ಚಂದ್ರಯಾನ; ರಷ್ಯಾದ ಲೂನಾ-25 ಗಗನ ನೌಕೆಯಲ್ಲಿ ತಾಂತ್ರಿಕ ದೋಷ
ಮಾಸ್ಕೋ, ಆಗಸ್ಟ್ 20: ಚಂದ್ರನ ಕಕ್ಷೆ ತಲುಪಲು ಸಿದ್ಧತೆ ನಡೆಸುತ್ತಿದ್ದ ವೇಳೆ ರಷ್ಯಾದ ಲೂನಾ-25 ಗಗನ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಈ ಕುರಿತು ಮಾಹಿತಿ ನೀಡಿದೆ.
ಶನಿವಾರ 'ಲೂನಾ-25' ಗಗನ ನೌಕೆಯನ್ನು ಚಂದ್ರನ ಕಕ್ಷೆ ತಲುಪಿಸಲು ಪ್ರಯತ್ನ ನಡೆಸುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸೋಮವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಈ ನೌಕೆಯನ್ನು ಇಳಿಸಲು ಸಮಯ ನಿಗದಿ ಮಾಡಲಾಗಿದೆ.

ರಷ್ಯಾ ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸಲು 'ಲೂನಾ-25' ಗಗನನೌಕೆಯನ್ನು ಉಡಾವಣೆ ಮಾಡಿದೆ. ಈಗ ಉಂಟಾಗಿರುವ ತಾಂತ್ರಿಕ ದೋಷದ ಕುರಿತು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ರೋಸ್ಕೋಸ್ಮಾಸ್ ಹೇಳಿದೆ.
ಚಂದ್ರನ ಕುರಿತು ಅಧ್ಯಯನ ಮಾಡಲು ಭಾರತ, ರಷ್ಯಾ, ಜಪಾನ್ ಮತ್ತು ಇಸ್ರೇಲ್ ದೇಶಗಳು ವಿವಿಧ ಯೋಜನೆಗಳನ್ನು ಕೈಗೊಂಡಿವೆ. ಭಾರತದ ಚಂದ್ರಯಾನ-3 ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಧ್ಯತೆ ಇದೆ. ಇದಕ್ಕೂ ಎರಡು ದಿನ ಮೊದಲು ರಷ್ಯಾದ 'ಲೂನಾ-25' ಚಂದ್ರನ ಮೇಲೆ ಇಳಿಯಬೇಕಾಗಿತ್ತು.
ರಷ್ಯಾದ 'ಲೂನಾ-25' ಚಂದ್ರನ ಮೇಲೆ ಆಗಸ್ಟ್ 21 ರಿಂದ 23ರ ನಡುವೆ ಇಳಿಯಲಿದೆ ಎಂದು ಮೊದಲು ಹೇಳಲಾಗಿತ್ತು. ಬಳಿಕ ಆಗಸ್ಟ್ 23ರಂದು ಇಳಿಸಲು ದಿನಾಂಕ ನಿಗದಿ ಮಾಡಲಾಗಿತ್ತು. ಈಗಾಗಲೇ ಲೂನಾ-25 ಗಗನನೌಕೆಯಲ್ಲಿ ಇರುವ ವೈಜ್ಞಾನಿಕ ಉಪಕರಣಗಳು ಕಾರ್ಯಾರಂಭ ಮಾಡಿವೆ. ಇದರಿಂದ ಲಭ್ಯವಾದ ಮೊದಲ ಮಾಹಿತಿಯನ್ನು ವಿಜ್ಞಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.
ರೋಸ್ಕೋಸ್ಮಾಸ್ ಲೂನಾ-25 ಚಂದ್ರನತ್ತ ಪ್ರಯಾಣ ಬೆಳೆಸುತ್ತಿದೆ. ಅದರಲ್ಲಿನ ಸ್ವಯಂ ಚಾಲಿತ ಎಲ್ಲಾ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ಅದರ ಜೊತೆ ಸಂವಹನ ಸ್ಥಿರವಾಗಿದೆ, ಇಂಧನ ಸಮತೋಲನವಾಗಿದೆ ಎಂದು ಹೇಳಿದೆ.
ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಿದ ಮೊದಲ ರಾಷ್ಟ್ರ ರಷ್ಯಾವಾಗಬೇಕು ಎಂಬ ಉದ್ದೇಶದಿಂದ ರಷ್ಯಾ ಆಗಸ್ಟ್ 11ರಂದು ಚಂದ್ರನತ್ತ ರಾಕೆಟ್ ಉಡಾವಣೆ ಮಾಡಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು ಘನೀಕರಣಗೊಂಡು ಶೇಖರಣೆ ಆಗಿದೆ ಎಂದು ನಂಬಲಾಗಿದ್ದು, ಈ ಕುರಿತ ಸಂಶೋಧನೆಗೆ ಹೆಚ್ಚು ಮಹತ್ವ ನೀಡಲಾಗಿದೆ.
ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳು ರಷ್ಯಾದ 'ಲೂನಾ-25' ಯೋಜನೆಯನ್ನು ಕುತೂಹಲದಿಂದ ನೋಡುತ್ತಿವೆ. ಅದರಲ್ಲೂ ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್‌ಗೆ ಸಮಯ ನಿಗದಿಯಾಗಿರುವಾಗ ತಾಂತ್ರಿಕ ದೋಷ ಕಂಡುಬಂದಿದ್ದು, ಆತಂಕ ಮೂಡಿಸಿದೆ.












Click it and Unblock the Notifications