Russia & Ukraine War: 3ನೇ ಮಹಾಯುದ್ಧ ಫಿಕ್ಸ್... ಇಲ್ಲಿದೆ ನೋಡಿ ಅದಕ್ಕೆ ಸಾಕ್ಷಿ!

3ನೇ ಮಹಾಯುದ್ಧ ನಡೆಯಬಾರದು, ಜಗತ್ತಿನಲ್ಲಿ ಇನ್ನೆಂದೂ ಮಹಾಯುದ್ಧದ ಮಾತು ಕೇಳಿ ಬರಬಾರದು ಎಂಬುದೇ ಇಡೀ ಜಗತ್ತಿನ ಆಸೆಯಾಗಿತ್ತು. ಇದೇ ಕಾರಣಕ್ಕೆ ವಿಶ್ವಸಂಸ್ಥೆ ರಚನೆ ಮಾಡಿ, ಶಾಂತಿ ಸ್ಥಾಪನೆ ಮಾಡಲಾಗಿದೆ. ಹೀಗಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಸದ್ಯ ಘೋರ ಯುದ್ಧಗಳು ಆರಂಭ ಆಗಿವೆ. ಅದ್ರಲ್ಲೂ ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ತಿಕ್ಕಾಟವು 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಂತೆ ಕಾಣುತ್ತಿದೆ. 3ನೇ ಮಹಾಯುದ್ಧಕ್ಕೆ ಕೌಂಟ್‌ಡೌನ್ ಶುರುವಾಗಿದೆ ಎಂಬುದಕ್ಕೆ ಇಲ್ಲೊಂದು ಮಹತ್ವದ ಸಾಕ್ಷಿ ಕೂಡ ಸಿಕ್ಕೇ ಬಿಟ್ಟಿದೆ!

ಹೌದು, ರಷ್ಯಾ ತನ್ನ ಶತ್ರು ಪಡೆಯನ್ನ ಮಲಗಿಸಲು ಇದೀಗ ತನ್ನ ಬಳಿ ಇರುವ ಅಪಾಯಕಾರಿ ಅಸ್ತ್ರಗಳನ್ನ ಹೊರಗೆ ತೆಗೆಯುತ್ತಿದೆ. ಇದರ ಪರಿಣಾಮ ಎಷ್ಟು ಘೋರವಾಗಿದೆ ಅಂದ್ರೆ ಈಗಿನ ಪರಿಸ್ಥಿತಿಯಲ್ಲಿ ಉಕ್ರೇನ್ ಮಿಲಿಟರಿ ರಷ್ಯಾ ನಡೆಸುತ್ತಿರುವ ದಾಳಿಯನ್ನ ತಡೆಯಲು ಆಗ್ತಿಲ್ಲ.

Russia s ICBM Launch on Ukraine Raises Concerns of 3rd World War

ರಷ್ಯಾ ಇದುವರೆಗೂ ಬಳಕೆ ಮಾಡದ ಖಂಡಾಂತರ ಕ್ಷಿಪಣಿಗಳನ್ನ ಕೂಡ ಇದೀಗ ಉಕ್ರೇನ್‌ನ ವಿರುದ್ಧ ಹಾರಿ ಬಿಡುತ್ತಿದೆ. ಹೀಗಾಗಿ ಪರಿಸ್ಥಿತಿ ಕೂಡ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಹಾಗಾದ್ರೆ ಇದೀಗ 3ನೇ ಮಹಾಯುದ್ಧ ಫಿಕ್ಸ್ ಅನ್ನೋದಕ್ಕೆ ಸಿಕ್ಕಿರುವ ಬಲವಾದ ಸಾಕ್ಷಿ ಏನು? ಮುಂದೆ ಓದಿ.

ಹೊಡಿ ಮಗ.. ಹೊಡಿ ಮಗ..

