ರಷ್ಯಾ ಅಧ್ಯಕ್ಷರ ಶತ್ರು ಆಫ್ರಿಕಾಗೆ ಎಸ್ಕೇಪ್: ಕಾರಣವೇ ಭಯಾನಕ!

ಮಾಸ್ಕೋ: ರಷ್ಯಾ ಸೇನೆ & ರಷ್ಯಾ ಅಧ್ಯಕ್ಷರ ವಿರುದ್ಧ ಸಮರ ಸಾರಿ ಯುದ್ಧಕ್ಕೂ ಬಂದಿದ್ದ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಹಲವು ತಿಂಗಳ ಬಳಿಕ ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಮತ್ತೆ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಮೂಲಕ ಶತ್ರುಗಳಿಗೆ ಸಂದೇಶ ಕಳುಹಿಸಿದ್ದಾನೆ ರಷ್ಯಾದ 'ವ್ಯಾಗ್ನರ್‌' ಗುಂಪಿನ ನಾಯಕ.

ರಷ್ಯಾ ಅಧ್ಯಕ್ಷ ಪುಟಿನ್‌ ಆಪ್ತನಾಗಿದ್ದ ಯೆವ್ಗೆನಿ ಪ್ರಿಗೊಝಿನ್, ಪುಟಿನ್‌ ಬೆಂಬಲವನ್ನ ಪಡೆದು ಇಷ್ಟು ಎತ್ತರಕ್ಕೆ ಬೆಳೆದಿದ್ದ. ಆದರೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ನಂತರ ಯೆವ್ಗೆನಿ ಪ್ರಿಗೊಝಿನ್ ಮತ್ತು ಪುಟಿನ್ ಸಂಬಂಧ ಹಾಳಾಗುತ್ತಾ ಹೋಗಿತ್ತು. ಪುಟಿನ್ ಮತ್ತೆ ಪ್ರಿಗೊಝಿನ್ ನಡುವೆ ಮನಸ್ತಾಪ ಶುರುವಾಗಿತ್ತು. ಈ ಹಗೆತನ ಜೂನ್‌ನಲ್ಲಿ ಬೇರೆ ಲೆವೆಲ್‌ಗೆ ಮುಟ್ಟಿ, ಒಬ್ಬರ ಮೇಲೆ ಒಬ್ಬರು ಬೈಯುವ ಹಂತಕ್ಕೂ ಹೋಗಿತ್ತು. ಇದಾದ ನಂತರ ಆತ ಎಸ್ಕೇಪ್ ಆಗಿದ್ದ, ಯೆವ್ಗೆನಿ ಪ್ರಿಗೊಝಿನ್ ಎಲ್ಲಿದ್ದಾನೆ ಅನ್ನೋದೆ ಗೊತ್ತಿರಲಿಲ್ಲ. ಬೆಲಾರಸ್‌ಗೆ ಆತ ಓಡಿ ಹೋಗಿದ್ದ ಎನ್ನಲಾಗಿತ್ತು. ಈಗ ಮತ್ತೆ ಎಂಟ್ರಿಕೊಟ್ಟು ಸಂಚಲನ ಸೃಷ್ಟಿಸಿದ್ದಾನೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ.

Russian Wagner group chief Yevgeny Prigozhin new video went viral

ಉಗ್ರರ ವಿರುದ್ಧ ಗುಡುಗಿದ ಪ್ರಿಗೊಝಿನ್

ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥನ ಹೊಸ ವಿಡಿಯೋದಲ್ಲಿ ಆಫ್ರಿಕಾದಲ್ಲಿ ಇರುವ ಮಾಹಿತಿ ಸಿಕ್ಕಿದ್ದು, ಉಗ್ರರ ವಿರುದ್ಧ ಪ್ರಿಗೊಝಿನ್ ಗುಡುಗಿದ್ದಾನೆ. ರಷ್ಯಾ ಖಾಸಗಿ ಸೇನೆಯು ಉಗ್ರರು ಮತ್ತು ಆತಂಕವಾದಿಗಳ ವಿರುದ್ಧ ಹೋರಾಡುತ್ತಿದೆ. ಈ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದ್ದಾನೆ. ಈ ಮೂಲಕ ಪರೋಕ್ಷವಾಗಿ ತನ್ನ ಶತ್ರುಗಳ ವಿರುದ್ಧವೂ ರಷ್ಯಾದ ಖಾಸಗಿ ಸೇನೆ ನಾಯಕ ಮಾತಿನ ಗುದ್ದು ಕೊಟ್ಟಿದ್ದಾನೆ. ಪ್ರಿಗೊಝಿನ್ ಮಾಡಿದ ಎಡವಟ್ಟು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರಲ್ಲೂ ರಷ್ಯಾದಲ್ಲಿ ಖಾಸಗಿ ಸೇನೆ ಬಂಡಾಯ ಆಂತರಿಕ ಯುದ್ಧ ಘೋಷಣೆ ಮಾಡಿರುವ ವಾತಾವರಣ ಸೃಷ್ಟಿಸಿತ್ತು.

