ರಷ್ಯಾ ಅಬ್ಬರಕ್ಕೆ ಉಕ್ರೇನ್ ಸರ್ವನಾಶ: 150ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಷ್ಯಾದ ಸೇನೆಯಿಂದ ದಾಳಿ!
ಒಂದೋ ನಾವು ಇರಬೇಕು, ಇಲ್ಲ ನೀವು ಇರಬೇಕು.. ಹಿಂಗೆ ಡೈಲಾಗ್ ಹೇಳುತ್ತಲೇ ರಷ್ಯಾ ಮಿಲಿಟರಿ ಉಕ್ರೇನ್ ವಿರುದ್ಧ ದಾಳಿ ಮಾಡುತ್ತಿದೆ ಅಂತಾ ಕಾಣುತ್ತೆ. ಯಾಕಂದ್ರೆ ಉಕ್ರೇನ್‌ನ ಮೇಲೆ ಇದೀಗ ರಷ್ಯಾ ನಡೆಸುತ್ತಿರುವ ದಾಳಿಯನ್ನು ನೋಡಿದರೆ ಎಂತಹವರಿಗೂ ಆಘಾತವು ಎದುರಾಗದೇ ಇರುವುದಿಲ್ಲ. ಅಷ್ಟರಮಟ್ಟಿಗೆ ತೀಕ್ಷ್ಣವಾಗಿ ದಾಳಿ ನಡೆಸುತ್ತಿರುವ ರಷ್ಯಾ ಸೇನೆ ಇದೀಗ ಮತ್ತೊಂದು ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿದಂತೆ ಕಾಣುತ್ತಿದೆ. ಮತ್ತೊಂದು ಕಡೆ ಉಕ್ರೇನ್ ಸೇನೆ ಪುಟಿನ್ ಹುಡುಗರು ಕೊಡುತ್ತಿರುವ ಏಟಿಗೆ ನಲುಗಿ ಹೋಗಿದೆ!
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಈಗಾಗಲೇ ಕೈಮೀರಿ ಹೋಗಿದೆ. ಕೆಲವೇ ದಿನದಲ್ಲಿ ಮುಗಿದು ಹೋಗುತ್ತೆ ಅಂತಾ ಅಂದುಕೊಂಡ ರಷ್ಯಾ & ಉಕ್ರೇನ್ ಯುದ್ಧ ಈಗ 2 ವರ್ಷ ಮುಗಿಸಿ 3ನೇ ವರ್ಷವನ್ನೂ ಮುಗಿಸಲು ಸಜ್ಜಾಗಿದೆ. ಹೀಗಿದ್ದರೂ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆ ಇಲ್ಲ. ರಷ್ಯಾ ಕೂಡ ಯುದ್ಧ ನಿಲ್ಲಿಸಲು ಸಜ್ಜಾಗಿಲ್ಲ. ಹೀಗಿದ್ದಾಗ ಅತ್ತ ರಷ್ಯಾ ಸೇನೆ ತನ್ನ ಶತ್ರುಗಳನ್ನ ಬುಡ ಸಮೇತ ಕಿತ್ತು ಹಾಕಲು ಎಂತಹ ಕಠಿಣ ನಿರ್ಧಾರವನ್ನೇ ಕೈಗೊಂಡಿದೆ ಗೊತ್ತಾ? ರಷ್ಯಾ ಸೇನೆಯ ಈ ನಿರ್ಧಾರದಿಂದ ಮುಂದೆ ಏನೆಲ್ಲಾ ಅನಾಹುತಗಳು ಪ್ರಪಂಚಕ್ಕೆ ಎದುರಾಗಬಹುದು? ಬನ್ನಿ ತಿಳಿಯೋಣ.

ರಿವೇಂಜ್‌ಗೆ ಕಾದು ಕೂತಿದ್ದ ರಷ್ಯಾ?
