ರಷ್ಯಾ ಯುದ್ಧ ಮಾಡುತ್ತಿರುವುದು ಏಕೆ? ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು?
ಅದ್ಯಾವ ಕೇಡಿಗೆ ಉಕ್ರೇನ್ ವಿರುದ್ಧ ರಷ್ಯಾ ಯದ್ಧ ಘೋಷಣೆ ಮಾಡಿತೋ ಗೊತ್ತಿಲ್ಲ ಆದ್ರೆ ಈ ಯುದ್ಧ ಶುರುವಾದ ನಂತರ ಇಡೀ ಜಗತ್ತಿಗೇ ನೆಮ್ಮದಿ ಇಲ್ಲ. ಲಕ್ಷಾಂತರ ಜನರ ಪ್ರಾಣ ಸೇಡಿನ ಯುದ್ಧಕ್ಕೆ ಬಲಿಯಾಗಿದ್ದರೆ, ಲೆಕ್ಕವಿಲ್ಲದಷ್ಟು ಜನರ ಬದುಕು ಬೀದಿಗೆ ಬಿದ್ದಿದೆ. ಈ ಸಂದರ್ಭದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ತಾವು ಯುದ್ಧ ಮಾಡಿಸಿದ್ದು ಏಕೆ? ಎಂಬ ಕುರಿತು ಮಾತನಾಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಉಕ್ರೇನ್ ವಿರುದ್ಧ ರಷ್ಯಾ ಘೋಷಣೆ ಮಾಡಿದ ಯುದ್ಧ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಈ ಯುದ್ಧ ನಿಲ್ಲಿಸಲು ಭಾರತ ಸೇರಿ ಜಗತ್ತಿನ ಪ್ರಮುಖ ದೇಶಗಳು ಕೂಡ ಪ್ರಯತ್ನ ಆರಂಭಿಸಿವೆ. ಆದರೆ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿ ಹೋಗುತ್ತಿವೆ. ಇತ್ತೀಚೆಗೆ ಭಾರತದ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿ20 ಶೃಂಗಸಭೆ ಸಂದರ್ಭದಲ್ಲೂ ರಷ್ಯಾ & ಉಕ್ರೇನ್ ಯುದ್ಧ ಕೊನೆಯಾಗಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಯುದ್ಧ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಪರಿಸ್ಥಿತಿ ಹೀಗೆ ಕೈಮೀರಿ ಹೋದ ಸಮಯದಲ್ಲೇ ರಷ್ಯಾದ ಅಧ್ಯಕ್ಷರು ತಾವು ಯುದ್ಧ ಘೋಷಣೆ ಮಾಡಿದ್ದು ಏಕೆ? ಎಂಬ ಕಾರಣ ಬಿಚ್ಚಿಟ್ಟಿದ್ದಾರೆ.

