ರಷ್ಯಾದಲ್ಲಿ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ ವೇಳೆ 400 ಜನರು...
ರಷ್ಯಾ ಕೊತ ಕೊತ ಕುದಿಯುತ್ತಿದೆ, ಉಕ್ರೇನ್ ವಿರುದ್ಧ ಯುದ್ಧ ಶುರುವಾದ ನಂತರ ಇಲ್ಲಿ ನೆಮ್ಮದಿಯೇ ಇಲ್ಲ ಎನ್ನುವಂತಾಗಿದೆ. ಹೀಗಿದ್ದಾಗಲೇ ರಷ್ಯಾದಲ್ಲಿ ದಿಢೀರ್ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಅದ್ರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಶತ್ರುವಾದ ವಿರೋಧ ಪಕ್ಷದ ನಾಯಕ ನವಲ್ನಿ ಮೃತಪಟ್ಟ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗೆ ನವಲ್ನಿ ಪರ ಪ್ರತಿಭಟನೆ ನಡೆಸುವಾಗ ಹಿಂಸಾಚಾರ ಭುಗಿಲೆದ್ದು 400 ಜನರು...
ಹೌದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ದೊಡ್ಡ ವಿರೋಧಿ ಅಂತ ಅಲೆಕ್ಸಿ ನವಲ್ನಿ ಅವ್ರನ್ನ ಗುರುತಿಸಲಾಗಿತ್ತು. ಅಲೆಕ್ಸಿ ನವಲ್ನಿ ವಿರುದ್ಧ ವಿಧ್ವಂಸಕ ಕೃತ್ಯ ಆರೋಪ ಹೊರಿಸಿ, 19 ವರ್ಷ ಕಾರಾಗೃಹ ಶಿಕ್ಷೆ ಕೂಡ ವಿಧಿಸಲಾಗಿತ್ತು. ಶಿಕ್ಷೆಗೆ ಗುರಿಯಾಗಿದ್ದ ಅಲೆಕ್ಸಿ ನವಲ್ನಿ, ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಬೇರೆ ಜೈಲಿಗೆ ಶಿಫ್ಟ್ ಆಗಿದ್ದರು. ಇನ್ನೂ ರಷ್ಯಾದ ವ್ಲಾದಿಮಿರ್ ಪ್ರಾಂತ್ಯದ ಕೇಂದ್ರೀಯ ಕಾರಾಗೃಹದಿಂದ ಭಾರಿ ಭದ್ರತೆ ಇರುವ ಕಾರಾಗೃಹಕ್ಕೆ ಪುಟಿನ್ ಶತ್ರು ನವಲ್ನಿಯನ್ನ ಶಿಫ್ಟ್ ಮಾಡಲಾಗಿತ್ತು. ಈಗ ನವಲ್ನಿ ಜೀವ ಹೋಗಿಬಿಟ್ಟಿದೆ. ಹೀಗಾಗಿಯೇ ರಷ್ಯಾದಲ್ಲಿ ಹಿಂಸೆ, ಪ್ರತಿಭಟನೆ ಶುರುವಾಗಿದೆ.

ಸಂತಾಪ ಸೂಚಿಸಲು ಬಂದ 400 ಜನರು...
ಅಂದಹಾಗೆ ರಷ್ಯಾದ ಅಲೆಕ್ಸಿ ನವಲ್ನಿಗೆ ಸಂತಾಪ ಸೂಚಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮ, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ವಿಕೋಪಕ್ಕೆ ತಿರುಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿ ಪಡೆ ಅಲರ್ಟ್ ಆಗಿದೆ ಎಂಬ ಆರೋಪಗಳ ನಡುವೆ, ನವಲ್ನಿ ಪರ ನಡೆಯುತ್ತಿದ್ದ ಹೋರಾಟವೇ ಹಿಂಸೆಗೆ ತಿರುಗಿದೆ. ಈ ಸಮಯದಲ್ಲಿ ಸುಮಾರು 400 ಮಂದಿಯನ್ನು ಪೊಲೀಸರು ಜೈಲಿಗೂ ಹಾಕಿದ್ದು, ಮಾನವ ಹಕ್ಕುಗಳ ಹೋರಾಟ ಸಂಸ್ಥೆ ಆಕ್ರೋಶ ಹೊರಹಾಕಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳು ಸೇರಿ 400 ಜನರನ್ನು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪೊಲೀಸ್ ಪಡೆ ವಶಕ್ಕೆ ಪಡೆದಿದೆ.
ಚುನಾವಣೆಗೆ ಮೊದಲು ದೊಡ್ಡ ಆಘಾತ
ರಷ್ಯಾ ಚುನಾವಣೆ ನಡೆಯುವುದಕ್ಕೆ ಒಂದು ತಿಂಗಳ ಮೊದಲು, ಹೀಗೆ ಅಲೆಕ್ಸಿ ಮೃತಪಟ್ಟಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪುಟಿನ್ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದರು. ಹೀಗೆ ಪುಟಿನ್ ಅವರು ಅಧ್ಯಕ್ಷರಾಗಿ ಪುನರಾಯ್ಕೆ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಅಲೆಕ್ಸಿ ನವಲ್ನಿ ಮೃತಪಟ್ಟಿರುವುದು ಭಾರಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.

ಜೈಲಿನಲ್ಲೇ ಜೀವ ಬಿಟ್ಟ ನವಲ್ನಿ
47 ವರ್ಷ ವಯಸ್ಸಿನ, ರಷ್ಯಾ ವಿರೋಧ ಪಕ್ಷದ ನಾಯಕ ನವಲ್ನಿ ಜೈಲಿನಲ್ಲೇ ಜೀವ ಬಿಟ್ಟಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಗಟ್ಟಿಯಾಗಿ, ನಿಂತು ಹೋರಾಡಿದ್ದ ಕೆಲವೆ ನಾಯಕರ ಪೈಕಿ ಅಲೆಕ್ಸಿ ನವಲ್ನಿ ಕೂಡ ಒಬ್ಬರು ಎಂಬುದು ಮೃತ ನವಲ್ನಿ ಅವರ ಅಭಿಮಾನಿಗಳ ಮಾತು. ಹೀಗಿದ್ದಾಗ ಪುಟಿನ್ ಅವರ ಆಡಳಿತದ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುತ್ತಿದ್ದ & ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ಈಗ ಮೃತಪಟ್ಟಿದ್ದು ಸಂಚಲನ ಸೃಷ್ಟಿಸಿದೆ.
ಒಟ್ನಲ್ಲಿ ರಷ್ಯಾ ಘಟನೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಹೀಗಾಗಿ ರಷ್ಯಾ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರಷ್ಯಾದ ಪರಿಸ್ಥಿತಿ ಕೈಮೀರಿ ಹೋಗುವ ಅಪಾಯ ಇದೆ. ಅದರಲ್ಲೂ ರಷ್ಯಾದ ಸಾರ್ವತ್ರಿಕ ಚುನಾವಣೆ ಸಮಯಕ್ಕೆ ಈಗ ರಷ್ಯಾ ಭದ್ರತಾ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ, ಹಾಗೇ ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆನ ಮತ್ತಷ್ಟು ಹೆಚ್ಚಿಸಿದ್ದಾರೆ. ಪ್ರತಿಭಟನೆಗಳು ಹಾಗೂ ಹೋರಾಟ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಹೀಗಾಗಿಯೇ ಮುಂದೆ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ? ಅಂತ ಇಡೀ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ.












Click it and Unblock the Notifications