ರಷ್ಯಾದಲ್ಲಿ ಹಿಂಸಾಚಾರ, ಪುಟಿನ್ ಶತ್ರು ಬಿಡುಗಡೆಗೆ ರಷ್ಯನ್ನರ ಆಗ್ರಹ

ಪುಟಿನ್ ಪಾಲಿನ ಶತ್ರು ಹಾಗೂ ರಷ್ಯಾ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಲೆಕ್ಸಿ ನವಲ್ನಿಗೆ ಮಾಸ್ಕೋ ನ್ಯಾಯಾಲಯ 2.5 ವರ್ಷಗಳ ಕಠಿಣ ಶಿಕ್ಷೆವಿಧಿಸಿದೆ. ಈ ಮೂಲಕ ರಷ್ಯಾದಲ್ಲಿ ಕಿಚ್ಚು ಹೊತ್ತುವಂತೆ ಮಾಡಿದೆ. ಅಲೆಕ್ಸಿ ನವಲ್ನಿ ಪೆರೋಲ್ ನಿಯಮ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದಡಿ ಈ ಶಿಕ್ಷೆ ವಿಧಿಸಲಾಗಿದೆ. 5 ತಿಂಗಳ ನಂತರ ಜನವರಿಯಲ್ಲಿ ರಷ್ಯಾಗೆ ಮರಳಿದ್ದ ಅಲೆಕ್ಸಿ ನವಲ್ನಿಗೆ ಇದು ಶಾಕ್ ನೀಡಿದೆ.

ಲಕ್ಷ ಲಕ್ಷ ರಷ್ಯನ್ನರ ಪಾಲಿಗೆ ಹೀರೋ ಆಗಿರುವ ಅಲೆಕ್ಸಿ ನವಲ್ನಿ ಬರ್ತಾರೆ ಅಂತಾ ಕಾಯುತ್ತಿದ್ದವರಿಗೆ ನಿರಾಸೆಯಾಗಿತ್ತು. ಏಕೆಂದರೆ ರಷ್ಯಾ ಪೊಲೀಸರು ಪ್ಲಾನ್ ಮಾಡಿದ್ದಂತೆ ಕಳೆದ ತಿಂಗಳು ಪುಟಿನ್ ಪಾಲಿನ ಶತ್ರು ಹಾಗೂ ರಷ್ಯಾ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಲೆಕ್ಸಿ ನವಲ್ನಿಯನ್ನ ಬಂಧಿಸಿದ್ದರು. 2020ರ ಆಗಸ್ಟ್ 20ರಂದು ಅಲೆಕ್ಸಿ ನವಲ್ನಿಗೆ ವಿಷಪ್ರಾಶನ ಮಾಡಿ ಹತ್ಯೆಗೆ ಯತ್ನಿಸಲಾಗಿತ್ತು.

ಸುಮಾರು 4-5 ತಿಂಗಳ ಕಾಲ ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ನವಲ್ನಿ ರಷ್ಯಾಗೆ ವಾಪಸ್ ಆಗಿದ್ದರು. ಆದರೆ ಇದೇ ಅವರಿಗೆ ಮುಳುವಾಗಿ ಪರಿಣಮಿಸಿದೆ. ಚಿಕಿತ್ಸೆಗೆ ಜಮರ್ನಿ ತಲುಪಿದ್ದು ತಪ್ಪು, ಇದು ಪೆರೋಲ್ ನಿಯಮದ ಉಲ್ಲಂಘನೆ ಎಂದು ಮಾಸ್ಕೋ ಕೋರ್ಟ್ ನವಲ್ನಿಗೆ 2.5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

