ಒಂದೇ ಏಟು.. ಎಲ್ಲಾ ಪೀಸ್ ಪೀಸ್!
ರಷ್ಯಾ ಸೇನೆ ತನ್ನ ಉಗ್ರ ರೂಪ ತೋರಿಸಿದ್ದು, ಈ ಆರ್ಭಟಕ್ಕೆ ಉಕ್ರೇನ್ ಕೊಚ್ಚಿ ಹೋಗಿದೆ. ನಿನ್ನೆ ತಾನೆ ರಷ್ಯಾ ತೈಲ ಸಂಗ್ರಹಗಾರದ ಮೇಲೆ ಬಾಂಬ್ ಹಾಕಿದ್ದ ಉಕ್ರೇನ್‌ಗೆ ಇದೀಗ ರಷ್ಯಾ ಸರಿಯಾಗೇ ಉತ್ತರ ಕೊಟ್ಟಿದೆ. ಈ ಮೂಲಕ ಉಕ್ರೇನ್ ಬುಡ ಅಲ್ಲಾಡಿಸಿದೆ, ರಷ್ಯಾದ ಸೇನೆ ನಡೆಸಿದ ಡೆಡ್ಲಿ ಅಟ್ಯಾಕ್ ಹೆಂಗಿತ್ತು ಗೊತ್ತಾ? ಆ ಭಯಾನಕ ಸ್ಟೋರಿಯ ಕಂಪ್ಲೀಟ್ ಕಹಾನಿಗೆ ಮುಂದೆ ಓದಿ.
ಹೌದು, ಉಕ್ರೇನ್‌ನ 2ನೇ ದೊಡ್ಡ ನಗರ ಹಾರ್ಕಿವ್ ಮೇಲೆ ರಷ್ಯಾದ ಡ್ರೋನ್ ದಾಳಿ ಎಲ್ಲವನ್ನೂ ಛಿದ್ರ ಛಿದ್ರ ಮಾಡಿದೆ. ಹೀಗೆ ರಷ್ಯಾ ಸೇನೆ ನಡೆಸಿದ ದಾಳಿಯ ಪರಿಣಾಮ ಮೂವರು ಮಕ್ಕಳು ಸೇರಿ 7ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಉಕ್ರೇನ್ ದೇಶದ ಹಾರ್ಕಿವ್ ಗವರ್ನರ್ ಒಲೆಹ್ ಸಿನಿಹುಬೊವ್ ರೊಚ್ಚಿಗೆದ್ದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಉಕ್ರೇನ್ ಇದೀಗ ರಷ್ಯಾ ಬಗ್ಗೆ ಮಾಡಿರುವ ಆರೋಪ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ, ಬನ್ನಿ ತಿಳಿಯೋಣ.

ರಷ್ಯಾ ಅಟ್ಯಾಕ್ ಬಗ್ಗೆ ಕಂಪ್ಲೀಟ್ ಡೀಟೇಲ್ಸ್
ನಿನ್ನೆಯಷ್ಟೇ ರಷ್ಯಾದ ಕ್ರಾಸ್‌ನೋಡಾರ್ ಪ್ರಾಂತ್ಯದಲ್ಲಿರುವ ಇಲ್‌ಸ್ಕಿ ತೈಲ ಸಂಸ್ಕರಣಾ ಘಟಕದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಉಕ್ರೇನ್‌ನ ಭದ್ರತಾ ಸಂಸ್ಥೆ ಎಸ್‌ಬಿಯು ನಡೆಸಿದ ದಾಳಿ ಹಿನ್ನೆಲೆ, ತೈಲ ಸಂಸ್ಕರಣಾ ಘಟಕ ಇರುವ ಸ್ಥಳದಲ್ಲಿಯೇ ಬೆಂಕಿ ಹೊತ್ತಿತ್ತು. ಹೀಗೆ ತೈಲ ಸಂಸ್ಕರಣಾ ಘಟಕದ ಮೇಲೆ, ದಾಳಿ ನಡೆಸಿದ ನಂತರ ಪರಿಣಾಮ ಭೀಕರವಾಗಿತ್ತು. ಇದೇ ಕಾರಣಕ್ಕೆ ಈಗ ಉಕ್ರೇನ್ ವಿರುದ್ಧ ರಷ್ಯಾ ಸೇಡು ತೀರಿಸಿಕೊಂಡಿದೆ, ಎಂಬ ಆರೋಪ ಕೇಳಿಬಂದಿದೆ. ಉಕ್ರೇನ್‌ನ ಹಾರ್ಕಿವ್ ನಗರದ ನೆಮಿಶ್ಲಿಯನ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಹಾಗೇ ಇರಾನ್ ನಿರ್ಮಿತ ಶಾಹಿದ್ ಡ್ರೋನ್ ಮೂಲಕ ರಷ್ಯಾ ಅಟ್ಯಾಕ್ ಮಾಡಿದೆ ಎಂಬ ಆರೋಪ ಮಾಡಿದೆ ಉಕ್ರೇನ್.
15 ಮನೆಗಳು ಸುಟ್ಟು ಭಸ್ಮ
ಇನ್ನು ಹೀಗೆ ರಷ್ಯಾ ನಡೆಸಿದ ಡ್ರೋನ್ ದಾಳಿ ಪರಿಣಾಮ, 15 ಮನೆಗಳು ಸುಟ್ಟು ಹೋಗಿವೆ ಎಂದು ಉಕ್ರೇನ್ ಆಕ್ರೋಶ ಹೊರಹಾಕಿದೆ. 50ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು ಪರಿಸ್ಥಿತಿ ಭೀಕರವಾಗಿದೆ ಎಂದು ಉಕ್ರೇನ್ ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಆಕ್ರೋಶ, ಹೊರಹಾಕಿದ್ದಾರೆ. ಹಾಗೇ ಈಶಾನ್ಯ ಹಾರ್ಕಿವ್ & ದಕ್ಷಿಣ ಪ್ರಾಂತ್ಯದ ಒಡೆಸಾ ಗುರಿಯಾಗಿಸಿಯೇ ರಷ್ಯಾ ರಾತ್ರೋರಾತ್ರಿ ಇರಾನ್ ನಿರ್ಮಿತ 31 ಶಾಹಿದ್ ಡ್ರೋನ್ ಮೂಲಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 23 ಡ್ರೋನ್ ನಾಶ ಮಾಡಿದ್ದೀವಿ ಎಂದಿದೆ ಉಕ್ರೇನ್ ವಾಯುಪಡೆ.

ತುತ್ತು ಅನ್ನಕ್ಕೂ ಉಕ್ರೇನ್ ಪರದಾಟ
ಉಕ್ರೇನ್ ಅಧ್ಯಕ್ಷರ ಹಠ ಈಗ ಆ ದೇಶವನ್ನು ಸಂಕಷ್ಟಕ್ಕೆ ದೂಡಿದೆ ಎಂಬ ಆರೋಪಗಳು, ಇಡೀ ಜಗತ್ತಿನಾದ್ಯಂತ ಹರಡಿವೆ. ಇದೇ ಸಮಯದಲ್ಲಿ ಇದೀಗ ಉಕ್ರೇನ್ ಜನರಿಗೆ ಆಹಾರವು ಕೂಡ ಸರಿಯಾಗಿ ಸಿಗುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಅಮೆರಿಕ & ಯುರೋಪ್ ದೇಶಗಳ ಸಹಾಯ ಬಯಸುತ್ತಿದೆ ಉಕ್ರೇನ್ ಸೇನೆ. ಆದರೆ ಇದ್ಯಾವುದೂ ಸದ್ಯ ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಕೈಮೀರುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications