ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರಗ್ರಹ ನಮಗೆ ಸೇರಿದ್ದು ಅಂತಾ ರಷ್ಯಾ ಕ್ಯಾತೆ..!

|
Google Oneindia Kannada News

ಶುಕ್ರಗ್ರಹ ನಮಗೆ ಸೇರಿದ್ದು ಅಂತಾ ರಷ್ಯಾ ಕಿರಿಕ್ ತೆಗೆದಿದೆ. ಅಷ್ಟಕ್ಕೂ ರಷ್ಯಾ ಹೀಗೆ ಕಿರಿಕ್ ಮಾಡುವುದರ ಹಿಂದೆ ಸುಮಾರು 50 ವರ್ಷಗಳ ಇತಿಹಾಸವೇ ಇದೆ. ಏಕೆಂದರೆ ಶುಕ್ರಗ್ರಹದ ಮೇಲೆ ಮೊದಲಿಗೆ ನೌಕೆಯನ್ನ ಇಳಿಸಿದ್ದು ಇದೇ ರಷ್ಯಾ.

1961ರಿಂದಲೂ ಸತತವಾಗಿ ತನ್ನ ಪ್ರಯತ್ನ ಮುಂದುವರಿಸಿದ್ದ ರಷ್ಯಾ, 1981ರಲ್ಲಿ ಮೊದಲ ಬಾರಿಗೆ ಯಶಸ್ಸು ಕಂಡಿತ್ತು. 'ವೆನೆರಾ' ಹೆಸರಲ್ಲಿ ಶುಕ್ರಯಾನ ಕೈಗೊಂಡಿದ್ದ ರಷ್ಯಾ 1961ರಲ್ಲಿ ತನ್ನ ಮೊದಲ 'ವೆನೆರಾ' ನೌಕೆ ಹಾರಿಬಿಟ್ಟಿತ್ತು. ಆದರೆ ಅದು ಭೂಮಿಯ ಕಕ್ಷೆಯನ್ನೂ ದಾಟಲು ಸಾಧ್ಯವಾಗಿರಲಿಲ್ಲ.

ಹೀಗೆ ಸತತ ಪ್ರಯತ್ನಗಳ ನಂತರ 'ವೆನೆರಾ-13' ಶುಕ್ರಗ್ರಹದ ಮೇಲೆ ಲ್ಯಾಂಡ್ ಆಗಿತ್ತು. ಇದು ಶುಕ್ರಗ್ರಹದ ಮೇಲೆ ಇಳಿದ ಮೊದಲ ಹಾಗೂ ಏಕೈಕ ಉಪಗ್ರಹ. ಈ ಹಿನ್ನೆಲೆಯಲ್ಲಿ ರಷ್ಯಾ ಈಗ ಶುಕ್ರಗ್ರಹದ ಮೇಲೆ ತನ್ನ ಹಕ್ಕುಸ್ವಾಮ್ಯ ಮಂಡಿಸುತ್ತಿದೆ.

ಭೂಮಿ ತಬ್ಬಲಿಯಲ್ಲ, 10 ಅವಳಿ ಸೋದರಿಯರು ಪತ್ತೆ!ಭೂಮಿ ತಬ್ಬಲಿಯಲ್ಲ, 10 ಅವಳಿ ಸೋದರಿಯರು ಪತ್ತೆ!

ರಷ್ಯಾದ ಮಾಸ್ಕೋ ನಗರದಲ್ಲಿ ಆಯೋಜಿಸಲಾಗಿದ್ದ ಔದ್ಯಮಿಕ ಪ್ರದರ್ಶನದಲ್ಲಿ ಮಾತನಾಡಿರುವ ರಷ್ಯಾ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ ಶುಕ್ರನನ್ನು 'ರಷ್ಯನ್ ಗ್ರಹ' ಎಂದಿದ್ದಾರೆ. ಅಲ್ಲದೆ ಅದು ನಮ್ಮ ಆಸ್ತಿ ಎನ್ನುವ ಮೂಲಕ, ಬಾಹ್ಯಾಕಾಶ ಸಮರಕ್ಕೆ ನಾಂದಿ ಹಾಡಿದ್ದಾರೆ.

ಶುಕ್ರಗ್ರಹಕ್ಕಾಗಿ ದಿಢೀರ್ ಪೈಪೋಟಿ..!

ಶುಕ್ರಗ್ರಹಕ್ಕಾಗಿ ದಿಢೀರ್ ಪೈಪೋಟಿ..!

