Russia & Ukraine War: ರಷ್ಯಾ ಗುಡುಗು.. ಉಕ್ರೇನ್‌ಗೆ ಶುರುವಾಯ್ತು ನಡುಕ.. ರಾಜಿ ಸಾಧ್ಯವೇ ಇಲ್ಲ ಅಂತಿದೆ ರಷ್ಯಾ!
ರಷ್ಯಾ & ಉಕ್ರೇನ್ ನಡುವೆ ಎಲ್ಲಾ ಹಾಳಾಗಿ ಹೋಗಿದೆ, ಕೊನೇ ಚಾನ್ಸ್ ಅಂತಾ ಕಾಯುತ್ತಿದ್ದ ಸಂಧಾನದ ಹಾದಿ ಕೂಡ ಇದೀಗ ಮುಗಿದು ಹೋಗಿದೆ. ಈ ಮೂಲಕ ರಷ್ಯಾ & ಉಕ್ರೇನ್‌ನ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಅದರಲ್ಲೂ ಈ ವಿಚಾರದಲ್ಲಿ ಉಕ್ರೇನ್‌ಗೆ ನೇರವಾಗಿ ವಾರ್ನಿಂಗ್ ಕೊಟ್ಟಿರುವ ರಷ್ಯಾ ಈಗ ಉಕ್ರೇನ್ ಸೇನೆಯ ಎದೆ ನಡುಗುವಂತೆ ಮಾಡಿದೆ. ಹಾಗಿದ್ರೆ ಪರಮಾಣು ಬಾಂಬ್ ಬಳಕೆ ಆಗುತ್ತಾ? ಮುಂದೆ ಓದಿ.
ಉಕ್ರೇನ್ ಜೊತೆ, ರಷ್ಯಾ ಸಂಧಾನ ಮಾತುಕತೆಗೆ ಸಿದ್ಧ ಅನ್ನೋದನ್ನ ಈ ಮೊದಲಿನಿಂದಲು ಹೇಳಿಕೊಂಡು ಬರುತ್ತಲೇ ಇದೆ. ಆದರೆ ಉಕ್ರೇನ್ ಸೂಕ್ತವಾಗಿ ಸ್ಪಂದಿಸದ ಕಾರಣಕ್ಕೆ ಇದೀಗ ಪರಿಸ್ಥಿತಿ ಕೈಮೀರಿ ಹೋಗಿದೆ ಎಂಬ ಆರೋಪ ಕೇಳಿ ಬಂದಿದೆ. ಒಂದು ಕಡೆ ರಷ್ಯಾ ಆಕ್ರೋಶ ಹೊರ ಹಾಕುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಭೀಕರ ದಾಳಿ ನಡೆಸಿ ಉಕ್ರೇನ್ ದೇಶದ ರಾಜಧಾನಿ ಕೀವ್‌ನ ಕ್ಷಿಪಣಿಗಳ ಮೂಲಕ ಛಿದ್ರ ಛಿದ್ರ ಮಾಡಲು ಸ್ಕೆಚ್ ಹಾಕಿದೆ. ಅಮೆರಿಕ ಕೂಡ ರಷ್ಯಾ ಕೋಪಕ್ಕೆ ಬೆಚ್ಚಿ ಬಿದ್ದಿದೆ. ಇಂತಹ ಸಮಯದಲ್ಲೇ....

ಪರಮಾಣು ಬಾಂಬ್ ಬಳಕೆ ಆಗುತ್ತಾ?
ರಷ್ಯಾ ಇದೀಗ ಉಕ್ರೇನ್ ವಿರುದ್ಧದ ಯುದ್ಧದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದೆ. ಅಂದಹಾಗೆ ಉಕ್ರೇನ್ ಜೊತೆಗೆ ಸಂಧಾನಕ್ಕೆ ಸಿದ್ಧ ಎಂಬ ರೀತಿ ಪ್ರತಿಕ್ರಿಯೆ ನೀಡುತ್ತಿದ್ದ ರಷ್ಯಾ ಈಗ ತನ್ನ ಮಾತು ಬದಲಿಸಿ, ಈಗಿನ ಪರಿಸ್ಥಿತಿಯಲ್ಲಿ ಸಂಧಾನ ಸಾಧ್ಯವೇ ಇಲ್ಲ ಎಂಬ ರೀತಿ ರಿಯಾಕ್ಷನ್ ಕೊಟ್ಟಿದೆ.
ಇದು ಭಾರಿ ದೊಡ್ಡ ಸಂಚಲನಕ್ಕೆ ಕೂಡ ಕಾರಣವಾಗಿದೆ. ಯಾಕಂದ್ರೆ ಈಗಿರುವ ವಾತಾವರಣ ಭಯವನ್ನು ಹುಟ್ಟಿಸುತ್ತಿದ್ದು, ರಷ್ಯಾ ಯಾವ ಕ್ಷಣದಲ್ಲಿ ಬೇಕಾದರೂ ಉಕ್ರೇನ್ ನೆಲದ ಮೇಲೆ ನ್ಯೂಕ್ಲಿಯರ್ ಬಾಂಬ್ ಅಂದ್ರೆ ಪರಮಾಣು ಬಾಂಬ್ ಬಳಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಎಲ್ಲಾ ರೀತಿಯೂ ಯುರೋಪ್ ದೇಶಗಳು ಚಿಂತೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಉಕ್ರೇನ್ ಬೆನ್ನಿಗೆ ನಿಂತಿರುವ ಅಮೆರಿಕ
ಅಮೆರಿಕ ಸದಾ ಉಕ್ರೇನ್ ಬೆನ್ನಿಗೆ ನಿಂತು ಪರೋಕ್ಷವಾಗಿ ರಷ್ಯಾ ವಿರುದ್ಧ ದಾಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ರಷ್ಯಾ ಸೇನೆಯದ್ದು. ಇದೇ ಕಾರಣಕ್ಕೆ ಎರಡೂ ದೇಶಗಳ ಮಧ್ಯೆ ಸಂಬಂಧ ಹಳಸಿ ಹೋಗಿದೆ. ಹೀಗಿದ್ದಾಗ ಮತ್ತೊಂದು ಸ್ಫೋಟಕ ವಿಚಾರ ಕೂಡ ಬಯಲಾಗಿ ಅಮೆರಿಕ ನಲುಗಿ ಹೋಗಿದೆ.
ಅದು ಏನಂದ್ರೆ ಯಾವ ಕ್ಷಣದಲ್ಲಿ ಬೇಕಾದರೂ ರಷ್ಯಾದ ಸೇನೆ, ನೇರ ಉಕ್ರೇನ್ ರಾಜಧಾನಿ ಕೀವ್ ಅನ್ನ ಪೀಸ್ ಪೀಸ್ ಮಾಡುವ ಭಯ ಈಗ ಕಾಡುತ್ತಿರುವ ಕಾರಣ ಕೀವ್ ರಾಜಧಾನಿಯಿಂದ ಅಮೆರಿಕ ಹೊರ ಬಂದಿದೆ. ಕೀವ್ ಭಾಗದಲ್ಲಿ ಇರುವ ತನ್ನ ರಾಯಭಾರ ಕಚೇರಿಗೆ ದಿಢೀರ್ ಬೀಗ ಹಾಕಿದೆ ಅಮೆರಿಕ.












Click it and Unblock the Notifications