 ರಷ್ಯಾದಲ್ಲಿ ಹಿಂಸಾಚಾರದ ಮುನ್ನೆಚ್ಚರಿಕೆ

ರಷ್ಯಾದಲ್ಲಿ ಹಿಂಸಾಚಾರದ ಮುನ್ನೆಚ್ಚರಿಕೆ

ಸ್ಟಾಲಿನ್ ನಂತರ ಧೈರ್ಯವಾಗಿ ರಷ್ಯಾ ಆಳಿದ್ದು ಪುಟಿನ್ ಮಾತ್ರ. ಆದರೆ ವ್ಲಾದಿಮಿರ್ ಪುಟಿನ್ ವಿರುದ್ಧವೇ ಹತ್ತಾರು ಆರೋಪಗಳಿವೆ. ಅದರಲ್ಲೂ ಪ್ರಮುಖವಾಗಿ ಪುಟಿನ್ ವಿರುದ್ಧ ಭ್ರಷ್ಟಾಚಾರದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಇದರ ವಿರುದ್ಧ ಹೋರಾಟ ನಡೆಸಿದ್ದ ನವಲ್ನಿಗೆ ರಷ್ಯಾದಲ್ಲಿ ಕೋಟ್ಯಂತರ ಫ್ಯಾನ್ಸ್ ಇದ್ದಾರೆ. ಈಗ ನವಲ್ನಿ ವಿರುದ್ಧ ನೀಡಿರುವ ಆದೇಶ ರಷ್ಯಾದಲ್ಲಿ ಬೆಂಕಿ ಹೊತ್ತಿಸಿದೆ. ರಷ್ಯನ್ನರ ರಾಜಧಾನಿ ಮಾಸ್ಕೋ ಧಗಧಗಿಸುತ್ತಿದೆ. ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪುಟಿನ್ ಆಡಳಿತ ಪರದಾಡುತ್ತಿದೆ.

ನವಲ್ನಿಗೆ ಮೊದಲೇ ವಾರ್ನಿಂಗ್..!

ನವಲ್ನಿಗೆ ಮೊದಲೇ ವಾರ್ನಿಂಗ್..!

ಅಷ್ಟಕ್ಕೂ ಬರ್ಲಿನ್‌ನ ಆಸ್ಪತ್ರೆಯಲ್ಲಿ ನೆಮ್ಮದಿಯಾಗಿದ್ದ ಅಲೆಕ್ಸಿ ನವಲ್ನಿ ತನ್ನ ತವರು ರಷ್ಯಾಗೆ ಮರಳುವ ಕನಸು ಕಂಡಿದ್ದರು. ಆದರೆ ಆ ಕನಸೇ ನವಲ್ನಿ ಪಾಲಿಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿದೆ. ಜರ್ಮನಿಯಿಂದ ರಷ್ಯಾಗೆ ಮರಳುವ ಮೊದಲೇ ನವಲ್ನಿಗೆ ರಷ್ಯಾ ಪೊಲೀಸರು ಎಚ್ಚರಿಕೆ ನೀಡಿದ್ದರು. ನಿಮ್ಮನ್ನ ಬಂಧಿಸುತ್ತೇವೆಂದು ಅಲೆಕ್ಸಿ ನವಲ್ನಿಗೆ ಹೇಳಿದ್ದರು. ಆದರೆ ಎಚ್ಚರಿಕೆಗೆ ಬೆದರದ ನವಲ್ನಿ ರಷ್ಯಾ ವಿಮಾನವನ್ನು ಹತ್ತಿದ್ದರು. ಇಷ್ಟೆಲ್ಲದರ ಮಧ್ಯೆ ನವಲ್ನಿಯ ಬಂಧನಕ್ಕೆ ಸಿದ್ಧವಾಗಿದ್ದ ರಷ್ಯಾ ಪೊಲೀಸರು ಏರ್‌ಪೋರ್ಟ್‌ನಲ್ಲೇ ತಮ್ಮ ಕಾರ್ಯ ಸಾಧಿಸಿದ್ದಾರೆ.

 ಘಟನೆ ನಡೆದಿದ್ದು ಹೇಗೆ..?

ಘಟನೆ ನಡೆದಿದ್ದು ಹೇಗೆ..?

ಆಗಸ್ಟ್ 20ರಂದು ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಮರಳುವಾಗ ನವಲ್ನಿ ಆರೋಗ್ಯ ಹದಗೆಟ್ಟಿತ್ತು. ಒಮಾಸ್ಕ್‌ ಎಂಬಲ್ಲಿ ತುರ್ತಾಗಿ ವಿಮಾನ ಇಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಮಾನ ಹತ್ತುವುದಕ್ಕೆ ಮೊದಲು ರೆಸ್ಟೋರೆಂಟ್ ಒಂದರಲ್ಲಿ ನವಲ್ನಿ ಟೀ ಸೇವಿಸಿದ್ದರು. ಅದರಲ್ಲಿ ನೋವಿಚೋಕ್ ವಿಷ ಬೆರೆಸಲಾಗಿತ್ತು ಎಂಬ ಆರೋಪವಿತ್ತು. ಆದರೆ 4 ತಿಂಗಳ ಬಳಿಕ ವಿಷ ಹಾಕಿದ್ದು ಟೀ ಒಳಗೆ ಅಲ್ಲ ನವಲ್ನಿಯ ಒಳ ಉಡುಪಿನಲ್ಲಿ ಎನ್ನಲಾಗಿತ್ತು.