ಖಾಸಗಿ ಫೈಟ್ ಶುರುವಾಗಿದ್ದು ಏಕೆ?

ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನೆಯಷ್ಟೇ ಪ್ರಬಲ. ಪುಟಿನ್‌ ಅಧಿಕಾರ ಅವಧಿಯಲ್ಲಿ ಖಾಸಗಿ ಸೇನೆ ಸ್ಥಾಪನೆ ಆಗಿತ್ತು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆ ಇರುವ ಈ ವ್ಯಕ್ತಿ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ವ್ಲಾದಿಮಿರ್ ಪುಟಿನ್ ಪರ್ಮಿಷನ್ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪಿಸಿದ್ದ ಈ ಪ್ರಿಗೊಝಿನ್. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧ ವಿಚಾರದಲ್ಲಿ ಪ್ರಿಗೊಝಿನ್‌ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಆಗಿತ್ತು. ಕಿತ್ತಾಟವು ಜೋರಾಗಿ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದರು. ಅದರಲ್ಲೂ ಉಕ್ರೇನ್‌ನ ಯುದ್ಧದಲ್ಲಿ ತನ್ನ ಖಾಸಗಿ ಸೇನೆಯ ಸೈನಿಕರು ಸಾಯುತ್ತಿದ್ದಿದ್ದು ಯೆವ್ಗೆನಿ ಪ್ರಿಗೊಝಿನ್ ಪಿತ್ತ ನೆತ್ತಿಗೇರಿಸಿತ್ತು.

Russian Wagner group chief Yevgeny Prigozhin new video went viral

ಖಾಸಗಿ ಸೈನಿಕರಿಗೆ ಮೋಸ ಮಾಡಿತ್ತಾ ರಷ್ಯಾ?

ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಇಷ್ಟೆಲ್ಲ ನಡೆದರು ರಷ್ಯಾ ಸೇನೆ ಪ್ರಿಗೊಝಿನ್ ಬಗ್ಗೆ ನಿರ್ಲಕ್ಷ್ಯ ಮಾಡಿತ್ತು. ರಷ್ಯಾ ಸೇನೆ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಸಪ್ಲೈ ಮಾಡುತ್ತಿಲ್ಲ. ಸೂಕ್ತ ಸೌಲಭ್ಯ ಸಿಗದೆ ವ್ಯಾಗ್ನರ್ ಸೈನಿಕರು ಯುದ್ಧದಲ್ಲಿ ಸಾಯುತ್ತಿದ್ದಾರೆ. ಇಷ್ಟಾದರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್. ಹೀಗೆ ವಿಚಾರ ಸಣ್ಣದಾಗಿರುವಾಗಲೇ ರಷ್ಯಾ ಅಧ್ಯಕ್ಷರು & ರಕ್ಷಣಾ ಸಚಿವ ಅದನ್ನ ಸೈಲೆಂಟ್ ಮಾಡಲಿಲ್ಲ. ಸಣ್ಣ ಕಿಡಿಯಾಗಿದ್ದ ಖಾಸಗಿ ಸೇನೆ ಬಂಡಾಯ ದೇಶದೊಳಗೆ ನುಗ್ಗುವಷ್ಟು ಪ್ರಬಲವಾಗಿತ್ತು.

Russian Wagner group chief Yevgeny Prigozhin new video went viral

ಇದು ಸಾಲದು ಎಂಬಂತೆ ಬೇಕು ಅಂತ ರಷ್ಯಾ ಸೇನೆ, ಖಾಸಗಿ ಸೈನಿಕರ ಮೇಲೆ ಮಿಸೈಲ್ ದಾಳಿ ಮಾಡಿದೆ ಅನ್ನೋ ಆರೋಪವನ್ನ ಮಾಡಿದ್ದ. ಕ್ಷಿಪಣಿ ದಾಳಿಯಲ್ಲಿ ಹಲವು ಖಾಸಗಿ ಸೈನಿಕರು ಸತ್ತ ಬಳಿಕ ದಂಗೆ ಎದ್ದು ತನ್ನ ದೇಶದ ಒಳಗೆ ನುಗ್ಗಿ ಬಂದಿದ್ದ ಪ್ರಿಗೊಝಿನ್. ಖಾಸಗಿ ಸೈನಿಕ ಪಡೆ ದಂಗೆ ಎದ್ದ ಬಳಿಕ ಬೆಲಾರಸ್ ಅಧ್ಯಕ್ಷ ಮಧ್ಯಪ್ರವೇಶ ಮಾಡಿ ಸ್ಥಿತಿ ತಣ್ಣಗಾಗಿಸಿದ್ದು, ತನ್ನ ದೇಶಕ್ಕೆ ರಷ್ಯಾದ ಖಾಸಗಿ ಸೇನೆ ಕರೆಸಿಕೊಂಡಿದ್ದು ಆಗಿತ್ತು. ಈಗ ಆಫ್ರಿಕಾದಲ್ಲಿ ಈತ ಪ್ರತ್ಯಕ್ಷ್ಯನಾಗಿ ಆಶ್ಚರ್ಯ ಮೂಡಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+