಿ, ಕೊನೆ ತನಕ ಉಳಿಯುವ ಕಾಯಂ ಅಧ್ಯಾಯ ಈ ಗೆಳೆಯ.. ಹ್ಯಾಪಿ ಬರ್ತ್‌ಡೇ ಮಗಾ.. ಮೊನ್ನೆ ತಾನೇ ಮೀಟ್ ಮಾಡ್ಕೊಂಡು ಬಂದೆ. ಅವನು ಶೀಘ್ರದಲ್ಲೇ ಮರಳಿ ಬರಲಿದ್ದಾನೆ" ಎಂದು ಬಿಗ್‌ ಅಪ್‌ಡೇಟ್‌ ಕೊಟ್ಟಿದ್ದಾರೆ ರಿಷಬ್‌. ಈ ಹೊಸ ವರ್ಷ ನಿಮಗಷ್ಟೇ ಅಲ್ಲ, ನಿಮ್ಮ ಎಲ್ಲ ಕನಸುಗಳಿಗೂ ದೊಡ್ಡ ಯಶಸ್ಸು ತರಲಿ. ಹುಟ್ಟುಹಬ್ಬದ ಶುಭಾಶಯಗಳು ಚಿಂಟು ಅಣ್ಣ ಎಂದು ರಿಷಬ್‌ ಪತ್ನಿ ಪ್ರಗತಿ ಕೂಡ ವಿಶ್‌ ಮಾಡಿದ್ದಾರೆ.

ಸುದೀಪ್ ಜೊತೆ ಕಾಣಿಸಿಕೊಂಡ ಹೊಸ ಬಾಡಿಗಾರ್ಡ್: ಕಿಚ್ಚನಿಗಿಂತಲೂ ಹೈಟು, ಯಾರು ಈ ಆಸಾಮಿ?
ಸುದೀಪ್ ಜೊತೆ ಕಾಣಿಸಿಕೊಂಡ ಹೊಸ ಬಾಡಿಗಾರ್ಡ್: ಕಿಚ್ಚನಿಗಿಂತಲೂ ಹೈಟು, ಯಾರು ಈ ಆಸಾಮಿ?

ಹಾಗಾದ್ರೆ ರಕ್ಷಿತ್ ಶೆಟ್ಟಿ ಎಲ್ಲಿದ್ದರು? ಏನು ಮಾಡ್ತಿದ್ದಾರೆ?

ರಿಷಬ್ ಶೆಟ್ಟಿ ಅವರ ಈ ಒಂದೇ ಒಂದು ಸಾಲಿನ ಅಪ್‌ಡೇಟ್ ಸಿಗುತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯೊಂದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ರಕ್ಷಿತ್ ಶೆಟ್ಟಿ ಅವರು ಎಲ್ಲೂ ಕಣ್ಮರೆಯಾಗಿಲ್ಲ, ಬದಲಿಗೆ ತಮ್ಮ ಕನಸಿನ ಪ್ರಾಜೆಕ್ಟ್ ಆದ 'ರಿಚರ್ಡ್ ಆಂಟನಿ' (Richard Anthony) ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. ಯಾವುದೇ ಗದ್ದಲವಿಲ್ಲದೆ ಕರಾವಳಿಯ ಸದ್ದಿಲ್ಲದ ಜಾಗದಲ್ಲಿ ಕುಳಿತು, ಚಿತ್ರದ ಶೂಟಿಂಗ್ ಆರಂಭಿಸಲು ಬೇಕಾದ ಭರ್ಜರಿ ಹೋಮ್‌ವರ್ಕ್ ಮಾಡುತ್ತಿರುವುದೇ ಅವರ ಈ ಮೌನಕ್ಕೆ ಅಸಲಿ ಕಾರಣ ಎನ್ನಲಾಗುತ್ತಿದೆ. ರಿಷಬ್ ಅವರ ಪೋಸ್ಟ್ ನೋಡಿದ ಅಭಿಮಾನಿಗಳು, "ರಿಚಿ ಬ್ಯಾಕ್ ವಿತ್ ಎ ಬ್ಯಾಂಗ್" ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸಲು ಶುರು ಮಾಡಿದ್ದಾರೆ.

Rakshit Shetty

ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು ವದಂತಿಗೆ ರಿಷಬ್ ಬ್ರೇಕ್

ಕನ್ನಡ ಚಿತ್ರರಂಗದಲ್ಲಿ 'ಶೆಟ್ಟಿ ಗ್ಯಾಂಗ್' ಎಂದೇ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಈ ಮೂವರ ನಡುವೆ ಎಲ್ಲವೂ ಸರಿಯಿಲ್ಲ, ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳಿಂದ ಇವರ ಮಧ್ಯೆ ಮನಸ್ತಾಪಗಳು ಎದುರಾಗಿವೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಇವರ ನಡುವಿನ ದೋಸ್ತಿ ಮುರಿದುಬಿದ್ದಿದೆ ಎಂದೇ ಅನೇಕರು ನಂಬಿದ್ದರು. ಆದರೆ, ಈ ಎಲ್ಲ ಗಾಳಿ ಮಾತುಗಳಿಗೆ ಮತ್ತು ಸುಳ್ಳು ಸುದ್ದಿಗಳಿಗೆ 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ ಅವರು ತಮ್ಮ ಸ್ಟೈಲ್‌ನಲ್ಲೇ ಖಡಕ್ ಪೂರ್ಣವಿರಾಮ ಇಟ್ಟಿದ್ದಾರೆ.

ತಮ್ಮ ಆತ್ಮೀಯ ಗೆಳೆಯ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬದ ಸಂದರ್ಭವನ್ನು ಬಳಸಿಕೊಂಡ ರಿಷಬ್, ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, "ಮೊನ್ನೆ ತಾನೇ ಮೀಟ್ ಮಾಡ್ಕೊಂಡು ಬಂದೆ" ಎಂದು ಹೇಳುವ ಮೂಲಕ ತಾವಿಬ್ಬರು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಶೆಟ್ಟಿ ಗ್ಯಾಂಗ್‌ನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಇವರ ನಡುವೆ ಬಿರುಕು ಮೂಡಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದ ಗಾಸಿಪ್ ಪ್ರಿಯರಿಗೆ ರಿಷಬ್ ತಮ್ಮ ದೋಸ್ತಿಯ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಗೆಳೆಯರ ಬಳಗ ಎಂದಿನಂತೆಯೇ ಗಟ್ಟಿಯಾಗಿದೆ ಎಂಬುದು ಈ ಮೂಲಕ ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+