ಇವತ್ತಿಗೂ ನವಲ್ನಿ ದೇಹಕ್ಕೆ ವಿಷ ಸೇರಿದ್ದು ಹೇಗೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಇನ್ನು ನವಲ್ನಿ ಆರೋಗ್ಯ ಹದಗೆಟ್ಟ ತಕ್ಷಣ ರಷ್ಯಾದ ಸಾಮಾನ್ಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ನವಲ್ನಿ ಕುಟುಂಬ ಮತ್ತು ಬೆಂಬಲಿಗರು ಜರ್ಮನಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದರು. ಜರ್ಮನಿಗೆ ನವಲ್ನಿ ಶಿಫ್ಟ್ ಮಾಡುವ ವಿಚಾರದಲ್ಲಿ ದೊಡ್ಡ ಡ್ರಾಮಾ ನಡೆದಿತ್ತು. ಬಳಿಕ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದಿದ್ದ ರಷ್ಯಾ ಸರ್ಕಾರ ನವಲ್ನಿಗೆ ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸಲು ಒಪ್ಪಿತ್ತು.

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ನವಲ್ನಿ ಬದುಕುವುದೇ ಅನುಮಾನವಾಗಿತ್ತು

ಆರಂಭದಲ್ಲಿ ಅಲೆಕ್ಸಿ ನವಲ್ನಿ ಪರಿಸ್ಥಿತಿ ಗಮನಿಸಿದ್ದ ತಜ್ಞರು ಆತ ಬದುಕುಳಿಯುವುದೇ ಅನುಮಾನ ಎಂದಿದ್ದರು. ಅದರಲ್ಲೂ ಜರ್ಮನಿಗೆ ಶಿಫ್ಟ್ ಆಗಲು ನವಲ್ನಿಗೆ ತುರ್ತಾಗಿ ಅನುಮತಿ ನೀಡದಿರುವುದು ಆತನ ಜೀವಕ್ಕೆ ದೊಡ್ಡ ಕಂಟಕ ಸೃಷ್ಟಿಮಾಡಿತ್ತು. ಜರ್ಮನಿಯ ಸ್ವಯಂಸೇವಾ ಸಂಸ್ಥೆ ನವಲ್ನಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿತ್ತಲ್ಲದೆ, ಸ್ವತಃ ವಿಮಾನ ಕೂಡ ಕಳುಹಿಸಿತ್ತು. ಆದರೆ ಮೊದಲಿಗೆ ಇದಕ್ಕೆ ಒಪ್ಪದ ರಷ್ಯಾ, ನಂತರ ಒತ್ತಡಕ್ಕೆ ಮಣಿದು ಅನುಮತಿ ನೀಡಿತ್ತು. ಕೊನೆಗೂ ನವಲ್ನಿಗೆ ಬರ್ಲಿನ್‌ನಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಲಾಗಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರ ಬಗ್ಗೆ ಸಿನಿಮಾ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಹಿಂದೆ ಕೂಡ ನವಲ್ನಿ ಮೇಲೆ ಡೆಡ್ಲಿ ಕೆಮಿಕಲ್ ಅಟ್ಯಾಕ್ ಆಗಿ ಬದುಕುಳಿದಿದ್ದರು, ಈಗ 'ನೋವಿಚೋಕ್' ಎಂಬ ಕಾರ್ಕೋಟಕ ವಿಷ ದೇಹ ಸೇರಿದ್ದರೂ ಬದುಕುಳಿದು ರಷ್ಯಾಗೆ ಮರಳಿರುವ ನವಲ್ನಿ ಮತ್ತೆ ಪುಟಿನ್ ಪಡೆ ವಿರುದ್ಧ ತೊಡೆ ತಟ್ಟಿದ್ದಾರೆ. ನವಲ್ನಿ ಜೈಲು ಸೇರಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದು ನವಲ್ನಿ ಬೆಂಬಲಿಗರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+