ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಕೊವಿಡ್19ಗೆ ಔಷಧ, Avifavir ಮ್ಯಾಜಿಕ್ ಡ್ರಗ್?

|
Google Oneindia Kannada News

ಮಾಸ್ಕೋ, ಜೂನ್ 11: ಜಾಗತಿಕ ಮಹಾಮಾರಿ ಕೊವಿಡ್19 ಗೆ ಲಸಿಕೆ ಕಂಡು ಹಿಡಿಯಲು ಅನೇಕ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಪ್ರಮುಖವಾಗಿ ಕಾಣಿಸಿಕೊಂಡಿದೆ.

ರಷ್ಯಾದಲ್ಲಿ ಸಕ್ರಿಯ ನೊವೆಲ್ ಕೊರೊನಾವೈರಸ್ ಸೋಂಕಿತರ ಸಂಖ್ಯೆ 5 ಲಕ್ಷಕ್ಕೇರಿತ್ತಿದ್ದಂತೆ ರಷ್ಯಾದಲ್ಲಿ ಆತಂಕ ಹೆಚ್ಚಾಗಿದೆ. ಈ ನಡುವೆ ಗುರುವಾರದಂದು ಕೊವಿಡ್19 ಚಿಕಿತ್ಸೆಗಾಗಿ ಅಧಿಕೃತ ಡ್ರಗ್ ವಿತರಿಸಿರುವುದಾಗಿ ರಷ್ಯಾ ಪ್ರಕಟಿಸಿದೆ.

ಅಮೆರಿಕದಲ್ಲಿ ಹೆಚ್ಚು ಕೊರೊನಾ ಕೇಸ್‌ಗಳು ಸಕ್ರಿಯವಾಗಿದೆ. 1,881,205 ಲಕ್ಷ ಜನರಿಗೆ ಸೋಂಕು ತಗುಲಿತ್ತು. ಅದರಲ್ಲಿ 645,974 ಗುಣಮುಖರಾಗಿದ್ದಾರೆ. ಇನ್ನು 1,127,172 ಪ್ರಕರಣಗಳು ಆಕ್ಟಿವ್ ಆಗಿದೆ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಹಾಗು ಮೂರನೇ ಸ್ಥಾನದಲ್ಲಿ ರಷ್ಯಾ ಸ್ಥಾನ ಪಡೆದಿದ್ದು, 100,285 ಆಕ್ಟಿವ್ ಕೇಸ್ ಹೊಂದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ.

HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!HCQ ಔಷಧ ಸೇವನೆ ನಿಲ್ಲಿಸಿದ ಟ್ರಂಪ್, ಕಾರಣ ಬಹಿರಂಗ!

ಆಂಟಿ ವೈರಲ್ ಡ್ರಗ್ ಅವಿಫಾವಿರ್(Avifavir)ನ ಮೊದಲ ಕಂತು ಎಲ್ಲೆಡೆ ವಿತರಣೆ ಮಾಡಲಾಗಿದೆ. ರಷ್ಯಾದ ಪ್ರಮುಖ ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಈ ಡ್ರಗ್ ಬಳಕೆಯಾಗಲಿದೆ ಎಂದು ಆರ್ ಡಿಐಎಫ್ ಸಂಸ್ಥೆ ಹೇಳಿಕೊಂಡಿದೆ.

ಆರ್ ಡಿಐಎಫ್ ಮುಖ್ಯಸ್ಥ ಕ್ರಿರಿಲ್ ಡಿಮಿಟ್ರಿವ್ ಭರವಸೆ

ಆರ್ ಡಿಐಎಫ್ ಮುಖ್ಯಸ್ಥ ಕ್ರಿರಿಲ್ ಡಿಮಿಟ್ರಿವ್ ಭರವಸೆ

ಕೊವಿಡ್19ಗಾಗಿ ಡ್ರಗ್ ಕಂಡು ಹಿಡಿಯಲು ರಷ್ಯಾದ ಸಂಶೋಧಕರಿಗೆ ಹಣ ಒದಗಿಸಿದ ಸಂಸ್ಥೆಗಳಲ್ಲಿ ಆರ್ ಡಿ ಐಎಫ್ ಪ್ರಮುಖವಾಗಿದ್ದು, ಶೇ 50ರಷ್ಟು ಹೂಡಿಕೆ ಮಾಡಿದೆ. ಕೆಮಾರ್ ಹೆಸರಿನ ಕಂಪನಿಗೆ ಈ ಡ್ರಗ್ ಉತ್ಪಾದನೆಯ ಲೈಸನ್ಸ್ ಸಿಕ್ಕಿದೆ. ರಷ್ಯಾದ ಆರೋಗ್ಯ ಇಲಾಖೆಯಿಂದ ಈ ಡ್ರಗ್ ಬಳಕೆಗೆ ಅನುಮತಿ ಸಿಕ್ಕಿದೆ.

