Russia - Ukraine War: ಅಮೆರಿಕ ಫಸ್ಟ್‌: ಉಕ್ರೇನ್‌ಗೆ ಬಿಗ್‌ಶಾಕ್‌ ಕೊಟ್ಟ ದೊಡ್ಡಣ್ಣ!

Russia - Ukraine War: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಒಂದೊಂದೇ ದೇಶಕ್ಕೆ ಶಾಕ್‌ ಕೊಡುವುದನ್ನು ಮುಂದುವರಿಸಿದ್ದಾರೆ. ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಗಳನ್ನು ನಾನು ಬಂದ ಮೊದಲ ದಿನವೇ ನಿಲ್ಲಿಸಲಿದ್ದೇನೆ ಅಂತ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳಿಕೊಂಡೇ ಬಂದಿದ್ದರು. ಅದನ್ನು ಅವರು ಇದೀಗ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇಸ್ರೇಲ್‌ ಹಾಗೂ ಹಮಾಸ್ ಬಂಡುಕೋರರ ನಡುವೆ ಕದನ ವಿರಾಮ ಘೋಷಣೆ ಮಾಡುವಲ್ಲಿ ಟ್ರಂಪ್‌ ಯಶಸ್ವಿಯಾಗಿದ್ದಾರೆ. ಇದೀಗ ರಷ್ಯಾ - ಉಕ್ರೇನ್‌ ಯುದ್ಧಕ್ಕೆ ಬ್ರೇಕ್‌ ಹಾಕುವುದಕ್ಕೆ ಮುಂದಾಗಿದ್ದಾರೆ. ಆದರೆ ಇದರಲ್ಲಿ ಟ್ರಂಪ್ ಗುರಿ ಮಾಡಿರುವುದು ರಷ್ಯಾದ ಜೊತೆ ಜೊತೆಗೆ ಅಮೆರಿಕದ ಶಿಷ್ಯ ಅಥವಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಉಕ್ರೇನ್‌ ದೇಶವನ್ನು. ಹೌದು ಅಮೆರಿಕದ ಆನೆ ಬಲ ತನ್ನ ಬೆನ್ನಿಗೆ ಇದೆ ಅಂತ ಉಕ್ರೇನ್‌ ರಷ್ಯಾದ ಮೇಲೆ ಮುಗಿಬಿದ್ದಿತ್ತು. ಆದರೆ ಇದೀಗ ಅಮೆರಿಕ ಉಕ್ರೇನ್‌ಗೆ ಕೈಕೊಟ್ಟಿದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇರಿಸಿದ್ದಾರೆ. ಉಕ್ರೇನ್‌ ದೇಶಕ್ಕೆ ಅಮೆರಿಕ ನೀಡುತ್ತಿದ್ದ ಎಲ್ಲಾ ರೀತಿಯ ವಿದೇಶಿ ನೆರವನ್ನು ಸ್ಥಗಿತಗೊಳಿಸಲು ಡೊನಾಲ್ಡ್‌ ಟ್ರಂಪ್ ಸರ್ಕಾರ ಮುಂದಾಗಿದೆ. ಆದರೆ ಇಸ್ರೇಲ್ ಹಾಗೂ ಈಜಿಪ್ಟ್‌ ದೇಶಗಳಿಗೆ ನೆರವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್ ಅವರ 2.0 ಹೊಸ ಆಡಳಿತ ಶುರುವಾಗಿದ್ದು. ಟ್ರಂಪ್ ಅವರ ಮೊದಲ ಆಡಳಿತಕ್ಕಿಂತ ಭಿನ್ನವಾಗಿದೆ. ಟ್ರಂಪ್ ಅವರ ಘರ್ಜನೆಗೆ ಹಲವು ದೇಶಗಳು ಈಗಾಗಲೇ ಗಡಗಡ ಎಂದು ನಡುಗಿವೆ.

