ಕೊರೊನಾ ಲಸಿಕೆ ಪಡೆದ ಸೌದಿ ರಾಜಕುಮಾರ
ಸೌದಿ ಅರೇಬಿಯಾ, ಡಿಸೆಂಬರ್ 26: ಸೌದಿ ಅರೇಬಿಯಾದ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರು ಶುಕ್ರವಾರ ಕೊರೊನಾ ಸೋಂಕಿನ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ನಾಗರೀಕರಿಗೆ ಲಸಿಕೆ ನೀಡುವ ಕುರಿತು ರಾಜರು ತೋರಿರುವ ಉತ್ಸಾಹ ಹಾಗೂ ಅನುಸರಣೆಗೆ ಸ್ವಾಗತ ಎಂದು ಆರೋಗ್ಯ ಸಚಿವ ಡಾ. ತೌಫಿಕ್ ಅಲ್ ರಾಬಿಯಾಹ್ ರಾಜರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರೋಗ ನಿವಾರಣೆಗಿಂತ ರೋಗ ತಡೆಗಟ್ಟುವಿಕೆಯೇ ಉತ್ತಮ ಎಂಬ ನೀತಿಯಿದೆ. ಮನುಷ್ಯನ ಆರೋಗ್ಯಕ್ಕೆ ಎಲ್ಲಕ್ಕಿಂತ ಮೊದಲ ಆದ್ಯತೆ ಎನ್ನಲಾಗಿದೆ. ಹೀಗಾಗಿ ಸುರಕ್ಷಿತ ಹಾಗೂ ಅಂತರರಾಷ್ಟ್ರೀಯವಾಗಿ ಅನುಮೋದನೆ ಪಡೆದಿರುವ ಲಸಿಕೆಗಳನ್ನು ಸೌದಿ ನಾಗರಿಕರಿಗೆ ನೀಡಲು ತೀರ್ಮಾನಿಸಲಾಗಿದೆ.

ಫೈಜರ್ ಹಾಗೂ ಬಯೋಎನ್ ಟೆಕ್ ಲಸಿಕೆಗಳನ್ನು ಇದೇ ತಿಂಗಳಲ್ಲಿ ಸೌದಿ ಅರೇಬಿಯಾಗೆ ಪೂರೈಸಲಾಗಿದೆ. ಶುಕ್ರವಾರ, ಡಿ.25ರ ವರದಿಯಂತೆ ಸೌದಿ ಅರೇಬಿಯಾದಲ್ಲಿ 3,61,903 ಕೊರೊನಾ ಸೋಂಕಿನ ಪ್ರಕರಣಗಳಿದ್ದು, 3,52,815 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 6,168 ಮಂದಿ ಕೊರೊನಾದಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಕೊರೊನಾ ಲಸಿಕೆ ಪಡೆದ ವಿಶ್ವದ ನಾಯಕರಲ್ಲಿ ರಾಜ ಮೊಹಮದ್ ಅವರೂ ಒಬ್ಬರಾಗಿದ್ದಾರೆ. ಕಳೆದ ವಾರ ಇಸ್ರೇಲಿನ ಬೆಂಜಮಿನ್ ನೇತನ್ಯಾಹು ಅವರು ಲಸಿಕೆ ಪಡೆದಿದ್ದರು.












Click it and Unblock the Notifications