ಪ್ರತಿ ತಿಂಗಳಿಗೆ ಸುಮಾರು 60,000 ಸೋಂಕಿತರಿಗೆ ಈ ಡ್ರಗ್ ನೀಡಲು ಬೇಕಾದ ಪೂರೈಕೆ ಮಾಡುವಂತೆ ಕೆಮಾರ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಆರ್ ಡಿಐಎಫ್ ಮುಖ್ಯಸ್ಥ ಕ್ರಿರಿಲ್ ಡಿಮಿಟ್ರಿವ್ ಇತ್ತೀಚೆಗೆ ರೈಟರ್ಸ್ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಜಪಾನಿಯರು ಮೊದಲಿಗೆ ಕಂಡು ಹಿಡಿದ ಡ್ರಗ್

ಜಪಾನಿಯರು ಮೊದಲಿಗೆ ಕಂಡು ಹಿಡಿದ ಡ್ರಗ್

2014ರಲ್ಲಿ ಜಪಾನಿಯರು ಮೊದಲಿಗೆ ಅವಿಫಾವಿರ್ ಮಾತ್ರೆಯನ್ನು ಕಂಡು ಹಿಡಿದು ಜ್ವರ ನಿವಾರಣೆಗಾಗಿ ಬಳಸತೊಡಗಿದರು. ಅಂದಿನಿಂದ ಇಲ್ಲಿ ತನಕ ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಹೀಗಾಗಿ, ಕೊವಿಡ್ 19 ರೋಗಿಗಳ ಕ್ಲಿನಿಕಲ್ ಟ್ರಯಲ್ ಬಳಕೆಗೂ ಸುರಕ್ಷಿತ ಹಾಗೂ ತ್ವರಿತಗತಿಯಲ್ಲಿ ಟ್ರಯಲ್ ಮುಗಿಸಬಹುದು ಎಂದು ಜಪಾನಿ ತಜ್ಞರು ಸೂಚನೆ ನೀಡಿದ ಬಳಿಕ ರಷ್ಯನ್ನರು ಟ್ರಯಲ್ ಆರಂಭಿಸಿದರು. ರಷ್ಯಾ ಹಾಗೂ ಜಪಾನ್ ಜಂಟಿ ಸಹಯೋಗದಲ್ಲಿ ಕೊವಿಡ್ 19ಗೆ ಈ ಡ್ರಗ್ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಸಂಶೋಧನೆ, ಟ್ರಯಲ್ ನಡೆಸಲಾಗಿದೆ.

ಸಂಪೂರ್ಣವಾಗಿ ಕೋವಿಡ್ 19 ತೊಲಗಿಸಬಹುದೇ?

ಸಂಪೂರ್ಣವಾಗಿ ಕೋವಿಡ್ 19 ತೊಲಗಿಸಬಹುದೇ?

ಆದರೆ, ಈ ಡ್ರಗ್ ಬಳಕೆಯಿಂದ ಸಂಪೂರ್ಣವಾಗಿ ಕೋವಿಡ್ 19 ತೊಲಗಿಸಬಹುದೇ ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಕ್ಲಿನಿಕಲ್ ಟ್ರಯಲ್ ಸರಿಯಾದ ರೀತಿಯಲ್ಲಿ ಆಗಿಲ್ಲ. ಅತಿ ಕಡಿಮೆ ಅವಧಿಯ ಟ್ರಯಲ್ ಮಾಡಲಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ಅವಧಿ ಹಾಗೂ ಅತಿ ಕಡಿಮೆ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದೆ ಎಂಬ ವರದಿಯೂ ಇದೆ. ಆದರೆ, ರಷ್ಯಾದಲ್ಲಿ ಸೋಂಕಿತರ ಸಂಖ್ಯೆ ಅರ್ಧ ಮಿಲಿಯನ್ ದಾಟಿದ್ದು, ಡ್ರಗ್ ಬಳಕೆ ಅನಿವಾರ್ಯವಾಗಿದೆ. ಮಾನವರ ಮೇಲೆ ಡ್ರಗ್ ಪ್ರಯೋಗ ಮಾಡಿ, ಫಲಿತಾಂಶ ಬರುವ ಮೊದಲೆ ಇದು ಸೂಕ್ತವಾದ ಔಷಧ ಎಂದು ರಷ್ಯಾ ಪ್ರಮಾಣ ಪತ್ರ ನೀಡಿದೆ.

