Ukraine War: ಡೊನಾಲ್ಡ್ ಟ್ರಂಪ್ & ತಂಡಕ್ಕೆ ತಿರುಗೇಟು ನೀಡಿದ ಪುಟಿನ್ ಪಡೆ!
ಅಮೆರಿಕ ಸದಾ ಬೇರೆ ಬೇರೆ ದೇಶಗಳ ವಿಚಾರದಲ್ಲಿ ತಲೆ ಹಾಕುತ್ತಾ, ಕಿರಿಕ್ ಮಾಡುತ್ತಾ ಭಾರಿ ದೊಡ್ಡ ಅವಾಂತರ ಸೃಷ್ಟಿ ಮಾಡುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ಉಕ್ರೇನ್ & ರಷ್ಯಾ ಯುದ್ಧ ವಿಚಾರದಲ್ಲಿ ಅಮೆರಿಕ ಮಾಡಿರುವ ಎಡವಟ್ಟುಗಳ ಸರಣಿ ಒಂದಾ, ಎರಡಾ? ಅಂತಾ ಚರ್ಚೆ ಕೂಡ ಜೋರಾಗಿದೆ. ಇಂತಹ ಸಮಯದಲ್ಲೇ ರಷ್ಯಾ ಇದೀಗ ಸರಿಯಾಗಿ ತಿರುಗೇಟನ್ನು ಕೂಡ ನೀಡಿದೆ!
ಹೌದು, ಉಕ್ರೇನ್ ವಿರುದ್ಧ ಇದೀಗ ಡ್ರೋನ್ & ಮಿಸೈಲ್ ಬಳಸಿ ರಷ್ಯಾ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಒಂದು ಬಲವಾದ ಅನುಮಾನ ಕಾಡುತ್ತದೆ. ರಷ್ಯಾ ಸೇನೆ ಮತ್ತೆ ಏನಾದರೂ ವಿನಾಶ ಸೃಷ್ಟಿ ಮಾಡಬಹುದಾ? ಅನ್ನೋ ಅನುಮಾನ ಕೂಡ ಮೂಡುತ್ತದೆ. ಯಾಕೆ ಅಂದ್ರೆ ರಷ್ಯಾ ಕೈಲಿ ಒದೆ ತಿನ್ನುತ್ತಿದ್ದ ಉಕ್ರೇನ್ ಆಗಾಗ ತಿರುಗೇಟು ಕೊಡುತ್ತಿತ್ತು, ಆದರೆ ಈಗ ಫುಲ್ ಸೈಲೆಂಟ್ ಆಗಿರುವ ರೀತಿ ನೋಡಿದರೆ ಭವಿಷ್ಯದಲ್ಲಿ ಏನಾದರೂ ಪರಮಾಣು ಯುದ್ಧವನ್ನ ನಡೆಸುತ್ತಾರಾ? ಎಂಬ ಭಯ ಮೂಡಿರುವ ಸಮಯದಲ್ಲೇ ಅಮೆರಿಕ & ರಷ್ಯಾ ನಡುವೆ ಈಗ ಕಿರಿಕ್ ಜೋರಾಗಿದೆ.

ದೊಡ್ಡಣ್ಣಗೆ ನೀತಿ ಪಾಠ ಮಾಡಿದ ರಷ್ಯಾ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಸ್ತಾಗಿ ಹೋಗಿದ್ದಾರೆ, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಆಗದೆ ಈಗ ನರಳಿ ನರಳೀ ಕೂತಿದ್ದಾರೆ. ಹೀಗಾಗಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನ ಹುಚ್ಚ ಎನ್ನುವ ರೀತಿಯಾಗಿ ಟ್ರಂಪ್ ಹೇಳಿದ್ದರು ಎಂಬ ಆರೋಪ ಕೇಳಿ ಬಂದು ದೊಡ್ಡ ವಿವಾದ ಸೃಷ್ಟಿ ಆಗಿತ್ತು. ಇಷ್ಟೆಲ್ಲದರ ನಡುವೆ ಇದೀಗ ಅಮೆರಿಕಗೆ ತಿರುಗೇಟು ಕೂಡ ನೀಡಿರುವ ರಷ್ಯಾ, ನೀತಿಪಾಠ ಮಾಡಿದೆ. ಪುಟಿನ್ ಅವರು ದೇಶದ ಬಗ್ಗೆ ಚಿಂತೆ ಮಾಡ್ತಾರೆ, ಇದೇ ಕಾರಣಕ್ಕೆ ಆಲೋಚನೆ ಮಾಡಿ ಅವರು ಮುಂದೆ ನುಗ್ಗುತ್ತಾರೆ ಎಂದಿದ್ದಾರೆ ರಷ್ಯಾ ದೇಶದ ಅಧಿಕಾರಿಗಳು. ಈ ಮೂಲಕ ರಷ್ಯಾ & ಅಮೆರಿಕ ನಡುವೆ ಮತ್ತೆ ಕಿರಿಕ್ ಜೋರಾಗುವ ಭಯ ಕೂಡ ಆವರಿಸಿದೆ.












Click it and Unblock the Notifications