Donald Trump: ಅಮೆರಿಕದ ಡಾಲರ್ ವಿರುದ್ಧ ಸಮರ ಸಾರಿದ ಪುಟಿನ್?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಮೆರಿಕದ ಬದ್ಧ ವಿರೋಧಿಯಾಗಿ ಗುರುತಿಸಿಕೊಂಡು, ಅಮೆರಿಕದ ವಿರುದ್ಧ ತಿರುಗಿಬಿದ್ದು ಹೊಸ ಒಕ್ಕೂಟ ರಚಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅಮೆರಿಕ ಕೂಡ ಪದೇ ಪದೇ ವಾರ್ನಿಂಗ್ ಕೊಡುತ್ತಾ ಬಂದಿದ್ದರೂ, ಪುಟಿನ್ ಅವರು ಮಾತ್ರ ತಮ್ಮ ನಿಲುವು ಬದಲಾವಣೆ ಮಾಡಿಕೊಂಡಿಲ್ಲ.
ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಪುಟಿನ್ & ಅಮೆರಿಕ ನಡುವಿನ ದ್ವೇಷ ಇನ್ನಷ್ಟು ಹೆಚ್ಚಾಗಿತ್ತು. ಇಷ್ಟೆಲ್ಲದರ ಮಧ್ಯೆ, ಡಾಲರ್‌ಗೆ ದೊಡ್ಡ ಏಟು ಕೊಡಲು ಸಜ್ಜಾಗಿದ್ದಾರಾ ರಷ್ಯಾ ಅಧ್ಯಕ್ಷ ಪುಟಿನ್? ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಕೂಡ ಈ ಸಮಸ್ಯೆ ಇನ್ನೂ ಸರಿಯಾಗಿಲ್ವಾ? ರಷ್ಯಾ ವಿರುದ್ಧ ಇನ್ನಷ್ಟು ಘೋರ ನಿಷೇಧ ಹೇರುತ್ತಾರಾ ಡೊನಾಲ್ಡ್ ಟ್ರಂಪ್? ಬನ್ನಿ ಮುಂದೆ ತಿಳಿಯೋಣ.

ಟ್ರಂಪ್ & ಪುಟಿನ್ ಸಮರ ಶುರು?
ಅಂದಹಾಗೆ ಮೊದಲಿಂದಲೂ ಕೂಡ ಒಂದು ಮಾತು ಇತ್ತು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅತ್ಯುತ್ತಮ ಸ್ನೇಹಿತರು ಎನ್ನಲಾಗುತ್ತಿತ್ತು. ಆದರೆ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧಿಕಾರಕ್ಕೆ ಬಂದರೂ ಪರಿಸ್ಥಿತಿ ಸರಿಯಾಗುತ್ತಿಲ್ಲ. ಈ ಮೂಲಕ ನಿರೀಕ್ಷೆಗಳು ಕೂಡ ಹುಸಿಯಾಗುತ್ತಿದ್ದು, ಅಮೆರಿಕ ಮತ್ತು ರಷ್ಯಾ ಸಂಬಂಧದ ಸುಧಾರಣೆ ಇನ್ನಷ್ಟು ಜಟಿಲವಾಗುತ್ತಿದೆ. ಇದೇ ಸಮಯದಲ್ಲಿ ಬ್ರಿಕ್ಸ್ ಒಕ್ಕೂಟದ ಮೂಲಕ, ಅಮೆರಿಕದ ಡಾಲರ್‌ಗೆ ಪುಟಿನ್ ಗುನ್ನಾ ಇಡಲು ಸಜ್ಜಾಗಿದ್ದರು!
ಪುಟಿನ್ ಹೆಜ್ಜೆಗೆ ಮೊದಲ ಸೋಲು
ವ್ಲಾದಿಮಿರ್ ಪುಟಿನ್ ಮತ್ತು ಬ್ರಿಕ್ಸ್ ಒಕ್ಕೂಟದ ದೇಶಗಳು ಸೇರಿ ಡಾಲರ್ ವಿರುದ್ಧ ನಿಂತಿವೆ ಎನ್ನುವ ಆರೋಪ ಮಾಡಿದ್ದ ಡೊನಾಲ್ಡ್ ಟ್ರಂಪ್, ಶೇಕಡಾ 100 ರಷ್ಟು ತೆರಿಗೆಯ ಎಚ್ಚರಿಕೆ ನೀಡಿದ್ದರು. ಹೀಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ನಂತರ ನಿಲುವು ಬದಲಾಗುತ್ತಿದ್ದು, ಡಾಲರ್ ವಿರುದ್ಧ ಬ್ರಿಕ್ಸ್ ದೇಶಗಳು ನಿಲ್ಲುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿದ್ದರೂ ಪುಟಿನ್ ಅವರು ಮಾತ್ರ ತಮ್ಮ ಪ್ರಯತ್ನ ಕೈಬಿಡುತ್ತಿಲ್ಲ.












Click it and Unblock the Notifications