ಶುಕ್ರಗ್ರಹದಲ್ಲಿ ಏಲಿಯನ್‌ಗಳು ಬದುಕಿರುವ ಸಾಧ್ಯತೆಯಿದೆ ಅಂತಾ ವಿಜ್ಞಾನಿಗಳು ಹೇಳಿದ್ದೇ ತಡ ಭೂಮಿಯ ಅವಳಿ ಎಂದೇ ಕರೆಯಲಾಗುವ ಶುಕ್ರ ಗ್ರಹ (Venus) ಬಾಹ್ಯಾಕಾಶ ವಿಜ್ಞಾನಿಗಳ ಕೇಂದ್ರಬಿಂದುವಾಗಿದೆ. ಈ ಕಾರಣಕ್ಕೆ ಶುಕ್ರಗ್ರಹದ ಅಧ್ಯಯನಕ್ಕೆ ದಿಢೀರ್ ಪೈಪೋಟಿ ಶುರುವಾಗಿದೆ. ಕೆಲ ದಿನಗಳ ಹಿಂದೆ 'ನೇಚರ್ ಅಸ್ಟ್ರಾನಮಿ'ಯಲ್ಲಿ ಪ್ರಕಟವಾಗಿದ್ದ ಸಂಶೋಧನಾ ವರದಿಯಲ್ಲಿ ಶುಕ್ರನಲ್ಲಿ ಜೀವಿಗಳು ಬದುಕಿರಬಹುದು ಎನ್ನಲಾಗಿತ್ತು. ಶುಕ್ರ ಗ್ರಹದ ವಾತಾವರಣದ ಕಠಿಣ ಆಮ್ಲೀಯ ಮೋಡಗಳಲ್ಲಿ ಫಾಸ್ಫೈನ್ (Phosphine) ಎಂಬ ಜೈವಿಕ ಅನಿಲದ ಕಣ ಕಂಡುಬಂದಿತ್ತು. ಈ ಮೂಲಕ ಭೂಮಿಯಲ್ಲಿರುವ ಫಾಸ್ಫೈನ್ ಗ್ಯಾಸ್‌ನ ಗುಣ ಗಮನಿಸಿದರೆ ಶುಕ್ರನಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಕ್ಕಿತ್ತು.

ದೂರದ ಅನ್ಯಗ್ರಹದಲ್ಲಿ ನೀರು ಪತ್ತೆ ಹಚ್ಚಿದ ವಿಜ್ಞಾನಿಗಳುದೂರದ ಅನ್ಯಗ್ರಹದಲ್ಲಿ ನೀರು ಪತ್ತೆ ಹಚ್ಚಿದ ವಿಜ್ಞಾನಿಗಳು

ಶುಕ್ರಗ್ರಹದಲ್ಲಿ ಬ್ಯಾಕ್ಟೀರಿಯಾ ಬದುಕಿವೆಯಾ..?

ಶುಕ್ರಗ್ರಹದಲ್ಲಿ ಬ್ಯಾಕ್ಟೀರಿಯಾ ಬದುಕಿವೆಯಾ..?

3 ಹ್ರೈಡ್ರೋಜನ್ ಅಣುಗಳ ಜೊತೆ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಈ ಫಾಸ್ಫೈನ್ ಅನಿಲ ಉತ್ಪತ್ತಿಯಾಗುತ್ತದೆ. ಇದು ಮಾನವರಿಗೆ ತುಂಬಾ ವಿಷಕಾರಿ. ಆದರೂ ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್ಫೈನ್ ಸೃಷ್ಟಿಯಾಗುತ್ತದೆ. ಹೀಗೆ ಶುಕ್ರ ಗ್ರಹದಲ್ಲಿಯೂ ಜೀವಿಗಳು ಬದುಕಿರಬಹುದು, ಶುಕ್ರನ ಆಸಿಡ್ ಮೋಡಗಳ ಒಳಗೆ ಜೀವಿಗಳು ತೇಲುತ್ತಾ ಬದುಕಿರಬಹುದು ಎಂದು ಅಂದಾಜಿಸಲಾಗಿತ್ತು. ಇದಾದ ಬಳಿಕ ಶುಕ್ರಗ್ರಹ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.

ಬೆಳ್ಳಿಚುಕ್ಕಿ ಬೆಳ್ಳಿಚುಕ್ಕಿ ಬಿಂಕಾತೋರಿ ಬೆಳಗೋ ಮುಂಜಾನೆಬೆಳ್ಳಿಚುಕ್ಕಿ ಬೆಳ್ಳಿಚುಕ್ಕಿ ಬಿಂಕಾತೋರಿ ಬೆಳಗೋ ಮುಂಜಾನೆ

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಬಿಸಿ ಬಿಸಿ..!

ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.

ಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕುಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕು

ನೌಕೆ ಹಾರಿಸುತ್ತಿದೆ ರಷ್ಯಾ..!

ನೌಕೆ ಹಾರಿಸುತ್ತಿದೆ ರಷ್ಯಾ..!

ಫಾಸ್ಫೈನ್ ಗ್ಯಾಸ್ ಕಂಡುಬಂದ ಮಾತ್ರಕ್ಕೆ ಶುಕ್ರನಲ್ಲಿ ಜೀವಿಗಳು ಬದುಕಿವೆ ಅಂತಾ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಆ ಗ್ರಹದ ನೆಲ ಮತ್ತು ವಾತಾವರಣದೊಳಗೆ ಖುದ್ದು ಸಂಪರ್ಕ ಸಾಧಿಸಿ ಅಧ್ಯಯನ ನಡೆಸಬೇಕಿದೆ. ಆಗ ಮಾತ್ರ ಸಂಪೂರ್ಣ ಮಾಹಿತಿ ಕಲೆಹಾಕಲು ಸಾಧ್ಯ. ಇದನ್ನೇ ರಷ್ಯಾದ ವಿಜ್ಞಾನಿಗಳು ಹೇಳುತ್ತಿರುವುದು. ಈಗಾಗಲೇ ರಷ್ಯಾ ಹೊರತು ಅಮೆರಿಕ, ಯೂರೋಪ್ ಮತ್ತು ಜಪಾನ್ ದೇಶಗಳು ಶುಕ್ರನ ಬಳಿ ಹೋಗಿವೆ. ಆದರೆ, ಅದರ ನೆಲದ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆ ರಷ್ಯಾದ್ದು. ಇದರ ಬೆನ್ನಲ್ಲೇ ರಷ್ಯಾ ಮತ್ತೊಂದು ನೌಕೆ ಹಾರಿಸಲು ಸಜ್ಜಾಗಿದೆ.

2023ಕ್ಕೆ ಭಾರತದಿಂದ ‘ಶುಕ್ರಯಾನ’..!

2023ಕ್ಕೆ ಭಾರತದಿಂದ ‘ಶುಕ್ರಯಾನ’..!

'ನೇಚರ್ ಅಸ್ಟ್ರಾನಮಿ'ಯ ಸಂಶೋಧನಾ ವರದಿ ಪ್ರಕಟವಾದ ಬೆನ್ನಲ್ಲೇ ಭಾರತದ ಹೆಮ್ಮೆಯ 'ಇಸ್ರೋ' ಸಂಸ್ಥೆ ಮಹತ್ವದ ಘೋಷಣೆ ಹೊರಡಿಸಿತ್ತು. 'ಶುಕ್ರಯಾನ-1' ಮೂಲಕ ಭಾರತದಿಂದ ಉಪಗ್ರಹವೊಂದು ಶುಕ್ರ ಗ್ರಹದ ಕಕ್ಷೆ ತಲುಪುವುದು ಪಕ್ಕಾ ಆಗಿದೆ. 2023ಕ್ಕೆ ಈ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಅದೇ ವರ್ಷ ನೌಕೆ ಶುಕ್ರನತ್ತ ಹಾರುವ ನಿರೀಕ್ಷೆ ಇದೆ. ಹಿಂದೆ ಚಂದ್ರನ ಮೇಲೆ ನೀರಿನ ಸುಳಿವು ನೀಡಿದ್ದು ಇಸ್ರೋ ಸಂಸ್ಥೆ. ಅಲ್ಲದೆ ಮಂಗಳಯಾನ ಮೂಲಕ ಮಂಗಳ ಗ್ರಹದಲ್ಲಿ ನೀರಿನ ಸುಳಿವು ನೀಡಿದ್ದು ಕೂಡ ಭಾರತವೇ. ಈಗ ಭಾರತ ಶುಕ್ರಯಾನ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕುಹೊಸ ಸೌರಮಂಡಲ ಆವಿಷ್ಕಾರ, ನಾಸಾದಿಂದ ಹೊಸ ಬೆಳಕು

English summary
Russia has now staked its claim on Venus, saying it is a "Russian planet." The fight started to take over the Venus, after Sign of Alien life detected on this Planet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X