ಭಾರತದ ಮೆಣಸಿನಕಾಯಿಗೆ ಸೌದಿಯಲ್ಲಿ ನಿಷೇಧ
ಕೊಚ್ಚಿ, ಜೂ.3: ಹಣ್ಣುಗಳ ರಾಜ ಮಾವಿಗೆ ಯುರೋಪಿನ ಒಕ್ಕೂಟ ನಿಷೇಧ ಹೇರಿರುವ ಬೆನ್ನಲ್ಲೇ ಸೌದಿ ಅರೇಬಿಯಾ ದೇಶ ಭಾರತದ ಹಸಿ ಮೆಣಸಿನ ಕಾಯಿಗೆ ನಿಷೇಧ ಹೇರಿದೆ.
ಕಳೆದ ವಾರ ಸೌದಿಯ ಕಸ್ಟಮ್ ಅಧಿಕಾರಿಗಳು ಭಾರತದಿಂದ ಬಂದಿಳಿದ ಸುಮಾರು 6 ಟನ್ ಗಳಷ್ಟು ಹಸಿ ಮೆಣಸಿನಕಾಯಿಯನ್ನು ವಿಮಾನ ನಿಲ್ದಾಣದಲ್ಲೇ ಜಪ್ತಿ ಮಾಡಿದ್ದಾರೆ. ಭಾರತದ ಹಸಿ ಮೆಣಸಿನಕಾಯಿ ರಫ್ತನ್ನು ನಿಲ್ಲಿಸುವಂತೆ ಸೌದಿ ಅರೇಬಿಯಾದ ಕೃಷಿ ಸಚಿವಾಲಯ ಆದೇಶ ಹೊರಡಿಸಿದೆ. ಯುರೋಪ್ ಒಕ್ಕೂಟ ಮಾವಿಗೆ ನಿಷೇಧ ಹೇರಲು ನೀಡಿದ ಕಾರಣವನ್ನೆ ಸೌದಿ ಅರೇಬಿಯಾ ಸರ್ಕಾರ ನೀಡಿದೆ.

ಭಾರತದಿಂದ ಸೌದಿಗೆ ಬರುವ ಹಸಿ ಮೆಣಸಿನಕಾಯಿಯನ್ನು ಅಧಿಕ ಪ್ರಮಾಣದ ರಾಸಾಯನಿಕ ವಸ್ತು ಇರುವುದು ಪತ್ತೆಯಾಗಿದೆ. ಭಾರತದಿಂದ ಆಮದಾಗುತ್ತಿರುವ ಹಲವು ಆಹಾರ ಉತ್ಪನ್ನ, ತರಕಾರಿಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ವಸ್ತುಗಳು ಕಂಡು ಬಂದಿದೆ. ಭಾರತದ ರೈತರು ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಕ ರಸಗೊಬ್ಬರ ಬಳಕೆ ಮಾಡಿ ಇಳುವರಿ ಪಡೆದುಕೊಳ್ಳುತ್ತಿದ್ದಾರೆ. ಈ ಉತ್ಪನ್ನಗಳನ್ನು ನಾವು ಬಳಸಲು ಸಾಧ್ಯವಿಲ್ಲ ಎಂದು ಸೌದಿ ಅರೇಬಿಯಾ ಕೃಷಿ ಹಾಗೂ ಆರೋಗ್ಯ ಸಚಿವಾಲಯ ಹೇಳಿದೆ.
ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಸೌದಿ ಅರೇಬಿಯಾ ಐದನೇ ಸ್ಥಾನದಲ್ಲಿದೆ. ಇತ್ತೀಚಿಗೆ ಉತ್ತಮ ಗುಣಮಟ್ಟದ ಆಹಾರ ಉತ್ಪನ್ನ ಹಾಗೂ ತರಕಾರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಸೌದಿ ಆರೇಬಿಯಾ ನಿರ್ಧರಿಸಿದ್ದು, ಭಾರತದ ತರಕಾರಿಗಳು ಹೆಚ್ಚೆಚ್ಚು ಸ್ಕ್ಯಾನ್ ಆಗುತ್ತಿವೆ.
Agricultural and Processed Food Products Export Development Authority (APEDA) ಗೆ ಸೌದಿ ಅರೇಬಿಯಾ ತನ್ನ ವರದಿ ನೀಡಿದ್ದು, ಭಾರತೀಯ ಸರ್ಕಾರ ರಫ್ತು ಮಾಡುವ ಮೊದಲು ಉತ್ಪನ್ನಗಳನ್ನು ಪರಿಶೀಲಿಸಿ ಕಳಿಸಲಿ ಎಂದಿದೆ. ಯುರೋಪಿನ ಒಕ್ಕೂಟ ಭಾರತದ ಅಲ್ಫಾನ್ಸೋ ಮಾವು ಹಾಗೂ ನಾಲ್ಕು ತರಕಾರಿಗಳಿಗೆ ನಿಷೇಧ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದು.[ಈ ಬಗ್ಗೆ ವಿವರ ಇಲ್ಲಿ ಓದಿ]












Click it and Unblock the Notifications