ಉಕ್ರೇನ್ ಜೊತೆಗೆ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸದ ರಷ್ಯಾ?

ಎಲ್ಲಿ ನೋಡಿದರೂ ಬರೀ ಯುದ್ಧದ ಮಾತೇ ಕೇಳಿ ಬರುತ್ತಿದ್ದು, ಈ ತಿಕ್ಕಾಟದಲ್ಲಿ ಸಿಕ್ಕಾಪಟ್ಟೆ ಸಿಟ್ಟು ಕೂಡ ಬರುತ್ತಿದೆ. ಮನುಷ್ಯರು ಇದೇ ರೀತಿಯಾಗಿ ಯುದ್ಧ ಮಾಡುತ್ತಿದ್ದರೆ ಮುಂದಿನ ಪರಿಸ್ಥಿತಿ ಏನು? ಅನ್ನೋ ಚಿಂತೆ ಕೂಡ ಶುರುವಾಗಿದೆ. ಈ ಸಮಯದಲ್ಲೇ ಇಸ್ರೇಲ್ & ಇರಾನ್ ಕೂಡ ಬಡಿದಾಡುತ್ತಿದ್ದು, ಉಕ್ರೇನ್ & ರಷ್ಯಾ ನಡುವೆ ಕೂಡ ಘೋರ ಕಾಳಗದ ಕಥೆ ಮುಂದುವರಿದಿದೆ. ಇಷ್ಟೆಲ್ಲದರ ನಡುವೆ ಇದೀಗ ಉಕ್ರೇನ್ ಜೊತೆಗೆ ಯುದ್ಧ ನಿಲ್ಲಿಸಲು ಒಪ್ಪಿಗೆ ಸೂಚಿಸದ ರಷ್ಯಾ? ಹಾಗಾದ್ರೆ ಯುರೋಪ್ ದೇಶದಲ್ಲಿ ಘೋರ ಯುದ್ಧ ನಿಲ್ಲುತ್ತಾ?

ರಷ್ಯಾ & ಉಕ್ರೇನ್ ಯುದ್ಧ ಇನ್ನೇನು 3.5 ವರ್ಷ ಅಂದ್ರೆ ಮೂರುವರೆ ವರ್ಷ ಮುಗಿಸಿ 4ನೇ ವರ್ಷಕ್ಕೂ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದೆ. ರಷ್ಯಾ & ಉಕ್ರೇನ್ ಯುದ್ಧದ ಭೀಕರತೆಗೆ ಜಗತ್ತೇ ನಡುಗಿ ಹೋಗುತ್ತಿದ್ದು, ಒಂದೊಂದು ಕ್ಷಣ ಕೂಡ 3ನೇ ಮಹಾಯುದ್ಧದ ನರಕ ಕಣ್ಣ ಮುಂದೆ ಕಾಣಿಸುತ್ತಿದೆ. ಈಗಾಗಲೇ ಯುರೋಪ್ & ಅಮೆರಿಕದ ಜನರು ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ನರಳಾಡಿ ಹೋಗಿದ್ದಾರೆ. ಹೀಗಿದ್ದಾಗ, ಅಮೆರಿಕ ಅಧ್ಯಕ್ಷ ಟ್ರಂಪ್ ಪದೇ ಪದೇ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಮಾತನಾಡಿ ಚರ್ಚೆ ಮಾಡುತ್ತಿದ್ದು, ಫೋನ್ ಮೂಲಕವೇ ಈ ಯುದ್ಧಕ್ಕೆ ಕೊನೇ ಮೊಳೆ ಹೊಡೆಯಲು ಸಜ್ಜಾಗಿದ್ದಾರೆ.

Russia May Stop The War Against Ukraine Very Soon

ಉಕ್ರೇನ್ ಯುದ್ಧಕ್ಕೆ ಕೊನೇ ಮೊಳೆ?

ಹೌದು, ಈಗಿನ ಪರಿಸ್ಥಿತಿಯಲ್ಲಿ ರಷ್ಯಾ ಕೂಡ ಯುದ್ಧ ಮುಂದುವರಿಸುವ ಸಾಧ್ಯತೆ ಕಡಿಮೆ ಆಗುತ್ತಿದೆ. ಯಾಕಂದ್ರೆ ಇದೇ ಯುದ್ಧದ ನಂತರ ಸಾಕಷ್ಟು ಸಂಪತ್ತು ಕಳೆದುಕೊಂಡು ಒದ್ದಾಡಿ ಹೋಗಿದೆ ರಷ್ಯಾ. ಇದರ ಜೊತೆಗೆ ಅಮೆರಿಕ ಕೂಡ, ರಷ್ಯಾ ಮೇಲೆ ಒತ್ತಡ ಹೇರುತ್ತಾ ಯುದ್ಧ ನಿಲ್ಲಿಸಲು ಮನವಿ ಮಾಡುತ್ತಿದೆ. ಹೀಗಾಗಿ ಆದಷ್ಟು ಬೇಗನೇ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಹಾಗೂ ಈ ಯುದ್ಧ ನಿಂತರೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅದರ ಕ್ರೆಡಿಟ್ ಪಡೆಯುವ ಸಾಧ್ಯತೆ ಕೂಡ ದಟ್ಟವಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+