Ukraine War: ಯುದ್ಧ ನಿಲ್ಲುವುದಿಲ್ಲ, ರಷ್ಯಾ ವಿದೇಶಾಂಗ ಸಚಿವರ ಮುನ್ಸೂಚನೆ?
ಉಕ್ರೇನ್‌ಗೆ ಎಷ್ಟು ಏಟು ಬಿದ್ದರೂ ಬುದ್ಧಿ ಬರೋದೆ ಇಲ್ಲ ಅಂತಾ ಕಾಣುತ್ತೆ. ಯಾಕಂದ್ರೆ, ಪದೇ ಪದೇ ಉಕ್ರೇನ್ ಮಾಡಿಕೊಳ್ಳುತ್ತಿರುವ ಎಡವಟ್ಟು ನೋಡುತ್ತಿದ್ದರೆ ಈ ಯುದ್ಧ ಇನ್ನೂ ಹಲವು ವರ್ಷಗಳ ಕಾಲ ಇದೇ ರೀತಿ ಮುಂದುವರಿಯುವ ಭಯ ಆವರಿಸಿದೆ. ರಷ್ಯಾ ಸೇನೆಯ ದಾಳಿಗೆ ಈಗಾಗಲೇ ಛಿದ್ರ ಛಿದ್ರವಾಗಿ ಹೋಗಿರುವ ಉಕ್ರೇನ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಇದೇ ಸಮಯದಲ್ಲಿ ರಷ್ಯಾ ವಿದೇಶಾಂಗ ಸಚಿವರು ಹೊಸ ಬಾಂಬ್ ಸಿಡಿಸಿದ್ದಾರೆ!
ಉಕ್ರೇನ್ & ರಷ್ಯಾ ಯುದ್ಧ ಶುರುವಾಗಿ 3 ವರ್ಷ ತುಂಬಿ 4ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸಬೇಕು ಅನ್ನೋ ಪ್ರಯತ್ನಗಳು ಫಲ ನೀಡುತ್ತಿಲ್ಲ, ಸೌದಿ ಅರೇಬಿಯಾ ನೆಲದಲ್ಲಿ ಅಮೆರಿಕ ನೇತೃತ್ವದಲ್ಲಿ ಸಂಧಾನ ಮಾತುಕತೆ ಈಗಾಗಲೇ ಶುರುವಾಗಿದೆ. ಇಂತಹ ಸಮಯದಲ್ಲೇ ರಷ್ಯಾ ವಿದೇಶಾಂಗ ಸಚಿವ ಸ್ಫೋಟಕ ಹೇಳಿಕೆ ನೀಡಿದ್ದು, ಯಾವುದೇ ಕಾರಣಕ್ಕೆ ಉಕ್ರೇನ್ ನೆಲದಿಂದ ನಾವು ಹೊರಗೆ ಬರುವುದಿಲ್ಲ ಎಂದಿದ್ದಾರೆ. ಈ ಮೂಲಕ ಯುದ್ಧವನ್ನ ನಿಲ್ಲಿಸುವ ಅಮೆರಿಕದ ಪ್ರಯತ್ನಕ್ಕೆ ಬೆಂಕಿ ಬಿದ್ದಂತೆ ಆಗಿದೆ.

ರಷ್ಯಾ ಸೇನೆಯಿಂದ ಇನ್ನಷ್ಟು ದಾಳಿ
ಉಕ್ರೇನ್ ವಿರುದ್ಧ ರಷ್ಯಾ ಸೇನೆ ನಿರಂತರ ದಾಳಿ ನಡೆಸುತ್ತಿದ್ದು, ಒಂದು ಕಡೆ ಸಂಧಾನಕ್ಕಾಗಿ ಮಾತಕತೆ ನಡೆಯುವ ಸಮಯದಲ್ಲೇ ಇನ್ನೊಂದು ಕಡೆ ರಷ್ಯಾ ತನ್ನ ದಾಳಿಯನ್ನ ಮತ್ತಷ್ಟು ಹೆಚ್ಚು ಮಾಡಿದೆ. ಉಕ್ರೇನ್ ದೇಶದ ಹಲವು ಭಾಗಗಳ ಮೇಲೆ ದಾಳಿ ನಡೆದಿದ್ದು, ಭಯಾನಕ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಜನರು ಕೂಡ ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಚಳಿಯಲ್ಲಿ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಯುದ್ಧ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡ್ತಿದ್ದಾರೆ.
ವಿದ್ಯುತ್ ಇಲ್ಲದೆ ತೀವ್ರ ನರಳಾಟ
ರಷ್ಯಾ ಸೇನೆ ಬಲಿಷ್ಠವಾಗಿದೆ, ಉಕ್ರೇನ್ ಮಿಲಿಟರಿಗೆ ಹೋಲಿಕೆಯನ್ನ ಮಾಡಿದ್ರೆ ರಷ್ಯಾ ಮಿಲಿಟರಿ ತುಂಬಾ ಸ್ಟ್ರಾಂಗ್. ಈ ಕಾರಣಕ್ಕೆ ರಷ್ಯಾ & ಉಕ್ರೇನ್ ಕಾಳಗದಲ್ಲಿ ರಷ್ಯಾ ಸೇನೆ ಏಟಿಗೆ ಉಕ್ರೇನ್ ನಲುಗಿದೆ. ಪರಿಸ್ಥಿತಿ ಈಗ ಭಯ ಹುಟ್ಟಿಸುತ್ತಿದ್ದು, ಮುಂದೆ ಏನೆಲ್ಲಾ ನಡೆಯುತ್ತೆ ದೇವರೆ ಅಂತಾ ಉಕ್ರೇನ್ ಜನ ಕೂಡ ಚಿಂತೆ ಮಾಡುವಂತಾಗಿದೆ. ಇಷ್ಟೆಲ್ಲದರ ಮಧ್ಯೆ ಉಕ್ರೇನ್ ವಿದ್ಯುತ್ ಇಲ್ಲದೆ ಚಳಿಯಲ್ಲಿ ನಡುಗುತ್ತಿದೆ. ಆದರೆ ಇದೆಲ್ಲವನ್ನೂ ಅಮೆರಿಕ ಸೂಕ್ಷ್ಮವಾಗಿ ಗಮನಿಸಿ, ಯುದ್ಧಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಹೀಗಿದ್ದರೂ ಎರಡೂ ದೇಶಗಳ ನಡುವೆ ಹೊಂದಾಣಿಕೆ ಕೊರತೆಯ ಕಾರಣಕ್ಕೆ ಮತ್ತೆ ಮತ್ತೆ ಹಿಂಸಾಚಾರ ಭುಗಿಲೇಳುತ್ತಿದೆ.












Click it and Unblock the Notifications