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಏಕೆ?
ಹೌದು ರಷ್ಯಾ ತನ್ನ ಸಾರ್ವಭೌಮತ್ವ ಮತ್ತು ಆಧ್ಯಾತ್ಮಿಕ ಮೌಲ್ಯಗಳ ರಕ್ಷಣೆಗಾಗಿ ಯುದ್ಧವನ್ನ ಮಾಡಿದೆ ಅಂತಾ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಈ ಬಗ್ಗೆ ಕ್ರೆಮ್ಲಿನ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಭಾಷಣದಲ್ಲಿ ಈ ಮಾತು ಹೇಳಿದ್ದಾರೆ ಪುಟಿನ್. ಹಾಗೇ ಇದೇ ವೇಳೆ ನಾವು ರಷ್ಯಾ ರಕ್ಷಿಸುತ್ತಿದ್ದೇವೆ, ಮಾತೃಭೂಮಿಗಾಗಿ, ಸಾರ್ವಭೌಮತ್ವ, ಆಧ್ಯಾತ್ಮಿಕ ಮೌಲ್ಯ ಮತ್ತು ಏಕತೆಗಾಗಿ, ವಿಜಯಕ್ಕಾಗಿ ಒಟ್ಟಾಗಿ ಹೋರಾಡುತ್ತಿದ್ದೇವೆ ಅಂತಾ ಹೇಳಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.
ಹಾಗೇ ಮತ್ತೊಂದು ಕಡೆ ಇದೀಗ ಉಕ್ರೇನ್ ಸೇನೆ ಕೈಯಿಂದ ರಷ್ಯಾ ವಶಕ್ಕೆ ಪಡೆದ ಜಾಗದ ಅಭಿವೃದ್ಧಿ ಬಗ್ಗೆಯೂ ಪುಟಿನ್ ಮಾತನಾಡಿದ್ದಾರೆ. ರಷ್ಯಾ ಹಿಡಿತಕ್ಕೆ ಸಿಕ್ಕಿರುವ ಪ್ರದೇಶಗಳ ಅಭಿವೃದ್ಧಿಗೆ ಬದ್ಧ ಎಂಬ ಮಾತನ್ನೂ ಪುಟಿನ್ ಹೇಳಿದ್ದು, ಇದಕ್ಕಾಗಿ ದೊಡ್ಡ ಪ್ರಮಾಣದ ಕಾರ್ಯಕ್ರಮ ರೂಪಿಸುವ ಮಾತನಾಡಿದ್ದಾರೆ. ಡೊನೆಟ್ಸ್ಕ್, ಲುಹಾನ್ಸಕ್, ಕೆರ್ಸಾನ್ ಮತ್ತು ಝಪೊರಿಝಿಯಾ ಪ್ರದೇಶಗಳು ಈಗಾಗಲೇ ರಷ್ಯಾ ಹಿಡಿತಕ್ಕೆ ಸಿಕ್ಕಿವೆ. ಹೀಗಾಗಿ ಈ ಜಾಗಗಳ ಅಭಿವೃದ್ಧಿಗೆ ರಷ್ಯಾ ಮುಂದಾಗಿರುವುದು ಉಕ್ರೇನ್‌ಗೆ ಮಾತ್ರವಲ್ಲ ಅಮೆರಿಕದ ನಿದ್ದೆಗೆಡಿಸಿದೆ.
2022ರ ಫೆಬ್ರವರಿ 24ರಂದು...
ನೋಡ ನೋಡುತ್ತಲೇ ಜಗತ್ತನ್ನು ಇಬ್ಭಾಗ ಮಾಡಿದ ರಷ್ಯಾ & ಉಕ್ರೇನ್ ಯುದ್ಧ ಇದೀಗ 20ನೇ ತಿಂಗಳಿಗೆ ಎಂಟ್ರಿ ಕೊಟ್ಟಿದೆ. 2022ರಲ್ಲಿ ಯುದ್ಧ ಶುರುವಾದಾಗ ಒಂದೆರಡು ವಾರವಷ್ಟೆ ಅಂತಾ ಜಗತ್ತೇ ಅಂದುಕೊಂಡಿತ್ತು. ಹೀಗೆ ರಷ್ಯಾ & ಉಕ್ರೇನ್ ಯುದ್ಧ ಬಹುಬೇಗ ನಿಲ್ಲುತ್ತದೆ ಅಂತಲೇ ಎಲ್ಲರೂ ಊಹಿಸಿದ್ದರು. ಆದ್ರೆ ನಡೆದಿರುವುದೇ ಬೇರೆ ಯುದ್ಧ ಭೀಕರತೆ ಹೇಗಿದೆ ಅಂದ್ರೆ ಇನ್ನೂ 10 ವರ್ಷ ಕಳೆದರೂ ಈ ಯುದ್ಧ ನಿಲ್ಲಲ್ಲ ಎಂಬ ಸ್ಥಿತಿ ಇದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ವಿರುದ್ಧ 2022ರ ಫೆಬ್ರವರಿ 24ರಂದು ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದರು.

ರಷ್ಯಾ VS ಉಕ್ರೇನ್ ಯುದ್ಧಕ್ಕೆ 19 ತಿಂಗಳು ತುಂಬಿದ್ದು 90 ತಿಂಗಳು ತುಂಬಿದರೂ ಈ ಯುದ್ಧ ಮುಗಿಯುವ ಲಕ್ಷಣ ಕಾಣ್ತಿಲ್ಲ. ಹೀಗಾಗಿ ಉಕ್ರೇನ್‌ನ ಲಕ್ಷಾಂತರ ಪ್ರಜೆಗಳು ತಮ್ಮ ತವರು ಬಿಟ್ಟು ಓಡಿ ಹೋಗಿದ್ದಾರೆ. ಅದ್ರಲ್ಲೂ ರಷ್ಯಾ ಜೊತೆ ಗಡಿ ಹಂಚಿಕೊಂಡ ಉಕ್ರೇನ್ ಪ್ರಾಂತ್ಯಗಳ ಜನರು ನಿತ್ಯವೂ ನರಳುತ್ತಿದ್ದಾರೆ. ಹೀಗಾಗಿ ಯುದ್ಧ ನಿಲ್ಲಿಸಿ ಎಂಬ ಕೂಗು ಕೂಡ ಜೋರಾಗಿದೆ. ಆದರೆ ಯುದ್ಧ ನಿಲ್ಲಿಸಲು ರಷ್ಯಾ ಹಾಗೂ ಉಕ್ರೇನ್ ಇಬ್ಬರೂ ತಯಾರಿಲ್ಲ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿಕೆ ಸಂಚಲನ ಸೃಷ್ಟಿಸಿದೆ.












Click it and Unblock the Notifications