3ನೇ ಮಹಾಯುದ್ಧ: ಪುಟಿನ್ ಜೀವ ಉಳಿಸಲು ‘ಬಂಕರ್’ ಬಳಕೆ!

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಮನೆಯ ಮೇಲೆ ಶಸ್ತ್ರಾಸ್ತ್ರ ತುಂಬಿದ 2 ಡ್ರೋನ್‌ಗಳು ದಾಳಿ ಮಾಡಿದ್ದೇ ತಡ ಜಗತ್ತಿಗೆ ಈ ಸುದ್ದಿ ಮಿಂಚಿನ ವೇಗದಲ್ಲಿ ತಲುಪಿದೆ. ಮತ್ತೊಂದ್ಕಡೆ ಪುಟಿನ್ ಮನೆ ಮೇಲೆ ದಾಳಿ ನಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ಪುಟಿನ್ ಜೀವ ಉಳಿಸಲು ಅವರ ಕ್ರೆಮ್ಲಿನ್ ಮನೆಯಿಂದ 32 ಕಿ.ಮೀ. ದೂರದ ಬಂಕರ್‌ಗೆ ಪುಟಿನ್‌ರನ್ನ ಶಿಫ್ಟ್ ಮಾಡಲಾಗಿದೆ.

ಜಗತ್ತು 3ನೇ ಮಹಾಯುದ್ಧದ ಭಯದಲ್ಲಿ ನಲುಗುವ ಸಂದರ್ಭದಲ್ಲೇ ರಷ್ಯಾ & ಉಕ್ರೇನ್ ವಾರ್ ಶುರುವಾಗಿ ಲಕ್ಷಾಂತರ ಜನರ ಪ್ರಾಣ ತೆಗೆದಿದೆ. ಈ ಸಂದರ್ಭದಲ್ಲಿ ರಷ್ಯಾ ಕೆಲ ದಿನದಿಂದ ಉಕ್ರೇನ್ ವಿರುದ್ಧ ದಾಳಿ ತೀವ್ರಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವಾಗಲೇ, ರಷ್ಯಾ ಅಧ್ಯಕ್ಷ ಪುಟಿನ್‌ರ ಸರ್ಕಾರಿ ನಿವಾಸದ ಮೇಲೆ ನೇರವಾಗಿ ಬಾಂಬ್ ಹಾಕಲಾಗಿದೆ. ಮಾನವ ರಹಿತ ಡ್ರೋನ್ ಸಹಾಯದಿಂದ ಈ ದಾಳಿ ನಡೆದಿದೆ. ಅನುಮಾನಾಸ್ಪದ ರೀತಿಯಲ್ಲಿ 2 ಡ್ರೋನ್ ಪುಟಿನ್ ಮನೆ ಬಳಿ ಎಂಟ್ರಿ ಕೊಟ್ಟಿದ್ದೇ ತಡ ಎರಡೂ ಡ್ರೋನ್‌ಗಳನ್ನ ಉಡಾಯಿಸಿದೆ ರಷ್ಯಾ ಸೇನೆ.

Russian president Putin shifted to bunker after drone attack on his kremlin house

ಬಂಕರ್ ಒಳಗೆ ಪುಟಿನ್‌ಗೆ ರಕ್ಷಣೆ

ಜಗತ್ತಿನ ಶಕ್ತಿಶಾಲಿ ನಾಯಕರ ಪೈಕಿ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಒಬ್ಬರು. ಹೀಗಾಗಿಯೇ ಮೊದಲೇ ಪ್ಲ್ಯಾನ್ ಮಾಡಿ ಪುಟಿನ್ ಸರ್ಕಾರಿ ನಿವಾಸ ಕ್ರೆಮ್ಲಿನ್ ಸಮೀಪದ ಅಂದರೆ ಅಲ್ಲಿಂದ 32 ಕಿಲೋ ಮೀಟರ್ ದೂರದಲ್ಲಿ ನೊವೊ-ಒಗರೆವೊ ಪ್ರದೇಶದಲ್ಲಿ ಶಕ್ತಿಶಾಲಿ ಬಂಕರ್ ನಿರ್ಮಿಸಲಾಗಿದೆ. ಅದೇ ಬಂಕರ್‌ಗೆ ಗುಟ್ಟಾಗಿ ಪುಟಿನ್ ಅವರನ್ನ ಈಗ ಶಿಫ್ಟ್ ಮಾಡಿದೆ ರಷ್ಯಾ ಸೇನೆ ಎನ್ನಲಾಗಿದೆ. ಅಲ್ಲದೆ ಮಾಸ್ಕೋ ನಗರ ಪೂರ್ತಿ ಸೇನೆ ಸುತ್ತುವರಿದಿದ್ದು, ಶತ್ರುಗಳ ಎಲ್ಲಾ ರೀತಿಯ ದಾಳಿ ಎದುರಿಸಲು ಸಜ್ಜಾಗಿದೆ ಪುಟಿನ್ ಪಡೆ.

