ರಷ್ಯಾದ ಕೊರೊನಾವೈರಸ್ ಲಸಿಕೆಯ ಪ್ರಿಕ್ಲಿನಿಕಲ್ ಪ್ರಯೋಗ ಯಶಸ್ವಿ
ಮಾಸ್ಕೋ, ಆಗಸ್ಟ್ 25: ರಷ್ಯಾದ ವೆಕ್ಟೊರ್ ಸ್ಟೇಟ್ ಸೆಂಟರ್ ಆಫ್ ವೈರಾಲಜಿ ಆಂಡ್ ಬಯೋಟೆಕ್ನಾಲಜಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ನಿಗ್ರಹ ಲಸಿಕೆಯು ತನ್ನ ರೋಗನಿದಾನ ಪೂರ್ವದ ಪ್ರಯೋಗಗಳಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿರುವುದು ಸಾಬೀತಾಗಿದೆ ಎಂದು ಕೇಂದ್ರದ ನಿರ್ದೇಶಕ ರಿನಟ್ ಮಾಕ್ಸಿಯುಟೊವ್ ಹೇಳಿದ್ದಾರೆ.
Recommended Video
ವೆಕ್ಟೊರ್ ಕೇಂದ್ರದ ಅಮೈನೋ ಆಸಿಡ್‌ಗಳ ಮಿಶ್ರಣದ ವಿಶಿಷ್ಟ ಪೆಪ್ಟೈಡ್ ಆಧಾರಿತ ಲಸಿಕೆಯು ತನ್ನ ಪ್ರಿಕ್ಲಿನಿಕಲ್ ಪರೀಕ್ಷೆಗಳಲ್ಲಿ ಹೆಚ್ಚು ದಕ್ಷತೆಯನ್ನು ಪ್ರದರ್ಶಿಸಿದ್ದು, ಕ್ಲಿನಿಕಲ್ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಮೊದಲ ಹಂತದ ಪ್ರಯೋಗದ ಎರಡು ಮಧ್ಯಂತರ ವರದಿಗಳನ್ನು ಆರೋಗ್ಯ ಸಚಿವಾಲಯಕ್ಕೆ ನೀಡಲಾಗಿದೆ.
ಪ್ರಯೋಗಕ್ಕೆ ಒಳಪಟ್ಟ ಎಲ್ಲ ಸ್ವಯಂ ಸೇವಕರೂ ಹೆಚ್ಚು ಆರೋಗ್ಯದಿಂದಿದ್ದಾರೆ. ಮೊದಲ ಸ್ವಯಂ ಸೇವಕನಿಗೆ ಎರಡನೆಯ ಬಾರಿಗೆ ಲಸಿಕೆ ನೀಡಲಾಗಿದ್ದು, 21 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅವರ ಪರಿಸ್ಥಿತಿಯನ್ನು ಈಗ ಹೊರರೋಗಿ ವಿಭಾಗದಲ್ಲಿ ನಾವು ಗಮನಿಸುತ್ತಿದ್ದೇವೆ. ಅವರು ಮೂರು, ಆರು ಮತ್ತು ಒಂಬತ್ತನೇ ತಿಂಗಳು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದ್ದಾರೆ.

ಈ ಲಸಿಕೆಯ ಕ್ಲಿನಿಕಲ್ ಪ್ರಯೋಗವು ಸೆಪ್ಟೆಂಬರ್ ಅಂತ್ಯದೊಳಗೆ ಮುಗಿಯಬಹುದು. 2020ರ ಅಕ್ಟೋಬರ್‌ನಲ್ಲಿ ಲಸಿಕೆಯನ್ನು ನೋಂದಣಿ ಮಾಡಲಾಗುವುದು ಮತ್ತು ನವೆಂಬರ್‌ನಲ್ಲಿ ವ್ಯಾಪಕ ಉತ್ಪಾದನೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆಗಸ್ಟ್ 11ರಂದು ರಷ್ಯಾ, ನಾವೆಲ್ ಕೊರೊನಾ ವೈರಸ್‌ಗೆ ಜಗತ್ತಿನ ಮೊದಲ ಲಸಿಕೆಯನ್ನು ನೋಂದಣಿ ಮಾಡಿತ್ತು. ಈ ಲಸಿಕೆಯನ್ನು ರಷ್ಯಾದ ಆರೋಗ್ಯ ಸಚಿವಾಲಯದ ಗಮಾಲೆ ರಾಷ್ಟ್ರೀಯ ಸಂಶೋಧನಾ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಕೇಂದ್ರ ಅಭಿವೃದ್ಧಿಪಡಿಸಿತ್ತು. ಈ ಲಸಿಕೆಗೆ ಸ್ಪುಟ್ನಿಕ್ 5 ಎಂಬ ಹೆಸರು ಇಡಲಾಗಿದೆ. ಇದರ ಕ್ಲಿನಿಕಲ್ ಪ್ರಯೋಗಗಳು ಜೂನ್ ಮತ್ತು ಜುಲೈನಲ್ಲಿ ನಡೆದಿದ್ದು, ಯಶಸ್ಸು ಕಂಡಿದೆ.












Click it and Unblock the Notifications