ರಷ್ಯಾ ರೊಚ್ಚಿಗೆದ್ದು ಉಕ್ರೇನ್ ವಿರುದ್ಧ ದಾಳಿ ಮಾಡುತ್ತಿರುವ ಪರಿಣಾಮ, ಇದೀಗ ಪರಿಸ್ಥಿತಿ ಕೈಮೀರಿ ಹೋಗಿದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಸಹಾಯವನ್ನು ಪಡೆದರೂ ಉಕ್ರೇನ್‌ಗೆ ಸುಧಾರಿಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ರಷ್ಯಾ ಸೇನೆ. ಅದರಲ್ಲೂ ಇತ್ತೀಚೆಗಷ್ಟೇ ಉಕ್ರೇನ್ ಅಧ್ಯಕ್ಷನು, ರಷ್ಯಾ ವಿರುದ್ಧ ಕ್ಷಿಪಣಿ ದಾಳಿ ಮಾಡಲು ಅಮೆರಿಕ ನಮಗೆ ಅವಕಾಶ ನೀಡಬೇಕಿದೆ ಎಂದು ಮನವಿ ಮಾಡಿದ್ದರು.
ಉಕ್ರೇನ್ ಹೀಗೆ ಬೇಡಿಕೆ ಇಟ್ಟ ಬಳಿಕ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ಉಕ್ರೇನ್ ರಾಜಕೀಯ ನಾಯಕರು ಈ ಬೆಳವಣಿಗೆಯನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಉಕ್ರೇನ್ ದೇಶದಲ್ಲಿ 150ಕ್ಕೂ ಹೆಚ್ಚು ಜಾಗ ಟಾರ್ಗೆಟ್ ಮಾಡಿ ಒಂದೇ ಬಾರಿಗೆ ದಾಳಿ ಮಾಡಿದೆ ರಷ್ಯಾ ಸೇನೆ. ಅಲ್ಲದೆ ತನ್ನ ಬಳಿ ಇರುವ ಮತ್ತಷ್ಟು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಬಳಸಿ ದಾಳಿ ಮಾಡಲು ರಷ್ಯಾ ಯೋಜಿಸುತ್ತಿದ್ದು, ಉಕ್ರೇನ್ ನಾಶವಾಗುವುದು ಗ್ಯಾರಂಟಿ ಎಂಬ ಮಾತು ಕೇಳಿಬಂದಿದೆ.
ಯುದ್ಧ ನಿಲ್ಲುವ ಬದಲು ಜೋರಾಗುತ್ತಿದೆ!
ಒಟ್ನಲ್ಲಿ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತಂದರು ಅನ್ನುವಂತೆ ರಷ್ಯಾ ಸೇನೆ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ನರಳಾಡುತ್ತಿದೆ. ಮತ್ತೊಂದು ಕಡೆ ರಷ್ಯಾ ಕೂಡ ಗ್ಯಾಪ್ ಕೊಡದೆ ಈ ರೀತಿ ನಿರಂತರ ದಾಳಿ ಮಾಡುತ್ತಿರುವ ಪರಿಣಾಮ ಉಕ್ರೇನ್ ಭಾಗಶಃ ಸರ್ವನಾಶವಾಗಿದೆ. ಈ ಹಿನ್ನೆಲೆಯಲ್ಲಿ ಯುದ್ಧ ನಿಲ್ಲಿಸಬೇಕು ಎಂಬ ಆಗ್ರಹ ಮಾಡುತ್ತಿದ್ದರೂ ಪ್ರಯೋಜನಕ್ಕೆ ಬಂದಿಲ್ಲ. ಯುದ್ಧ ನಿಲ್ಲುವ ಬದಲಾಗಿ ದಿನದಿಂದ ದಿನಕ್ಕೆ ತಿಕ್ಕಾಟ ಮತ್ತಷ್ಟು ಜೋರಾಗುತ್ತಿದೆ.












Click it and Unblock the Notifications