ಆಕಾಶದಲ್ಲೇ ಉಕ್ರೇನ್‌ಗೆ ಸೇರಿದ 36 ಡ್ರೋನ್ ಪುಡಿ ಪುಡಿ ಮಾಡಿದ ರಷ್ಯಾ!
ರಷ್ಯಾ ಸೇನೆ ತುಂಬಾ ಬಲವಾಗಿದ್ದು, ತನ್ನ ಶತ್ರು ಪಡೆಯನ್ನ ಹಿಮ್ಮೆಟ್ಟಿಸುವ ತಾಕತ್ತನ್ನೂ ಹೊಂದಿದೆ. ಭಾರತದ ಮಿತ್ರ ರಷ್ಯಾ ಇದೀಗ ಉಕ್ರೇನ್ ವಿರುದ್ಧ ಭೀಕರ ಯುದ್ಧ ಸಾರಿದ್ದು, ಕಳೆದ ಒಂದೂವರೆ ವರ್ಷದಿಂದ ಈ ತಿಕ್ಕಾಟ ನಡೆಯುತ್ತಿದೆ. ಆದರೆ ಪದೇ ಪದೆ ಉಕ್ರೇನ್‌ನ ಸೇನೆ ರಷ್ಯಾ ವಿರುದ್ಧ ಡ್ರೋನ್ ಅಸ್ತ್ರ ಪ್ರಯೋಗ ಮಾಡುತ್ತಿತ್ತು. ಈಗ ಉಕ್ರೇನ್‌ನ ಡ್ರೋನ್ ಅಸ್ತ್ರಕ್ಕೆ ರಷ್ಯಾ ಪ್ರತ್ಯಸ್ತ್ರ ಪ್ರಯೋಗ ಮಾಡಿ ಶಾಕ್ ನೀಡಿದೆ.
ಅಂದಹಾಗೆ ಉಕ್ರೇನ್‌ಗೆ ನ್ಯಾಟೋ ಸದಸ್ಯ ರಾಷ್ಟ್ರಗಳು ಸೇರಿದಂತೆ, ಅಮೆರಿಕ ಭಾರಿ ಪ್ರಬಲ ಡ್ರೋನ್‌ಗಳನ್ನ ಉಡುಗೊರೆ ರೂಪದಲ್ಲಿ ನೀಡಿದೆ. ಇದೇ ಕಾರಣಕ್ಕೆ ಉಕ್ರೇನ್ ಸೇನೆ ಕೂಡ ರಷ್ಯಾ ವಿರುದ್ಧ ಡ್ರೋನ್ ಬಳಸಿ ಭೀಕರ ದಾಳಿ ನಡೆಸುತ್ತಿತ್ತು. ಅದರಲ್ಲೂ ಇದೇ ವರ್ಷದ ಮೇ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಅಧಿಕೃತ ಸರ್ಕಾರಿ ನಿವಾಸದ ಮೇಲೂ ಡ್ರೊನ್ ದಾಳಿ ನಡೆದಿತ್ತು. ಈ ದಾಳಿ ಉಕ್ರೇನ್ ಸೇನೆ ಮಾಡಿದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ರಷ್ಯಾದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಎಚ್ಚರಿಕೆ ವಹಿಸಲಾಗಿತ್ತು. ಇಷ್ಟೆಲ್ಲದರ ಮಧ್ಯೆ ರಷ್ಯಾ ಈಗ ಏನು ಮಾಡಿದೆ ಗೊತ್ತಾ?

ಉಕ್ರೇನ್‌ಗೆ ಸೇರಿದ 36 ಡ್ರೋನ್ ಪುಡಿ ಪುಡಿ
ಅಷ್ಟಕ್ಕೂ ಕಪ್ಪು ಸಮುದ್ರ ಸೇರಿದಂತೆ ಕ್ರಿಮಿಯಾ ಪರ್ಯಾಯ ದ್ವೀಪದ ಬಳಿ ದಾಳಿ ನಡೆಸಲು ಹೊಂಚು ಹಾಕಿದ್ದ, ಉಕ್ರೇನ್ ಸೇನೆಗೆ ಸೇರಿದ 36 ಡ್ರೋನ್‌ಗಳನ್ನ ರಷ್ಯಾ ವಾಯುಪಡೆಯು ಹೊಡೆದು ಉರುಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ಲದೆ ಹೀಗೆ ರಷ್ಯಾ ನಡೆಸಿದ ದಾಳಿಯ ಪರಿಣಾಮ ಹಲವು ಡ್ರೋನ್‌ಗಳು ನೆಲಕ್ಕೆ ಉರುಳಿ ಬಿದ್ದು ಬೆಂಕಿ ಕೂಡ ಹೊತ್ತಿಕೊಂಡಿದ್ದು, ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ತನ್ನ ವಿರುದ್ಧ ಉಕ್ರೇನ್ ಪದೇ ಪದೆ ಪ್ರಯೋಗ ಮಾಡುತ್ತಿದ್ದ ಅಸ್ತ್ರವನ್ನು ರಷ್ಯಾ ಸೇನೆಯ ಯೋಧರು ಠುಸ್ ಪಟಾಕಿ ಮಾಡಿದ್ದಾರೆ.

ಯುದ್ಧದ ಸಹಾಯ ನಿಲ್ಲಿಸುತ್ತಾ ಅಮೆರಿಕ?
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಶುರುವಾಗಿರುವುದು ಈಗ ಉಕ್ರೇನ್‌ಗೂ ಆಪತ್ತು ತಂದಿದೆ. ಏಕೆಂದರೆ ರಷ್ಯಾ & ಉಕ್ರೇನ್ ಯುದ್ಧದ ಜ್ವಾಲೆ ಧಗಧಗಿಸುವ ಸಮಯದಲ್ಲಿ ಅಮೆರಿಕದಿಂದ ಉಕ್ರೇನ್ ಸೇನೆಗೆ ಕೆಟ್ಟ ಸುದ್ದಿ ಸಿಕ್ಕಿದೆ. ಇಸ್ರೇಲ್ ಪರ ಅಮೆರಿಕ ನಿಲ್ಲಬೇಕಿದ್ದು, ಇದೇ ಕಾರಣದಿಂದ ಲಕ್ಷಾಂತರ ಕೋಟಿ ರೂಪಾಯಿ ಯುದ್ಧ ನೆರವನ್ನು ಅಮೆರಿಕ ಇಸ್ರೇಲ್ ಸೇನೆಗೆ ಘೋಷಿಸಿದೆ. ಹೀಗಿದ್ದಾಗಲೇ ಉಕ್ರೇನ್‌ಗೆ ಕೂಡ ಸಹಾಯ ಮಾಡಲು ಆಗುತ್ತಿಲ್ಲ. ಈ ಕಾರಣಕ್ಕೆ ಯುದ್ಧದಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಸೇನೆ, ಭಾರಿ ಹಿನ್ನಡೆ ಅನುಭವಿಸುತ್ತಿದೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ.












Click it and Unblock the Notifications