502,436 ಸಕ್ರಿಯ ಕೊರೊನಾವೈರಸ್ ಪ್ರಕರಣ

502,436 ಸಕ್ರಿಯ ಕೊರೊನಾವೈರಸ್ ಪ್ರಕರಣ

ರಷ್ಯಾದ ಸುಮಾರು 80 ಪ್ರದೇಶಗಳ ಪೈಕಿ 8 ಪ್ರದೇಶಗಳಿಗೆ ಗುರುವಾರದಂದು ಡ್ರಗ್ ಪೂರೈಕೆ ಮಾಡಲಾಗಿದೆ. ಹಂತ ಹಂತವಾಗಿ ಎಲ್ಲಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುವುದು ಎಂದು ಡಿಮಿಟ್ರಿವ್ ಹೇಳಿದರು. ರಷ್ಯಾದ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಸದ್ಯ ಕೊವಿಡ್ 19 ನಿಯಂತ್ರಣ, ಚಿಕಿತ್ಸೆಗೆ ಈ ಡ್ರಗ್ ಸೂಕ್ತ ಎಂದು ಅನುಮೋದಿಸಿದ್ದಾರೆ.

ರಷ್ಯಾದಲ್ಲಿ ಸುಮಾರು 502,436 ಸಕ್ರಿಯ ಕೊರೊನಾವೈರಸ್ ಪ್ರಕರಣಗಳಿದ್ದು, ಬ್ರೆಜಿಲ್ ಹಾಗೂ ಯುಎಎಸ್ಎ ನಂತರ ಅತಿ ಹೆಚ್ಚು ಸೋಂಕಿತರನ್ನು ಹೊಂದಿದೆ. ಆದರೆ, ರಷ್ಯಾದಲ್ಲಿ ಸಾವಿನ ಪ್ರಮಾಣ ಕಡಿಮೆ ಪ್ರಮಾಣದಲ್ಲಿದೆ. ಇಲ್ಲಿ ತನಕ 6,532 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಅವಿಫಾವಿರ್ ಮಾತ್ರೆ ಎಷ್ಟರಮಟ್ಟಿಗೆ ಪರಿಣಾಮಕಾರಿ

ಅವಿಫಾವಿರ್ ಮಾತ್ರೆ ಎಷ್ಟರಮಟ್ಟಿಗೆ ಪರಿಣಾಮಕಾರಿ

favipiravir ಮೂಲ Anti viral ಡ್ರಗ್ ಆಧಾರ ಮೇಲೆ ಅವಿಫಾವಿರ್ ತಯಾರಾಗುತ್ತಿದ್ದು, 2014ರಿಂದ ಮುಖ್ಯವಾಗಿ ವಿಷಯ ಶೀತ ಜ್ವರಕ್ಕೆ ಬಳಸಲಾಗುತ್ತಿದೆ. ಸದ್ಯ ರಷ್ಯಾದಲ್ಲಿ ಕೊವಿಡ್ 19ಗೆ ಬಳಸಲು ಆರಂಭಿಸಿ ತಿಂಗಳು ಕೂಡಾ ಕಳೆದಿಲ್ಲ. ಸೈಡ್ ಎಫೆಕ್ಟ್ ಇಲ್ಲದಿರುವುದರಿಂದ 10 ದಿನಗಳ ಕ್ಲಿನಿಕಲ್ ಟ್ರಯಲ್ ಮಾತ್ರ ಮಾಡಲಾಗಿದೆ.

ಈ ಡ್ರಗ್ ಪಡೆದ ರೋಗಿಗೆ 4 ದಿನಗಳಲ್ಲೇ ಸೋಂಕು ತೊಲಗಿದೆ. ಶೇ 80ರಷ್ಟು ಕಾರ್ಯಕ್ಷಮತೆಯನ್ನು ಇದು ಹೊಂದಿದೆ ಎಂದು ಮಾಸ್ಕೋ ವಿವಿಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಿದ ಐಎಂ ಶೆಕೆನೊವ್ ಮೆಡಿಕಲ್ ವಿವಿ, ಲೊಮೊನೊಸೊವ್ ಮಾಸ್ಕೋ ವಿವಿ ವಿಜ್ಞಾನಿಗಳ ತಂಡ ಹೇಳಿದೆ. 10 ದಿನಗಳ ತನಕದ ಡೋಸೆಜ್ ಪೂರ್ಣಗೊಳಿಸಿದ ರೋಗಿಗಳಿಗೆ ಯಾವುದೇ ಸೋಂಕು, ಯಾವುದೇ ಸೈಡ್ ಎಫೆಕ್ಟ್ ಕಂಡು ಬಂದಿಲ್ಲ. ಸದ್ಯ ಕೊನೆ ಹಂತದ ಕ್ಲಿನಿಕಲ್ ಟ್ರಯಲ್ ಜಾರಿಯಲ್ಲಿದ್ದು 33 ಕೇಂದ್ರಗಳಲ್ಲಿ 330 ರೋಗಿಗಳ ಮೇಲೆ ಪ್ರಯೋಗ ನಡೆದಿದೆ.

English summary
Russia on Thursday rolled out Avifavir a drug approved to treat patients suffering from the novel coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X