Russia: ರಷ್ಯಾ ದೇಶಕ್ಕೆ ಉಕ್ರೇನ್ ಸೇರ್ಪಡೆ? ಭರ್ಜರಿಯಾಗಿದೆ ಪುಟಿನ್ ಪ್ಲಾನ್!

ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಕೊನೆಯ ಹಂತಕ್ಕೆ ಬಂದಿದ್ದು, ಕೆಲವೇ ದಿನಗಳಲ್ಲಿ ಈ ಯುದ್ಧಕ್ಕೆ ಬ್ರೇಕ್ ಬೀಳಲಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಉಕ್ರೇನ್ ದೇಶ ಕದನ ವಿರಾಮ ಮಾತುಕತೆಗೆ ನಿರ್ಧಾರ ಮಾಡಿಲ್ಲ & ರಷ್ಯಾ ಜೊತೆಗೆ ಮಹತ್ವದ ಸಭೆಗೆ ಕೂಡ ಮುಂದೆ ಬರುತ್ತಿಲ್ಲ. ಹೀಗಿದ್ದಾಗಲೇ ರಷ್ಯಾ ಸೇನೆ ಭರ್ಜರಿಯಾದ ಪ್ಲಾನ್ ಮಾಡಿದ್ದು, ರಷ್ಯಾ ದೇಶಕ್ಕೆ ಉಕ್ರೇನ್ ಸೇರ್ಪಡೆ ಆಗುತ್ತಾ? ಮುಂದೆ ಓದಿ.

2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಕಳೆದ ತಿಂಗಳಷ್ಟೇ 3 ವರ್ಷ ಪೂರೈಸಿದೆ. ಹೀಗೆ 3 ವರ್ಷ ಪೂರೈಸಿದ ಬೆನ್ನಲ್ಲೇ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ವರ್ಕೌಟ್ ಆಗುತ್ತಿಲ್ಲ, ಮತ್ತೊಂದು ಕಡೆ ರಷ್ಯಾದ ನಾಯಕರು ಉಕ್ರೇನ್ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಹಾಗೆ ನೋಡಿದರೆ ಈಗಾಗಲೇ ಉಕ್ರೇನ್ ದೇಶದ ನೆಲ ಭಾಗಶಃ ರಷ್ಯಾ ಮಿಲಿಟರಿ ವಶಕ್ಕೆ ಸಿಕ್ಕಿದ್ದಾಗಿದೆ. ಇಂತಹ ಸಮಯದಲ್ಲೇ ರಷ್ಯಾ ಸೇನೆ ಬಾಕಿ ಉಳಿದ ಸಣ್ಣಪುಟ್ಟ ಪ್ರದೇಶಗಳನ್ನು ವಶಕ್ಕೆ ಪಡೆಯಲು ಮುಂದಾಗಿದೆ. ಇದಕ್ಕಿಂತ ಮುಖ್ಯವಾಗಿ, ಉಕ್ರೇನ್ ರಾಜಧಾನಿ ಕೀವ್ ಕೂಡ ತೊಂದರೆಗೆ ಸಿಲುಕಿದೆ.

Russian Military Is Planning To Acquire The Ukraine Capital Kiev

ಉಕ್ರೇನ್ ರಾಜಧಾನಿ ರಷ್ಯಾ ವಶಕ್ಕೆ?

ರಷ್ಯಾ ಸೇನೆ ಉಕ್ರೇನ್‌ನ ಹಲವು ಭಾಗಗಳನ್ನು ತನ್ನ ವಶಕ್ಕೆ ಪಡೆಯಲು ಮುಂದಾದ ನಂತರ ಉಕ್ರೇನ್ ಸೇನೆ ತನ್ನ ರಾಜಧಾನಿ ರಕ್ಷಣೆಗೆ ಓಡಿ ಹೋಗಿದೆ. ಈಗ ಉಕ್ರೇನ್ ರಾಜಧಾನಿ ಕೀವ್ ಬಿಟ್ಟರೆ ಉಳಿದ ಭಾಗದಲ್ಲಿ ಉಕ್ರೇನ್ ಸೈನಿಕರು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಪಕ್ಕಾ ಪ್ಲಾನ್ ಮಾಡಿ, ಕೀವ್ ನಗರವನ್ನು ಕೂಡ ಸಂಪೂರ್ಣ ವಶಕ್ಕೆ ಪಡೆಯಲು ಈಗ ರಷ್ಯಾ ಪ್ಲಾನ್ ಮಾಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಉಕ್ರೇನ್ ದೇಶವನ್ನು ರಷ್ಯಾ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಪ್ಲಾನ್ ಕೂಡ ನಡೆದಿದೆ ಎಂಬ ಮಾತು ಹರಿದಾಡುತ್ತಿದೆ.

ಅಮೆರಿಕದ ನೆರವು ದಿಢೀರ್ ಸ್ಥಗಿತ

ಉಕ್ರೇನ್‌ಗೆ ಈಗಾಗಲೇ ಸುಮಾರು 350 ಬಿಲಿಯನ್ ಡಾಲರ್ ನೆರವನ್ನ ಅಮೆರಿಕ ನೀಡಿದೆ ಅಂತಾ ಹೇಳಿಕೊಳ್ಳುತ್ತಿದೆ. ಶಸ್ತ್ರಾಸ್ತ್ರಗಳು ಸೇರಿದಂತೆ ಮಾನವೀಯ ನೆರವು ಹೀಗೆ ಹಲವು ರೀತಿಯಲ್ಲಿ ಅಮೆರಿಕ ಸಹಾಯ ಮಾಡಿತ್ತು. ಜೋ ಬೈಡನ್ ಸರ್ಕಾರ ಈ ರೀತಿ ಲಕ್ಷ ಲಕ್ಷ ಕೋಟಿ ರೂಪಾಯಿ ಹಣವನ್ನು ಉಕ್ರೇನ್‌ಗೆ ನೀಡಿತ್ತು. ಇಷ್ಟೆಲ್ಲದರ ನಡುವೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಉಕ್ರೇನ್ ವಿರುದ್ಧ ಗರಂ ಆಗಿದ್ದರು.

ಮೊದಲು ಯುದ್ಧ ನಿಲ್ಲಿಸಿ ಎಂದು ಆದೇಶ ಕೂಡ ಹೊರಡಿಸಿದ್ದರು. ಹೀಗಿದ್ದಾಗಲೇ, ನೆರವು ಸ್ಥಗಿತ ಮಾಡಿ ಉಕ್ರೇನ್ ಬುಡಕ್ಕೆ ಬಿಸಿನೀರು ಕಾಯಿಸಿದೆ ಅಮೆರಿಕ. ಮತ್ತೊಂದು ಕಡೆ ಹೀಗೆ ನೆರವು ಸ್ಥಗಿತಗೊಂಡ ಬೆನ್ನಲ್ಲೇ ಕೈಯಲ್ಲಿ ಕಾಸು ಇಲ್ಲದೆ ಒದ್ದಾಡುತ್ತಿದೆ ಉಕ್ರೇನ್. ಆದರೆ ಈ ಸಮಯದಲ್ಲೇ ರಷ್ಯಾ ಕೂಡ ಪಕ್ಕಾ ಪ್ಲಾನ್ ಮಾಡಿ ಸಂಪೂರ್ಣ ಉಕ್ರೇನ್ ನೆಲವನ್ನೇ ಕಬ್ಜಾ ಮಾಡಲು ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+