ಪುಟಿನ್ ಶತ್ರುಗಳಿಗೆ ಮಾರಿಹಬ್ಬ ಗ್ಯಾರಂಟಿ?

ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಉಕ್ರೇನ್ ವಿರುದ್ಧ ಯಾವುದಾದರು ಬಲವಾದ ಕಾರಣ ಸಿಗಲಿ ಎಂದು ಕಾಯುತ್ತಿತ್ತು. ಪರಿಸ್ಥಿತಿ ಹಿಡಿತಕ್ಕೆ ಸಿಕ್ಕರೆ ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಸನ್ನದ್ಧವಾಗಿತ್ತು ರಷ್ಯಾ ಸೇನೆ. ಈಗ ಸ್ವತಃ ಉಕ್ರೇನ್ ಮಹಾ ಅಪರಾಧ ಮಾಡಿದಂತೆ ತೋರುತ್ತಿದೆ. ಇದೇ ಕಾರಣವನ್ನು ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುವ ಸಾಧ್ಯತೆ ಇದೆ. ಹಾಗೇ ತಮ್ಮ ಶತ್ರುಗಳಿಗೆ ಪುಟಿನ್ ಮಾರಿಹಬ್ಬ ಮಾಡಿಸೋದು ಪಕ್ಕಾ.

Russian president Putin shifted to bunker after drone attack on his kremlin house

ಗಡಿಯಲ್ಲಿ ಅಲರ್ಟ್ ಘೋಷಿಸಿದ ರಷ್ಯಾ

ಕೆಲವು ದಿನಗಳಿಂದ ರಷ್ಯಾ ಗಡಿಯಲ್ಲಿ ಉಕ್ರೇನ್ ಭೀಕರ ದಾಳಿ ನಡೆಸುತ್ತಿತ್ತು. ಪರಿಣಾಮ ರಷ್ಯಾದ ಗಡಿ ಭಾಗದಲ್ಲಿರುವ ಹಳ್ಳಿಗಳು ನಾಶವಾಗುತ್ತಿದ್ದವು. ಇಷ್ಟೆಲ್ಲಾ ನಡೆದರೂ ರಷ್ಯಾ ಸೇನೆ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ತಣ್ಣಗೆ ಕೂತಿದ್ದರು. ಆದರೆ ಈಗ ರಷ್ಯಾ ಅಧ್ಯಕ್ಷರನ್ನೇ ಟಾರ್ಗೆಟ್ ಮಾಡಿ ಉಕ್ರೇನ್ ಎಲ್ಲೋ ಮಹಾ ಎಡವಟ್ಟು ಮಾಡಿರುವ ರೀತಿ ಕಾಣಿಸ್ತಿದೆ. ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ ಸೇನೆಗೆ ಸನ್ನದ್ಧವಾಗಿರಲು ಆದೇಶಿಸಿದ್ದು, ಶಸ್ತ್ರಾಸ್ತ್ರಗಳನ್ನ ಸಿದ್ಧಗೊಳಿಸುತ್ತಿದೆ. ಇದು ಮುಂದೆ ಮಹಾ ವಿನಾಶಕ್ಕೆ ಮುನ್ನುಡಿ ಬರೆಯೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ರಷ್ಯಾ ಅಧ್ಯಕ್ಷರನ್ನ ಬಂಕರ್‌ಗೆ ಶಿಫ್ಟ್ ಮಾಡಿರುವುದು ಜಗತ್ತಿನ ನಿದ್ದೆಗೆಡಿಸಿದೆ. ಅದರಲ್ಲೂ ಉಕ್ರೇನ್ ಮೇಲೆ ರಷ್ಯಾ ಸೇನೆ ಯಾವಾಗ ಬೇಕಾದರೂ ಪ್ರಬಲವಾದ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಉಕ್ರೇನ್ ಕೂಡ ತನ್ನ ಸೇನೆಯನ್ನ ಸನ್ನದ್ಧಗೊಳಿಸಿದೆ. ಪುಟಿನ್ ತಮ್ಮ ಬಂಕರ್ ಮೂಲಕವೇ ಈಗ ಕೆಲಸ ಮಾಡುತ್ತಿದ್ದು, ಶತ್ರು ರಾಷ್ಟ್ರದ ವಿರುದ್ಧ ಯಾವ ಆದೇಶ ಕೊಡುತ್ತಾರೆ ಕಾದು ನೋಡಬೇಕು. ಅಕಸ್ಮಾತ್ ಪರಮಾಣು ದಾಳಿ ನಡೆದರೆ ಅದೇ 3ನೇ ಮಹಾಯುದ್ಧಕ್ಕೆ ರಣಕಹಳೆ ಎಂದು ತಿಳಿಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+