ಕನ್ನಡ ಸಿನಿಮಾ ಇಂಡಸ್ಟ್ರಿಯ ಫೇಮಸ್ ಸಾಂಗ್ ಪೈಕಿ ಹೊಡಿ ಮಗ.. ಹೊಡಿ ಮಗ.. ಕೂಡ ಒಂದು. ಶಿವಣ್ಣ ಅಭಿನಯದ ಜೋಗಿ ಸಿನಿಮಾದ ಸಾಂಗ್ ಇದು. ಹೀಗೆ ಹೊಡಿ ಮಗ.. ಹೊಡಿ ಮಗ.. ಹಾಡಿನ ಲಿರಿಕ್ಸ್ ನೆನಪು ಮಾಡುವ ರೀತಿಯಲ್ಲೇ, ರಷ್ಯಾ ಸೇನೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ತನ್ನ ಬಳಿ ಇರುವ ಅಸ್ತ್ರಗಳನ್ನ ಬಳಕೆ ಮಾಡುತ್ತಿದೆ. ಕ್ಷಿಪಣಿಗಳ ಮೂಲಕವೇ ಘೋರ ದಾಳಿ ನಡೆಸುತ್ತಾ ಭಯ ಹುಟ್ಟಿಸುತ್ತಿದೆ. ಇಷ್ಟೆಲ್ಲದರ ನಡುವೆ ಕಳೆದ 60 ವರ್ಷದಿಂದ ಮಾಡದೇ ಇರುವ ತಪ್ಪು ಒಂದನ್ನು ರಷ್ಯಾ ಮಾಡಿಯೇ ಬಿಟ್ಟಿದೆ!

ಏನಿದು 60 ವರ್ಷಗಳ ರಹಸ್ಯ?

ರಷ್ಯಾ ಇದೀಗ ಉಕ್ರೇನ್ ವಿರುದ್ಧ ದಾಳಿಗೆ ಬಳಸಿರುವ ಕ್ಷಿಪಣಿಗೆ 60 ವರ್ಷಗಳ ಇತಿಹಾಸವೇ ಇದ್ದು, ಭಯ ಹುಟ್ಟುಹಾಕಿದೆ. ಸೋವಿಯತ್ ರಷ್ಯಾ ಸಮಯದಲ್ಲಿ ಮಿಲಿಟರಿ ವಿಚಾರದಲ್ಲಿ ಸಾಕಷ್ಟು ಮುಂದೆ ಇತ್ತು ಈ ದೇಶ. ಆದರೆ, ಆ ನಂತರ ಪರಿಸ್ಥಿತಿ ಬದಲಾಗುತ್ತಾ ಸಾಗಿತ್ತು. ಸೋವಿಯತ್ ರಷ್ಯಾ ಪೀಸ್, ಪೀಸ್ ಆಗಿ ಬೇರೆ ಬೇರೆ ದೇಶಗಳಲ್ಲಿ ಬೆರೆತು ಹೋಗಿದ್ದವು. ಆದ್ರೆ ಇದೀಗ ಮತ್ತೆ ರಷ್ಯಾ ತನ್ನ ಸೇನಾ ತಾಕತ್ ತೋರಿಸಲು ಮುಂದೆ ಬಂದಂತೆ ಕಾಣುತ್ತಿದ್ದು, ತನ್ನ ಮೇಲೆ ಉಕ್ರೇನ್ ಸೇನೆ ಅಮೆರಿಕ ನಿರ್ಮಿತ ಕ್ಷಿಪಣಿ ಬಳಸಿ ದಾಳಿ ಮಾಡಿದ ನಂತರ ತನ್ನ ಶಕ್ತಿ ತೋರಿಸಿದೆ ಪುಟಿನ್ ನೇತೃತ್ವದ ರಷ್ಯಾ ಮಿಲಿಟರಿ.

ಹೀಗೆ ರಷ್ಯಾ ನಡೆಸಿರುವ ಘೋರ ಕ್ಷಿಪಣಿ ದಾಳಿಯು 3ನೇ ಮಹಾಯುದ್ಧದ ಭಯ ಹುಟ್ಟಿಸಿ ಜಗತ್ತನ್ನು ಚಿಂತೆಗೆ ದೂಡಿದೆ. ಯಾಕಂದ್ರೆ ರಷ್ಯಾ ಇದೇ ರೀತಿ ದಾಳಿ ನಡೆಸುತ್ತಾ ಹೋದರೆ, ಮುಂದೆ ಪರಮಾಣು ಬಾಂಬ್‌ಗಳನ್ನ ಕೂಡ ಬಳಸುವ ಅಪಾಯ ಕಾಡುತ್ತಿದೆ. ರಷ್ಯಾ ಬಳಿ ಈಗಾಗಲೇ ಸಾವಿರಾರು ಪರಮಾಣು ಅಸ್ತ್ರಗಳು ಸಿದ್ಧವಿದ್ದು, ಮಿಸೈಲ್‌ಗಳ ಮೂಲಕ ಅಟ್ಯಾಕ್ ಮಾಡುವ ಆತಂಕ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+