Russia - Ukraine War America First Donald Trump Gave a Big Shock to Ukraine

ಉಕ್ರೇನ್‌ನ ಮೇಲೆ ರಷ್ಯಾದಂತಹ ದೊಡ್ಡ ರಾಷ್ಟ್ರ ಯುದ್ಧಕ್ಕೆ ಬಂದರೂ ರಷ್ಯಾದೊಂದಿಗೆ ಉಕ್ರೇನ್‌ಗೆ ಸೆಣಸಾಡಲು ಸಾಧ್ಯವಾಗಿದ್ದು ಅಮೆರಿಕದ ಬೆಂಬಲದಿಂದಲೇ. ರಷ್ಯಾದ ವಿರುದ್ಧ ಯುದ್ಧ ಮುಂದುವರಿಸುವುದಕ್ಕೆ ಇಲ್ಲವೇ ರಷ್ಯಾದೊಂದಿಗೆ ಸೆಣಸಾಡುವುದಕ್ಕೆ ಅಮೆರಿಕ ಬೆಂಬಲ ಕೊಟ್ಟಿತ್ತು. ರಷ್ಯಾದ ಮೇಲೆ ಯುದ್ಧಕ್ಕೆ ಶಸ್ತ್ರಾಸ್ತ ಹಾಗೂ ಭಾರೀ ನೆರವನ್ನು ಅಮೆರಿಕ ಉಕ್ರೇನ್‌ಗೆ ಕೊಟ್ಟಿತ್ತು. ಆದರೆ ಈಗ ಅಮೆರಿಕ ಯುದ್ಧ ನಿಲ್ಲಿಸಿ ಅಂತ ಎರಡೂ ರಾಷ್ಟ್ರಗಳಿಗೆ ವಾರ್ನಿಂಗ್‌ ಕೊಟ್ಟಿದೆ. ಉಕ್ರೇನ್‌ಗೆ ನೆರವು ನೀಡುವುದಕ್ಕೆ ಕಡಿವಾಣ ಹಾಕಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಯುದ್ಧಪೀಡಿತ ಅಥವಾ ನೆರವಿನ ನಿರೀಕ್ಷೆಯಲ್ಲಿರುವ ಇಸ್ರೇಲ್‌ ಹಾಗೂ ಈಜಿಪ್ಟ್‌ ದೇಶಗಳಿಗೆ ತುರ್ತು ಆಹಾರ ಹಾಗೂ ಮಿಲಿಟರಿ ನೆರವನ್ನು ಮುಂದುವರಿಸಲು ಅಮೆರಿಕ ನಿರ್ಧರಿಸಿದೆ ಎನ್ನಲಾಗಿದೆ.

ಇನ್ನು ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರ ಅಧಿಕಾರ ಅವಧಿಯಲ್ಲಿ ಉಕ್ರೇನ್‌ಗೆ ಭರ್ಜರಿ ನೆರವು ನೀಡಲಾಗಿತ್ತು. ಯುದ್ಧ ವಿಮಾನಗಳು, ಶಸ್ತ್ರಾಸ್ತ ಹಾಗೂ ಆರ್ಥಿಕ ನೆರವು ಇದರಲ್ಲಿ ಸೇರಿತ್ತು. ಶತಕೋಟಿ ಡಾಲರ್ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ ಈ ಹಿಂದೆ ಪಡೆದಿತ್ತು. ಇದೀಗ ಮುಂದಿನ ದಿನಗಳಲ್ಲಿ ಎಲ್ಲಾ ನೆರವು ನಿಲ್ಲಿಸಲು ಅಮೆರಿಕ ಮುಂದಾಗಿದೆ. ಅಲ್ಲದೆ ರಷ್ಯಾಗೂ ವಾರ್ನಿಂಗ್‌ ಕೊಟ್ಟಿದ್ದು. ರಷ್ಯಾ ಯುದ್ಧ ನಿಲ್ಲಿಸದೆ ಇದ್ದರೆ ರಷ್ಯಾದ ಮೇಲೆ ಭಾರೀ ತೆರಿಗೆ ವಿಧಿಸುವ ಎಚ್ಚರಿಕೆಯನ್ನು ಸಹ ಕೊಡಲಾಗಿದೆ.

ಅಮೆರಿಕ ಫಸ್ಟ್‌: ಡೊನಾಲ್ಡ್‌ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಮೊದಲ ಭಾಷಣದಲ್ಲೇ ಅಮೆರಿಕ ಫಸ್ಟ್‌ ಎನ್ನುವ ಘೋಷಾವಾಕ್ಯವನ್ನು ಘೋಷಿಸಿದ್ದರು. ಅದರಂತೆ ಬೇರೆ ದೇಶಗಳಿಗೆ ಅಮೆರಿಕ ದುಡ್ಡು ಖರ್ಚು ಮಾಡುವುದನ್ನು ನಿಲ್ಲಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ಸಹ ಅಮೆರಿಕ ಹಿಂಪಡೆಯಲು ನಿರ್ಧರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಪರವಾಗಿದೆ ಎನ್ನುವುದು ಅಮೆರಿಕ ಆರೋಪ. ಆದರೆ ಇದರ ಹಿಂದೆಯೂ ಆರ್ಥಿಕ ಲೆಕ್ಕಾಚಾರಗಳಿವೆ. ಅಮೆರಿಕ ಫಸ್ಟ್‌ ಎನ್ನುವ ನೀತಿಯು ಉಳಿದ ರಾಷ್ಟ್ರಗಳಿಗೆ ಅಮೆರಿಕ ನೆರವು ನೀಡುವುದನ್ನು ನಿಲ್ಲಿಸುತ್ತದೆ. ಅದು ಆರ್ಥಿಕ ಹಾಗೂ ಮಿಲಿಟರಿ ಸೇರಿದಂತೆ ವಿವಿಧ ನೆರವು ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+